• ಸಮಸ್ತ ಕರ್ನಾಟಕ
  • ದೇಶ
  • ವಿದೇಶ
  • ಪೇಟೆ
  • ಕ್ರೀಡೆ

ಅಪಚಾರವಾಗದಂತೆ ನಡೆದುಕೊಂಡು ಶ್ರೀಗಳಿಗೆ ಗೌರವ ಸಲ್ಲಿಸಿದ ನಾಡಿನ ಜನತೆಗೆ ಧನ್ಯವಾದ: ಸಿಎಂ ಕುಮಾರಸ್ವಾಮಿ

ತುಮಕೂರು: ಶಿವೈಕ್ಯರಾದ ಪರಮಪೂಜ್ಯರು ಧಾರ್ಮಿಕ, ಶಿಕ್ಷಣ ಹಾಗೂ ರೈತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಮಂಗಳವಾರ ಶ್ರೀಗಳ ಲಿಂಗ ಶರೀರ ಕ್ರಿಯಾಸಮಾಧಿಗೂ ಮುನ್ನ ಸಕಲ ಸರ್ಕಾರಿ…

ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕೆ ಶಿಫಾರಸು ಮಾಡುವಷ್ಟು ದೊಡ್ಡವನಲ್ಲ: ಮುರಳೀಧರ ರಾವ್‌

ತುಮಕೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಹೆಸರಾಗಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಎಲ್ಲೆಡೆಯಿಂದ ಅವರಿಗೆ ಭಾರತರತ್ನ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಶ್ರೀಗಳಿಗೆ ಭಾರತರತ್ನ…

4ಕ್ಕೆ ಅಂತಿಮ ದರ್ಶನ ಮುಕ್ತಾಯ, 5ಕ್ಕೆ ಗದ್ದುಗೆ ಬಳಿಗೆ ಪಾರ್ಥಿವ ಶರೀರ: ಪರಮೇಶ್ವರ್‌

ತುಮಕೂರು: ಕಿರಿಯ ಶ್ರೀ ಮತ್ತು ಸುತ್ತೂರು ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಸಂಜೆ 4 ಗಂಟೆಗೆ ಶ್ರೀಗಳ ಅಂತಿಮ ದರ್ಶನ ಮುಕ್ತಾಯವಾಗುತ್ತದೆ. ಸಂಜೆ 5 ಗಂಟೆಗೆ ಇಲ್ಲಿಂದ ಗದ್ದುಗೆ ಬಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ ಎಂದು ಡಿಸಿಎಂ…

ಪ್ರವಾಸಿ ಭಾರತ್‌ ದಿನದಲ್ಲೂ ಸಿದ್ಧಗಂಗಾಶ್ರೀ ನೆನೆದ ಪ್ರಧಾನಿ ಮೋದಿ

ವಾರಾಣಸಿ: ಪ್ರವಾಸಿ ಭಾರತ್‌ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನತಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಮತ್ತೊಮ್ಮೆ ಸಂತಾಪ ಸೂಚಿಸಿದರು. ಎಲ್ಲರಿಗೂ ಸ್ವಾಗತ ಕೋರಿದ…

ನಡೆದಾಡುವ ದೇವರ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟರು

ತುಮಕೂರು: ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕಾಗಿ ಸ್ಯಾಂಡಲ್‌ವುಡ್‌ನ ನಟರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು…

ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ತಿರುವನಂತಪುರ: ಶಬರಿಮಲೆ ಪ್ರವೇಶ ಮಾಡಿದ್ದ 39 ವರ್ಷದ ಕನಕದುರ್ಗಾ ಈಗ ಮನೆಯಿಂದಲೇ ಹೊರಹಾಕಲ್ಪಟ್ಟಿದ್ದು ಆಕೆಗೆ ಸರ್ಕಾರದ ಮನೆಯಲ್ಲಿ ವಾಸಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕನಕದುರ್ಗಾ ಇಬ್ಬರು ಮಕ್ಕಳ ತಾಯಿ. ಇತ್ತೀಚೆಗೆ ಶಬರಿಮಲೆ ಪ್ರವೇಶ ಮಾಡಿ ಭಕ್ತರ…

ಅತ್ಯಾಚಾರ ಪ್ರಕರಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದ

ಮುಂಬೈ: ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ತನ್ನದೇ ಸುಳ್ಳು ಮರಣ ಪ್ರಮಾಣಪತ್ರ ಸಲ್ಲಿಸಿದ್ದಾನೆಂದು ಹೇಳಲಾದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ವರದಿಯಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ…

ಐಪಿಎಸ್ ಅಧಿಕಾರಿ ಸೋದರ ಸೇರಿ ಮೂವರು ಉಗ್ರರು ಯೋಧರ ಗುಂಡಿಗೆ ಬಲಿ

ಶ್ರೀನಗರ: ಶಾಪಿಯಾನಾ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಹತ್ಯೆಯಾದ ಉಗ್ರರಲ್ಲಿ ಓರ್ವ ಐಪಿಎಸ್​ ಅಧಿಕಾರಿಯೊಬ್ಬರ ಸಹೋದರ ಎನ್ನಲಾಗಿದೆ. ಉಗ್ರರು ಶಾಪಿಯಾನಾದ ತೋಟವೊಂದರ ಸಮೀಪದ ಅಂಡರ್​ಗ್ರೌಂಡ್​ ಬಂಕರ್ ಬಳಿ ಅಡಗಿಕೊಂಡಿದ್ದರು.…

