ಚಿಕ್ಕಮಗಳೂರು (ಜಿಲ್ಲೆ)

ಬೇಲೇನಹಳ್ಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ವಕೀಲ ಬಿ.ಪಿ.ವಿಕಾಸ್ ಮಾತನಾಡಿದರು. ಬಿ.ಎಂ.ನಂಜುಂಡಪ್ಪ, ಟಿ.ಸಿ.ಅಮರನಾಥ್, ಎ.ನವೀನ್‌ಕುಮಾರ್, ಕೆ.ಲೋಹಿತ್‌ಕುಮಾರ್, ಡಿ.ಎಸ್.ರಘುವೀರ್ ಇತರರಿದ್ದರು.
ಶೃಂಗೇರಿ ಜೈನ ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರಮಿಸಿದ ಡಾ. ನಿರಂಜನ್‌ಕುಮಾರ್ ಹಾಗೂ ಡಾ. ಭುವನೇಶ್ವರಿ ಬಲ್ಲಾಳ್ ದಂಪತಿಯನ್ನು ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ನಿಷ್ಕಲಾ, ಕೀರ್ತಿಲತಾ ಇತರರಿದ್ದರು.
ಬೀರೂರಿನ ಪುರಸಭೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಪುಷ್ಪಾರ್ಚನೆ ಮಾಡಿದರು. ಮುಬಾರಕ್, ಮೈಲಾರಪ್ಪ, ಮೇಘನಾ ಇತರರಿದ್ದರು.

ಮೂಡಿಗೆರೆ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿದರು. ಎಸ್.ಅಶ್ವಿನಿ, ದಯಾವತಿ, ಕೆ.ವಿ.ರಾಜಶೇಖರ್, ಮೀನಾಕ್ಷಿ, ಡಿ.ಕೆ.ಲಕ್ಷ್ಮಣ ಗೌಡ, ಸಿ.ಬಿ.ಶಂಕರ್, ಕುನ್ನಳ್ಳಿ ರವಿ ಇತರರಿದ್ದರು.
ಕಳಸದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಗನ್ ಮಾತನಾಡಿದರು. ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್, ಶೇಷಗಿರಿ, ಆಶಾಲತಾ ಜೈನ್, ಸುರೇಶ್ ಭಟ್, ವಕೀಲ ಅನಂತೇಶ್ ಇದ್ದರು.
ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಮೊದಲ ಮಹಡಿ ಉದ್ಘಾಟನಾ ಕಾರ್ಯಕ್ರಮವನ್ನು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ,  ಶಾಸಕ  ಟಿ.ಡಿ.ರಾಜೇಗೌಡ ಮತ್ತಿತರರಿದ್ದರು.
ಕಡೂರು ತಾಲೂಕಿನ ಕಾಮನಕೆರೆ ಗ್ರಾಮದಲ್ಲಿ ಪಶು ಚಿಕಿತ್ಸಾಲಯವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಡಾ. ಗುರುಶಾಂತಪ್ಪ, ಪಂಚಾಕ್ಷರಿ, ