ಬೀದರ್ (ಜಿಲ್ಲೆ)

ಔರಾದ್​ ತಾಲೂಕಿನ ಶೆಂಬೆಳ್ಳಿ ಗ್ರಾಪಂ ವ್ಯಾಪ್ತಿಯ ಚಟ್ನಾಳದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್​ ಏಣಿ ಹತ್ತಿ  ನೀರು ಸಂಗ್ರಹಣಾ ಟ್ಯಾಂಕ್​ ಒಳಭಾಗದ ಸ್ವಚ್ಛತೆ ವೀಕ್ಷಿಸಿದರು. ತಾಪಂ ಇಒ ಕಿರಣ ಪಾಟೀಲ್​, ಎಡಿ ಶಿವಕುಮಾರ ಘಾಟೆ, ಡಾ.ಗೌತಮ್​ ಅರಳಿ, ಎಇಇ ಮಾರುತಿ ರಾಠೋಡ, ಟಿಎಚ್​ಒ ಡಾ.ಅನಿಲಕುಮಾರ ಎಕಲಾರೆ, ಎಡಿ ಉತ್ತಮ, ತುಕಾರಾಮ ಇತರರಿದ್ದರು.
bidar
ಬಸವಕಲ್ಯಾಣದ  ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಡಾ. ರಾಮನಗೌಡ ನಾಡಗೌಡ ಹಾಗೂ ಡಾ.ತೇಜಸ್ವಿ ಕೆ. ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ,  ಡಾ.ಸಿ.ವೀರಣ್ಣ, ಡಾ.ಅಮರನಾಥ ಸೋಲಪುರೆ, ಡಾ.ಬಸವರಾಜ ಎವಲೆ, ರವೀಂದ್ರ ಕೊಳಕುರ, ಶಿವಕುಮಾರ ಬಿರಾದಾರ, ಆಕಾಶ ಖಂಡಾಳೆ, ವೃಶಾಲಿ ನಾಗರಾಳೆ ಇತರರಿದ್ದರು.
ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ನಿವೃತ್ತ ಐಎಎಸ್​ ಅಧಿಕಾರಿ ಡಾ.ಬಾಬುರಾವ ಮುಡಬಿ ಉದ್ಘಾಟಿಸಿದರು. ಸಿಪಿಐ ಅಲಿಸಾಬ್​, ಡಾ.ಪ್ರಹ್ಲಾದ ಚೆಂಗಟೆ ಇತರರಿದ್ದರು.
ಹುಮನಾಬಾದ್​ನಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಗುಂಡುರಡ್ಡಿ ಕಮಲಾಪುರೆ, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಕಾರಬರಿ, ವೀರರಡ್ಡಿ ಪಾಟೀಲ, ಖಾಸಿಂ ಅಲಿ ಇತರರಿದ್ದರು.
ಭಾಲ್ಕಿ ಪಟ್ಟಣದ ದೇವಿನಗರ ಭವಾನಿ ಮಂದಿರದಲ್ಲಿ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ  ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ರೇಖಾ ಮಹಾಜನ, ಸೋಮನಾಥಪ್ಪ ಅಸ್ಟೂರೆ, ಶಿವಾನಂದ ಗುಂದಗೆ, ಗಣಪತಿ ಭೂರೆ, ದಿಲೀಪ ಢವಳೆ ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ವಿಬಿ-&ಜಿ- ರಾಮ್​- ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ  ಭೇಟಿ ನೀಡಿ ಪರಿಶೀಲಿಸಿದರು. ಇಒ ರಮೇಶ ಸುಲ್ಪಿ, ಎಡಿ.ಮಹ್ಮದ್​ ಸಲೀಂ, ಪಿಡಿಒ ಮಹ್ಮದ್​ ಪಾಶಾ ಇತರರಿದ್ದರು.
ಹುಲಸೂರಿನಲ್ಲಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಜನ್ಮದಿನದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಡಾ.ಶಿವಾನಂದ ಸ್ವಾಮೀಜಿ, ಠಾಣಾಕುಶುನೂರ ಶ್ರೀ, ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಆನಂದ ದೇವಪ್ಪ, ಬಸವರಾಜ ಧನ್ನೂರ, ಬಾಬು ವಾಲಿ, ದೀಪಾರಾಣಿ ಭೋಸ್ಲೆ, ಲತಾ ಹಾರಕೂಡೆ, ರೂಪಾವತಿ ಜಾಧವ್​ ಇತರರಿದ್ದರು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net