ಮೇಕೆದಾಟು ಯೋಜನೆ ಸಮಗ್ರ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ

ಚೆನ್ನೈ: ಮೇಕೆದಾಟು ಅಣೆಕಟ್ಟಿಗೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರ ಸಮಗ್ರ ಯೋಜನಾ ವರದಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ ಜ.18ರಂದು ಸಲ್ಲಿಸಿದೆ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಪ್ಪಿಗೆ ನೀಡಿತ್ತು. ಹಾಗೇ ಕೇಂದ್ರ ಜಲ ಆಯೋಗ…

ಅಕ್ರಮ ಸಂಬಂಧದ ಶಂಕೆ: ಪತಿಯ ಜನನಾಂಗವನ್ನೇ ಕತ್ತರಿಸಿದ ಮಹಿಳೆ

ನವದೆಹಲಿ: ಅಕ್ರಮ ವಿವಾಹೇತರ ಸಂಬಂಧ ಹೊಂದಿರುವ ಶಂಕೆ ಮೇರೆಗೆ ಮಹಿಳೆಯೊಬ್ಬಳು ಪತಿಯ ಜನನಾಂಗಕ್ಕೆ ಕತ್ತರಿ ಹಾಕಿರುವ ಘಟನೆ ಒಡಿಶಾದಿಂದ ವರದಿಯಾಗಿದೆ. ಭಾನುವಾರ ಘಟನೆ ನಡೆದಿದ್ದು, ಸದ್ಯ ಗಂಭೀರವಾಗಿರುವ ಪತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಬಾರಂಗ್‌ಪುರ…

ಚಂದ್ರಗ್ರಹಣ ವೀಕ್ಷಿಸಲು ರಸ್ತೆಯಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಪೊಲೀಸ್​ ಅಧಿಕಾರಿ

ಫ್ಲೋರಿಡಾ: ಚಂದ್ರ ಗ್ರಹಣ ಕಣ್ತುಂಬಿಕೊಳ್ಳಲು ರಸ್ತೆ ಮೇಲೆ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸ್​ ಅಧಿಕಾರಿಯೊಬ್ಬರು ಕಾರು ಹರಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ಮಂಗಳವಾರ ವರದಿಯಾಗಿದೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದೇ ಅಲ್ಲಿಯೇ ಬಿಟ್ಟು…

113 ವರ್ಷದ ಹಿರಿಯಜ್ಜ ನಿಧನ

ಟೋಕಿಯೊ : ವಿಶ್ವದ ಅತಿ ಹಿರಿಯ ಪುರುಷ ಎಂಬ ಹೆಗ್ಗಳಿಕೆಯ 113 ವರ್ಷದ ಮಸಾಜೊ ನೊನಾಕಾ ಭಾನುವಾರ ನಿಧನರಾದರು. ಜಪಾನ್​ನ ಉತ್ತರ ಭಾಗದ ದ್ವೀಪ ಹೊಕ್ಕಾಯಿಡೊದಲ್ಲಿನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗ ಅವರು ಮೃತಪಟ್ಟರು ಎಂದು…

ಮೆಕ್ಸಿಕೊದಲ್ಲಿ ಪೈಪ್​ಲೈನ್ ಸ್ಫೋಟಕ್ಕೆ 73 ಸಾವು

ಲ್ಲುಹೀಲ್ಪಾನ್: ಮೆಕ್ಸಿಕೊ ನಗರದ ಉತ್ತರ ಭಾಗದಲ್ಲಿ ಇಂಧನ ಸರಬರಾಜು ಪೈಪ್​ಲೈನ್​ಗೆ ಕನ್ನಹಾಕಿದ ಪರಿಣಾಮ ಸ್ಫೋಟ ಸಂಭವಿಸಿ 73 ಜನರು ಮೃತಪಟ್ಟಿದ್ದಾರೆ. ಸುಮಾರು 74 ಜನರಿಗೆ ಗಾಯವಾಗಿದೆ. ಗ್ಯಾಸೋಲಿನ್ ಪೂರೈಕೆ ಮಾಡಲಾಗುತ್ತಿದ್ದ ಈ ಪೈಪ್​ಗಳಿಗೆ ಸ್ಥಳೀಯರು…

ಹೊಸನೀರು ಬಂದಾಗ!

‘ಹೊಸನೀರು ಬಂದು ಹಳೇನೀರನ್ನು ಕೊಚ್ಕೊಂಡು ಹೋಯ್ತು’ ಎಂಬ ಜಾಣನುಡಿ ಎಲ್ಲ ಕಾಲಕ್ಕೂ ಅನ್ವಯವಾಗುವ ಕಹಿಸತ್ಯ. ಸಂಪರ್ಕಕ್ರಾಂತಿಯ ಹರಿಕಾರನೆಂದು ಜಂಬ ಕೊಚ್ಚಿಕೊಳ್ಳುವ ದೂರವಾಣಿ ಸಾಧನವು ಇದರ ತೆಕ್ಕೆಯಿಂದ ತಪ್ಪಿಸಿಕೊಳ್ಳಲಾದೀತೇ?!! ಬೆರಳಿಟ್ಟು ತಿರುಗಿಸುವ ವೃತ್ತಾಕಾರದ ಡಯಲ್ ಹೊಂದಿರುವ…

ಪಾಕ್​ನಿಂದ ಲಕ್ಷ ಕೆಜಿ ತಲೆಗೂದಲು ರಫ್ತು!

ಇಸ್ಲಾಮಾಬಾದ್: ಪಾಕಿಸ್ತಾನ ಕಳೆದ ಐದು ವರ್ಷಗಳಿಂದ ಚೀನಾಕ್ಕೆ 1,05,461 ಕೆ.ಜಿ. ತಲೆಗೂದಲನ್ನು ರಫ್ತು ಮಾಡಿದೆ. ಇದರಿಂದ 1.84 ಕೋಟಿ ರೂಪಾಯಿಗೂ (1.32 ಲಕ್ಷ ಡಾಲರ್- ಭಾರತದ ಕರೆನ್ಸಿಯಲ್ಲಿ -ಠಿ; 94 ಲಕ್ಷಕ್ಕೂ ಹೆಚ್ಚು) ಹೆಚ್ಚಿನ…

ನಿಲ್ಲದ ದರ ಏರಿಕೆ: ಪ್ರಮುಖ ನಗರಗಳ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ?

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ ಆರನೇ ದಿನ ಮಂಗಳವಾರವು ಏರಿಕೆಯಾಗಿದ್ದು, ದರ ಪರಿಷ್ಕರಣೆ ನಂತರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪೈಸೆಗಳಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಲೀಟರ್‌…

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ನವದೆಹಲಿ: ತೈಲ ದರ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 17ರಿಂದ 18 ಪೈಸೆ ಮತ್ತು ಡೀಸೆಲ್​ಗೆ 19ರಿಂದ 21 ಪೈಸೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ. 3 ಏರಿಕೆಯಾಗಿದ್ದರೆ,…

ವೈಬ್ರಂಟ್ ಗುಜರಾತ್​ಗೆ ಚಾಲನೆ

ಗಾಂಧಿನಗರ: ಭಾರತ ಕಳೆದ 4 ವರ್ಷಗಳಲ್ಲಿ ವಿಶ್ವಬ್ಯಾಂಕ್​ನ ಜಾಗತಿಕ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 65 ಸ್ಥಾನ ಏರಿಕೆ ಕಂಡಿದೆ. ನಾವು ಅಗ್ರ 50 ದೇಶಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಬೇಕಿದೆ. ಈ ಕುರಿತು ಸರ್ಕಾರ ಹೆಚ್ಚಿನ…

ಇ-ಕಾಮರ್ಸ್​ಗೆ ರಿಲಯನ್ಸ್

ಸೂರತ್: ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಹೊಸ ಇ-ಕಾಮರ್ಸ್ ಕಂಪನಿ ಆರಂಭಿಸುವುದಾಗಿ ಹೇಳಿದ್ದಾರೆ. ಗುಜರಾತಿನಲ್ಲಿ ಮೊದಲು ವಹಿವಾಟು ಆರಂಭಿಸಿ ನಂತರ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ. ಈ ಮೂಲಕ…

ಸಂಕ್ರಾತಿ ದಿನವೂ ಗ್ರಾಹಕರಿಗೆ ತಟ್ಟಿದೆ ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಬಿಸಿ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಳಿತಗಳಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಸಂಕ್ರಾಂತಿ ಹಬ್ಬದಂದು ಗ್ರಾಹಕರಿಗೆ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಿಸಿ ತಟ್ಟಿದೆ. ದೇಶದ ಮೆಟ್ರೋ ನಗರಗಳಲ್ಲಿ ಮಂಗಳವಾರ ಪೆಟ್ರೋಲ್, ಡೀಸೆಲ್​ ಬೆಲೆ 28-31ಪೈಸೆ…

ಇಂಡೋನೇಷ್ಯಾ ಮಾಸ್ಟರ್ಸ್ ಫೈಟ್

ಜಕಾರ್ತ: ಹೊಸ ವರ್ಷದ 2ನೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂಡೋನೇಷ್ಯಾ ಮಾಸ್ಟರ್ಸ್​ಗೆ ಮಂಗಳವಾರ ಚಾಲನೆ ಸಿಗಲಿದೆ. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಸೆಮಿಫೈನಲ್​ನಲ್ಲಿ ನಿರ್ಗಮಿಸಿದ್ದ ಅನುಭವಿ ಸೈನಾ ನೆಹ್ವಾಲ್, ರಿಯೋ ಒಲಿಂಪಿಕ್ ಬೆಳ್ಳಿ ಪದಕ…

ಕ್ವಾರ್ಟರ್​ಫೈನಲ್​ಗೇರಿದ ಸೆರೇನಾ, ಒಸಾಕ

ಮೆಲ್ಬೋರ್ನ್: ನಾಲ್ಕು ಪಂದ್ಯಗಳ ಪೈಕಿ 3ನೇ ಬಾರಿಗೆ ಐದು ಸೆಟ್​ಗಳ ಮ್ಯಾರಥಾನ್ ಪಂದ್ಯವಾಡಿದ ಜಪಾನ್​ನ ಕೀ ನಿಶಿಕೋರಿ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಇಟ್ಟರು. ಎರಡು ಸೆಟ್​ಗಳ…

ಸೋತ ಹಾಕಿ ತಂಡದ ಕೇಶಮುಂಡನ!

