

ಬಸವಕಲ್ಯಾಣ: ಮಾನವ ಜಗತ್ತನ್ನು ಪಲ್ಲಟಗೊಳಿಸುತ್ತಿರುವ ಆಧುನಿಕ ತಂತ್ರಜ್ಞಾನದ ಶಕ್ತಿ ಮತ್ತು ಮಿತಿಗಳ ಕುರಿತು ವಿಮರ್ಶೆ ನಡೆಯಬೇಕಾದ ಅಗತ್ಯವಿದ್ದು, ಯಾವುದಕ್ಕೆ ತಂತ್ರಜ್ಞಾನದ ಬಳಕೆಯಾಗುತ್ತಿದೆ ಎಂಬ ಯೋಚನೆ ಮತ್ತು ವಿವೇಕ ಇಂದು ಹೆಚ್ಚು ಅಗತ್ಯವಾಗಿದೆ ಎಂದು ಎಸ್ಎಸ್ಕೆಬಿ ಕಾಲೇಜು ಪ್ರಾಚಾರ್ಯ ಡಾ.ರಮೇಶ ಕೆ.ಬಿ. ಅಭಿಪ್ರಾಯಪಟ್ಟರು.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ಅರಿವಿನ ಪಯಣ&2026 ಶೈಕ್ಷಣಿಕ ಚಟವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಬಳಕೆ ಜ್ಞಾನ, ಅಭಿವೃದ್ಧಿ ಮತ್ತು ಕೌಶಲದ ಬೆಳವಣಿಗೆಗೆ ಸಹಾಯಕವಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಚಾಟ್ ಜಿಪಿಟಿ ಮೊದಲಾದ ತಂತ್ರಜ್ಞಾನ ಮಾಹಿತಿ ಜ್ಞಾನಕ್ಕಾಗಿ ಬಳಕೆಯಾಗಲಿ ಮನರಂಜನೆಗಲ್ಲ ಎಂದರು.
ಸಮಯಪ್ರಜ್ಞೆ, ಶಿಸ್ತು, ಕ್ರಿಯಾಶೀಲತೆ, ಬದ್ಧತೆ ಮತ್ತು ಸತತ ಅಧ್ಯಯನ ಅಭಿವೃದ್ಧಿಗೆ ಮಾರ್ಗವಾಗಿದೆ. ಮೌಲ್ಯಗಳು, ಹಿರಿಯರ ಬಗೆಗಿನ ಗೌರವ, ಸಕಾರಾತ್ಮಕ ಆಲೋಚನೆಗಳು ವಿದ್ಯಾರ್ಥಿಗಳ ಇಡೀ ವ್ಯಕ್ತಿತ್ವವನ್ನು ರೂಪಿಸುವ ಅಂಶಗಳಾಗಿವೆ ಎಂದು ಹೇಳಿದರು.
ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು. ಒಬ್ಬರು ಮತ್ತೊಬ್ಬರನ್ನು ಪರಸ್ಪರ ಗೌರವಿಸುವ ಗುಣ ಬೆಳೆಯಬೇಕು. ಕಲಿಕೆಯ ಜತೆಹತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ಕಾಳಜಿ ಇಂದಿನ ಯುವಕರಲ್ಲಿ ಬರಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಬದುಕಿನ ಸಹಜತೆಗಿಂತ ಧಾವಂತ, ಹಪಾಹಪಿತನಗಳು ಹೆಚ್ಚು ಮಾಡಿ ವ್ಯವಧಾನ, ಆಲೋಚನಾ ಕ್ರಮ ಮಾಯೆವಾಗಿಸುವ ಶಿಕ್ಷಣ ಪದ್ಧತಿ ಅಪಾಯಕಾರಿಯಾಗಿದೆ. ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ, ವಿವೇಕ, ಅಂತಃ ಕರಣ ಬೆಳೆಸುವ ಅರಿವಿನ ದಾರಿ ಕಂಡುಕೊಳ್ಳಬೇಕು ಎಂದರು.
ಬಿಡಿಪಿಸಿ ನಿರ್ದೇಶಕಿ ಪುಷ್ಪಾವತಿ ಮಾಮಾ, ನಿವೃತ್ತ ಪ್ರಾಧ್ಯಾಪಕ ಅಶೋಕರಡ್ಡಿ ಗದಲೇಗಾಂವ ಮಾತನಾಡಿದರು. ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ಸಹಕಾರ್ಯದರ್ಶಿ ಸುನಿಲ ರಾಯವಾಡೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಪ್ರಾಚಾಯೆರ್ ಡಾ.ಶಾಂತಲಾ ಪಾಟೀಲ, ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ಪವನ ಪಾಟೀಲ, ವಿವೇಕಾನಂದ ಶಿಂಧೆ, ಪ್ರಿಯಾ ಚವ್ಹಾಣ್, ನಾಗವೇಣಿ ಬಿರಾದಾರ, ಶೀತಲ ರಡ್ಡಿ, ಡಾ.ಬಸವರಾಜ ಖಂಡಾಳೆ, ಸನತ್ ರಡ್ಡಿ, ಸೌಮ್ಯಾ ಜೋಶಿ, ಸಚಿನ್ ಬಿಡುವೆ, ಐಶ್ವರ್ಯಾ ಖರೋಣೆ, ನಾಗರಾಜ ನಾಸೆ, ಸುಮಾ, ಎಂಡಿ ಜಬಿ, ಸಂಗೀತಾ ಮಹಾಗಾವೆ, ರೋಷನ್ ಬಿ, ಮಯೂರಿ ಪಾಟೀಲ, ಗಂಗಾಧರ ಸಾಲಿಮಠ ಇದ್ದರು.
ನಿವೃತ್ತ ಪ್ರಾಧ್ಯಾಪಕ ಅಶೋಕ ರಡ್ಡಿ ಗದಲೇಗಾಂವ, ಗಾಯಕರಾದ ವೀರೇಶ ವಸ್ತ್ರದ, ಆಕಾಶ ಬಾಲಕಿಲೆ, ಕೃಷ್ಣಾ ಗೌಳಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜ್ಯೋತಿ ತೂಗಾವೆ ನಿರೂಪಣೆ ಮಾಡಿ ವಂದಿಸಿದರು. ಆಕಾಶ ಬಾಲಕಿಲೆ ಮತ್ತು ವೀರೇಶ ಸ್ವಾಮಿ ವಸ್ತ್ರದ ಅವರಿಂದ ಹಾಡುಗಾರಿಕೆ ನೆರವೇರಿತು.