ಕೋಲ್ಕತ: ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ತಂಡದ ಕೆಟ್ಟ ನಿರ್ವಹಣೆಯ ಸಲುವಾಗಿ ಕೋಚ್​ನಿಂದ ನಿಂದನೆಗೆ ಒಳಗಾಗಿದ್ದ ಪಶ್ಚಿಮ ಬಂಗಾಳ 19 ವಯೋಮಿತಿ ಹಾಕಿ ತಂಡದ ಹೆಚ್ಚಿನ ಸದಸ್ಯರು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಪ್ರಕರಣ ದೊಡ್ಡ ಮಟ್ಟದಲ್ಲಿ…

ಫೆಡರರ್ ಸೋಲಿಗೆ ಅನುಷ್ಕಾ ಟ್ರೋಲ್!

ನವದೆಹಲಿ: ರೋಜರ್ ಫೆಡರರ್ ಅವರ ಅನಿರೀಕ್ಷಿತ ಸೋಲಿಗೆ ಈಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಟ್ರೋಲ್​ಗೊಳಗಾಗಿದ್ದಾರೆ. ‘ನಾನು ಸುಮ್ಮನೆ ಹೇಳುತ್ತಿದ್ದೇನಷ್ಟೆ . ಅನುಷ್ಕಾ ಭೇಟಿ ಮಾಡಿದ ಮರುದಿನವೇ…

ಫೆಡ್, ಕೆರ್ಬರ್, ಶೆರ್ಪಿಗೆ ಸಂಡೇ ಶಾಕ್!

ಮೆಲ್ಬೋರ್ನ್: ಮೊದಲ ಆರು ದಿನಗಳಲ್ಲಿ ಬಲಿಷ್ಠರೇ ಪ್ರಾಬಲ್ಯ ಮೆರೆದಿದ್ದ ವರ್ಷಾರಂಭದ ಗ್ರಾಂಡ್ ಸ್ಲಾಂ ಟೂರ್ನಿ ಆಸ್ಟ್ರೇಲಿಯನ್ ಓಪನ್​ನಲ್ಲಿ ಏಳನೇ ದಿನ ಹಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಸ್ವಿಸ್ ದಿಗ್ಗಜ ರೋಜರ್ ಫೆಡರರ್, ವಿಶ್ವ ನಂ.2…

ಪ್ರದೇಶ ಸಮಾಚಾರ View More

ಅಪಘಾತದಲ್ಲಿ ಹೋಟೆಲ್ ಉದ್ಯೋಗಿ ಸಾವು

ಮೈಸೂರು : ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ. ಹೆಬ್ಬಾಳಿನ ನಿವಾಸಿ ಡೋರ ಜೋಸೆ ಸುನಂದರಾಜ್(64) ಮೃತರು. ಪಡುವಾರಹಳ್ಳಿಯ ಹುಣಸೂರು ರಸ್ತೆ ಮತ್ತು ವಾಲ್ಮಿಕಿ ರಸ್ತೆಯ ಜಂಕ್ಷನ್‌ನಲ್ಲಿ ಸೋಮವಾರ ಸಂಜೆ…

ಕಾಮಗಾರಿ ತಡೆದು ಪ್ರತಿಭಟನೆ

ಬೀರೂರು: ಹೊಸ ಅಜ್ಜಂಪುರ ರಸ್ತೆಯಲ್ಲಿ ನಿರ್ವಣವಾಗುತ್ತಿರುವ ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿ ರಸ್ತೆ ಬದಿಯ ಶಿಥಿಲಗೊಂಡಿರುವ ಚರಂಡಿ ಮೇಲೆಯೇ ಸಿಮೆಂಟು ಹಾಸುಗಲ್ಲುಗಳನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸರಸ್ವತಿಪುರಂ…

ಬುಕ್ಕಾಂಬುದಿಯಲ್ಲಿ 24ರಂದು ಜನಜಾಗೃತಿ ಧರ್ಮ ಸಮ್ಮೇಳನ

ಬಾಳೆಹೊನ್ನೂರು: ಯುಗಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 83ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ತರೀಕೆರೆ ತಾಲೂಕು ಬುಕ್ಕಾಂಬುದಿ ಕ್ಷೇತ್ರದ ಬೆಟ್ಟದ ಮೇಲೆ ಜ.24ರಂದು ಜನಜಾಗೃತಿ ಬೃಹತ್ ಧರ್ಮಸಮ್ಮೇಳನ ಆಯೋಜಿಸಲಾಗಿದೆ ಎಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ…

ನಗರಸಭೆ ಚುನಾವಣೆ ಮುಂದಕ್ಕೆ?

ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ ಪರಿಷ್ಕರಣೆ ಆದೇಶ ಮರು ಪರಿಶೀಲನೆಗೆ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದು, ನಗರಸಭೆ ಚುನಾವಣೆ ಮುಂದೆ ಹೋಗುವ ಸಂಭವವಿದೆ. ರಾಜ್ಯ ಸರ್ಕಾರ ಹೊರಡಿಸಿದ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ…

ಸಂತರಿಗೂ ಮಾರ್ಗದರ್ಶಕರಾಗಿದ್ದ ಶ್ರೀಗಳು

ಚಿಕ್ಕಮಗಳೂರು: ಭಾರತೀಯ ಸಮಾಜದಲ್ಲಿ ಸೇವೆ ಮೂಲಕ ಯುಗ ಪುರಷನಾಗಿ ಗುರುತಿಸಿಕೊಂಡಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಸಂತರಿಗೂ ಮಾರ್ಗದರ್ಶಕರಾಗಿದ್ದರು ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಡಾ. ಶಿವಕುಮಾರ ಶಿವಾಚಾರ್ಯ…

ಕ್ರಿಕೆಟ್ View More

ಸಿನೆಮಾ View More

ಅಂಕಣ View More

‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

ಭಾರತೀಯ ಸೇನೆಯ ಪಾಲಿಗೆ 2018ರ ವರ್ಷ ಖುಷಿ ನೀಡುವಂಥದ್ದು. 250ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಮ್ಮ ಸೇನೆ ಕೊಂದಿದೆ, 54 ಜನರನ್ನು ಜೀವಂತವಾಗಿ ಬಂಧಿಸಲಾಗಿದೆ ಮತ್ತು 4 ಜನ ತಾವೇ ತಾವಾಗಿ ಶರಣಾಗತರಾಗಿದ್ದಾರೆ. ಅತ್ತ ಕಾಂಗ್ರೆಸ್ಸು…

ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳ ಮನೋಸ್ಥಿತಿ

ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳಲು ದೊಡ್ಡವರು ಪ್ರಯತ್ನಿಸಬೇಕು. ಅವರ ಕುತೂಹಲ, ಆಸಕ್ತಿ, ಅನುಮಾನಗಳನ್ನು ಗಮನಿಸಿ ಸೂಕ್ತವಾಗಿ ಸ್ಪಂದಿಸಬೇಕು. ತೀರಾ ಒರಟುತನದಿಂದ ನಡೆದುಕೊಳ್ಳುವುದು ಅಥವಾ ಅತಿಯಾದ ಪ್ರೀತಿ ಎರಡೂ ಮಗುವನ್ನು ಕೆಡಿಸಬಲ್ಲವು. ಹಾಗಾಗಿ, ಮಗುವಿನ ವಯಸ್ಸಿಗೆ ತಕ್ಕಂತೆ…

ಆಧುನಿಕ ಕರ್ನಾಟಕದ ಮಹಾಂತ ಶ್ರೀ ಮೃತ್ಯುಂಜಯ ಶಿವಯೋಗಿಗಳು

ಉತ್ತರ ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದವರು ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳು. ಲೌಕಿಕ ಮತ್ತು ಪಾರಮಾರ್ಥಿಕ ಎರಡನ್ನೂ ಬೆಸೆದ ಮಹಾಂತರು. ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ’ ಎಂಬ ಶರಣರ ನುಡಿಯನ್ನು…

ಸಹವಾಸ ದೋಷ…!

ಅದು ಅಕ್ಟೋಬರ್ ತಿಂಗಳು. ಕೋಲ್ಕತ ಹಬ್ಬದ ಸಡಗರ ದಲ್ಲಿತ್ತು. ನಗರದ ಡಂಡಂ ಕಾರಾಗೃಹದ ಅಧೀಕ್ಷಕರ ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಆತ ಕುಳಿತಿದ್ದ. ನೀಳ ಕಾಯದ ಆತ ತಲೆಗೂದಲನ್ನು ನೀಟಾಗಿ ಬಾಚಿ, ಪೆನ್ಸಿಲನ್ನು ತುಟಿಗೆ ಸಿಕ್ಕಿಸಿಕೊಂಡಿದ್ದ.…

ಇಲ್ಲೇ ಇರುವುದೋ, ಅಲ್ಲಿಗೆ ಹೋಗುವುದೋ?!

ಉದ್ಯೋಗಕ್ಕಾಗಿ ಹೋದ ಮೇಲೆ ಅಲ್ಲಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದೂ ಅನಿವಾರ್ಯ. ಆದರೆ ಎಲ್ಲಿ ಹೋದರೂ, ಯಾವ ಜನರ ನಡುವೆ ಇದ್ದರೂ ಮೂಲಬೇರನ್ನು ಎಷ್ಟರಮಟ್ಟಿಗೆ ನೆನಪಿಟ್ಟುಕೊಳ್ಳುತ್ತೇವೆ ಎಂಬುದೇ ಮುಖ್ಯ. ‘ಎಲ್ಲಾದರು ಇರು ಎಂತಾದರು ಇರು ಮೂಲವ ನೀ…

ಅಖಿಲೇಶ್-ಮಾಯಾ ಜಾಲ ಕೈಗೆ ಆತಂಕದ ಕಾಲ

ರಾಜಕೀಯ ಮುನಿಸು, ವೈಮನಸ್ಯ ವಿರೋಧದ ನೆಲೆಯಲ್ಲಿ ಮಾತ್ರವೇ ಅಲ್ಲದೆ ಮಿತ್ರಪಕ್ಷಗಳ ನಡುವೆಯೂ ಸಹಜ. ಸಮುದ್ರದ ಅಲೆ ದಡವನ್ನು ಒದ್ದುಹೋಗುವ ಹಾಗೆ. ಉತ್ತರಪ್ರದೇಶದ ಇತ್ತೀಚಿನ ರಾಜಕಾರಣ ಸಹಜವನ್ನೆಲ್ಲ ಅಸಹಜವನ್ನಾಗಿಸಿದೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ…

ಪುರವಣಿ View More

ಕೇವಲ ಆನಂದ ಏಕರಸಮಯವಸ್ತು

|ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ದೇವ-ಜೀವೈಕ್ಯ ತತ್ತ್ವವು ಅರಿವಾಗಬೇಕಾದರೆ ಅವೆರಡರಲ್ಲಿರುವ ಬಂಧಕಗಳು ಸಾಧಕನಲ್ಲಿ ಇಲ್ಲವಾಗಬೇಕು. ತಾನು ಯಜಮಾನ ಎಂಬ ಭಾವವು ಪ್ರತಿಬಂಧಕವೇ ಸರಿ. ತಾನು ಯಜಮಾನನಿಗೆ ಗುಲಾಮ ಎಂಬುದೂ ಪ್ರತಿಬಂಧಕವೇ. ಇವೆರಡರೊಳಗಿನ ಬಂಧಕತ್ವವು ಹೋಗಬೇಕು. ಅದು…

ಅಮೃತಬಿಂದು

ಶ್ರೀ ಶೈವಾಗಮ ತ್ಯಕ್ತಾಸೋರ್ನಷ್ಟಲಿಂಗಸ್ಯ ತತ್ ಕ್ಷಣೇ ಮೋಕ್ಷಸಂಗತಿಃ | ನಾನರ್ಥಸ್ತದಸುತ್ಯಾಗಃ ಸಂಸ್ಕಾರಸ್ತು ಯಥಾ ಶೃಣು || ಇಷ್ಟಲಿಂಗವು ಕಳೆದ ಕಾರಣ ಪ್ರಾಣಬಿಟ್ಟ ವ್ಯಕ್ತಿಯು ತಕ್ಷಣವೇ ಮೋಕ್ಷ ಪಡೆಯುವ ಕಾರಣ ಅವನ ಪ್ರಾಣತ್ಯಾಗವು ನಿರರ್ಥಕವಾಗದು. ವೇದದಲ್ಲಿ…

ಧರ್ಮಕ್ಕೆ ವಿನಾಶವಿಲ್ಲ

| ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಜಗತ್ತಿನಲ್ಲಿ ಬುದ್ಧಿವಂತರು ಮತ್ತು ವಿದ್ವಾಂಸರು ಸಿಗಬಹುದು. ಆದರೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಯೋಗ್ಯ ಚಿಂತಕರು ಮತ್ತು ಯೋಜಕರು ಸಿಗುವುದು ಕಷ್ಟದ ಕೆಲಸ. ಮುಳ್ಳಿನ ನಡುವೆ ಗುಲಾಬಿ ಹೂ…

ಸಮಷ್ಟಿಯ ಬಾಳ್ವೆ ಧನ್ಯ

| ಕವಿತಾ ಅಡೂರು ಪುತ್ತೂರು ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು | ಆತ್ಮವಿಸ್ತಾರವಾಗಿಪುದೆ ನಿತ್ಯಸುಖ || ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ | ಒಟ್ಟು ಬಾಳ್ವುದ ಕಲಿಯೋ – ಮಂಕುತಿಮ್ಮ || 432 || ಇತರರಿಗೆ ಒಳಿತು ಮಾಡದೆ,…

ಆರ್ಥಿಕತೆಗಳ ಸಮ್ಮಿಲನ

| ಶಾ.ರಂಗನಾಥ್​, ಹಿರಿಯ ನಿವೃತ್ತ ಪ್ರಬಂಧಕರು, ಕೆನರಾ ಬ್ಯಾಂಕ್​ 2017ರ ಆಗಸ್ಟ್​ನಲ್ಲಿ ಎಸ್​ಬಿಐ ಮತ್ತು ಇತರ 6 ಸಹವರ್ತಿ ಬ್ಯಾಂಕ್​ಗಳ ವಿಲೀನಕ್ಕೆ ಲೋಕಸಭೆ ಅಸ್ತು ಎಂದಾಗ ಇಡೀ ದೇಶದಲ್ಲಿ ಗೊಂದಲವುಂಟಾಗಿತ್ತು. ಈ ಬ್ಯಾಂಕುಗಳ ಗ್ರಾಹಕರಿಗೆ…

ದಾಳಿಂಬೆಯ ರೋಗ ನಿಯಂತ್ರಣ

ಉತ್ತರಿಸುವವರು: ಪೂರ್ಣಪ್ರಜ್ಞ ಬೇಳೂರು ದಾಳಿಂಬೆಗೆ ಬರುವ ರೋಗ, ಕೀಟ ಇನ್ನಿತರ ಪೀಡೆಗಳನ್ನು ಸುಲಭದಲ್ಲಿ ನಿಯಂತ್ರಿಸುವ ಕ್ರಮಗಳನ್ನು ತಿಳಿಸಿ. | ಹೇಮ್ಲಾ ನಾಯಕ್ ಚಳ್ಳಕೆರೆ ಚಿತ್ರದುರ್ಗ, ತುಮಕೂರು, ಬಾಗಲಕೋಟ ಜಿಲ್ಲೆಗಳಲ್ಲಿ ದಾಳಿಂಬೆಯನ್ನು ಅತಿಯಾಗಿ ಬೆಳೆದಿದ್ದರಿಂದ ಅಲ್ಲಿ…

ಮನೋಲ್ಲಾಸ View More

ತನ್ಮಯತೆಯ ಶಕ್ತಿ

| ಚಿದಂಬರ ಮುನವಳ್ಳಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸೋದರಮಾವ ಅಲಿಬಕ್ಷ್ ಶಹನಾಯಿ ವಾದಕರಾಗಿದ್ದರು. ಅವರಿಗೆ ಊರಿನ ಮಹಾವಿಷ್ಣು ದೇಗುಲದ ಪ್ರಾಕಾರದಲ್ಲೇ ಕೋಣೆಯೊಂದನ್ನು ನೀಡಲಾಗಿತ್ತು. ಅಲ್ಲಿ ಪ್ರತಿನಿತ್ಯ 4-5 ಗಂಟೆ ಕಾಲ ಅವರ ತಾಲೀಮು…

ಹಂಚಿಕೊಂಡು ತಿನ್ನೋಣ…

|ಪ್ರೊ. ಜಿ.ಕೆ. ಕುಲಕರ್ಣಿ ಅದೊಂದು ಅವಿಭಕ್ತ ಕುಟುಂಬ. ಮೊಮ್ಮಕ್ಕಳನ್ನು ತನ್ನ ಮಲಗುವ ಕೋಣೆಗೆ ಕರೆತಂದ ಅಜ್ಜ ಅಲ್ಲಿರುವ ಪೆಟ್ಟಿಗೆಯೊಂದನ್ನು ತೋರಿಸಿ, ‘ಮಕ್ಕಳಾ, ಆ ಪೆಟ್ಟಿಗೆಯಲ್ಲಿ ಭಾರಿ ದುಡ್ಡು ಇಟ್ಟಿದ್ದೇನೆ; ನಾನು ಜೀವನಪರ್ಯಂತ ಗಳಿಸಿ ಉಳಿಸಿದ…

ವಿವೇಚನೆಯೇ ಬದುಕು

| ಪದ್ಮಲತಾ ಮೋಹನ್ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು. ‘ನೀರಹನಿ ಆವಿಯಾಗುತ್ತದೆ, ಅದೇ ಆವಿ ನೀರಾಗಿ ಪರಿವರ್ತಿತವಾಗುತ್ತದೆ; ಏಕೆಂದರೆ ಅವೆರಡೂ ಒಂದು ವಸ್ತುವಿನ ವಿಭಿನ್ನ ಅವಸ್ಥೆಗಳು. ಸುಖ-ದುಃಖಗಳೂ ಹಾಗೆಯೇ’ ಎನ್ನುತ್ತಾರೆ…

ಬದುಕಿಗೆ ಗುರಿಯಿರಲಿ

| ಗಿರಿಜಾಶಂಕರ್ ಜಿ.ಎಸ್. ನಿರ್ದಿಷ್ಟ ಗುರಿಯಿಲ್ಲದೆ ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಒಂದು ಅಂಚೆಪತ್ರ ಮಹತ್ವಪೂರ್ಣ ಮಾಹಿತಿಯನ್ನು ಒಳಗೊಂಡಿದ್ದೂ ವಿಳಾಸವನ್ನೇ ಹೊಂದಿಲ್ಲದಿದ್ದರೆ ಅದು ಎಲ್ಲಿಗೂ ತಲುಪಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ಗುರಿಯಿಲ್ಲದಿದ್ದರೆ ನಾವಂದುಕೊಂಡಂತೆ…

ಸಹಾಯ ಮಾಡುವುದರಲ್ಲಿದೆ ಸಂತೃಪ್ತಿ

| ಹೇಮಲತಾ ಸ್ವಾಮಿ ವಿವೇಕಾನಂದರ ಬಳಿ ರೈಲು ಟಿಕೆಟ್ ಖರೀದಿಗೆ ಸಾಕಾಗುವಷ್ಟು ಮಾತ್ರವೇ ಹಣವಿತ್ತು; ಹೀಗಾಗಿ ಊಟಕ್ಕೆ ಹೇಗೆ ವ್ಯವಸ್ಥೆಯಾಗುವುದೋ ಎಂಬ ಕಲ್ಪನೆಯೂ ಅವರಲ್ಲಿರಲಿಲ್ಲ. ಅವರಿದ್ದ ಬೋಗಿಯಲ್ಲಿ ಎದುರಿಗೆ ಒಬ್ಬ ಶ್ರೀಮಂತ ವ್ಯಾಪಾರಿ ಕುಳಿತಿದ್ದ.…

ಫೋಟೊ ಗ್ಯಾಲರಿ View More

PHOTOS| ನೆನಪಿನ ಬುತ್ತಿಯನ್ನು ಬಿಟ್ಟು ಹೊರಟ ಶ್ರೀಗಳು ಅಸಂಖ್ಯಾತ ಭಕ್ತರ ಹೃದಯದಲ್ಲಿ ಅಮರ

ತುಮಕೂರು: ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೆ…

PHOTOS: ಶ್ರೀ ಸಿದ್ಧಗಂಗಾ ಎಂಬ ಪುಣ್ಯಕ್ಷೇತ್ರ ನಾಡಿನ ಬೆಲೆಕಟ್ಟಲಾಗದ ಸಂಪತ್ತು

ತುಮಕೂರು: ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ನೀಡುತ್ತಿರುವ ಶ್ರೀ ಸಿದ್ಧಗಂಗಾ ಕ್ಷೇತ್ರವು ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿರುವ ಈ…

PHOTOS| ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾಯಕಕ್ಕೆ ಶ್ರೀಗಳು ಕಂಕಣಬದ್ಧರಾಗಿದ್ದರು

ತುಮಕೂರು: ಅಕ್ಷರ, ಅನ್ನ ಹಾಗೂ ಜ್ಞಾನ ಎಂಬ ತ್ರಿವಿಧ ದಾಸೋಹದ ಜತೆಗೆ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ಸಿದ್ಧಗಂಗಾ ಮಠ ಕಂಕಣಬದ್ಧವಾಗಿತ್ತು. ಹಲವು ವರ್ಷಗಳಿಂದ ಮಠದಲ್ಲಿ ನಡೆದುಕೊಂಡು ಬರುತ್ತಿರುವ ಜಾತ್ರೆಯಲ್ಲಿ ಸಂಸ್ಕೃತಿಯ…

PHOTOS| ಸಿದ್ಧಗಂಗಾ ಮಠದ ಅನ್ನ ದಾಸೋಹದ ಹಿಂದಿದೆ ಶ್ರಮದ ಸಾಗರ

ತುಮಕೂರು: ತಿವಿಧ ದಾಸೋಹಗಳಲ್ಲಿ ಒಂದಾದ ಅನ್ನ ದಾಸೋಹ ಸಿದ್ಧಗಂಗಾ ಮಠದ ಪ್ರಮುಖ ಆಕರ್ಷಣೆ. ನಿತ್ಯ ಮಠದಲ್ಲಿ ಬರೋಬ್ಬರಿ ಹತ್ತು ಸಾವಿರ ಜನರಿಗೆ ಅಡುಗೆ ಮಾಡಲೇಬೇಕು. ಇದು ಒಂದು ತರಹ ಸಾಹಸವೇ ಸರಿ. ಅಂದು ಹಾಕಿದ…

ವಿಡಿಯೋ ಗ್ಯಾಲರಿ View More

ವೀರಾಪುರದ ವೀರಪುತ್ರ ಯತಿ ಪರಂಪರೆಯ ವೀರಾಗ್ರಣಿ

ತುಮಕೂರು: ನಡೆದಾಡುತ್ತಿದ್ದ ದೇವರು, ಕಾಯಕ ಯೋಗಿ ಹಾಗೂ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿ ಇನ್ನು ನೆನಪು ಮಾತ್ರ. ಜೀವನದ ಉದ್ದಕ್ಕೂ ಪರೋಪಕಾರಿಯಾಗಿ ಬದುಕಿದ ಶ್ರೀಗಳ ಸೇವೆ ಅನನ್ಯವಾಗಿದೆ. ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ…

ನಡೆದಾಡುತ್ತಿದ್ದ ದೇವರು ಶಿವೈಕ್ಯ: ನಾಳೆ ಶಾಲಾ-ಕಾಲೇಜಿಗೆ ರಜೆ, ಮೂರು ದಿನ ಶೋಕಾಚಾರಣೆ

ತುಮಕೂರು: ಕಾಯಕ ಯೋಗಿ, ನಡೆದಾಡುತ್ತಿದ್ದ ದೇವರು ಶ್ರೀ ಶಿವಕುಮಾರ ಸ್ವಾಮಿ ಅವರು ಶಿವೈಕ್ಯರಾದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಹಾಗೂ ಮೂರು ದಿನಗಳ ಶೋಕಾಚಾರಣೆಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆದೇಶಿಸಿದ್ದಾರೆ. ತುಮಕೂರಿನಲ್ಲಿ ಇಂದು ಮತ್ತು…

ನಡೆದಾಡುತ್ತಿದ್ದ ದೇವರು ಶಿವೈಕ್ಯ

ತುಮಕೂರು: ನಡೆದಾಡುವ ದೇವರು, ಅಕ್ಷರ ದಾಸೋಹಿ ಪರಮಪೂಜ್ಯ ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಬೆಳಗ್ಗೆ 11. 44 ಗಂಟೆಗೆ ಶಿವೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ…

ಸೀತಾರಾಮ ಕಲ್ಯಾಣ ಟ್ರೇಲರ್ ಬಿಡುಗಡೆ

ಮೈಸೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ನಟನೆಯ ‘ಸೀತಾರಾಮ ಕಲ್ಯಾಣ’ ಚಲನಚಿತ್ರದ ಟ್ರೇಲರ್ ಅನ್ನು ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಂಜೆ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ…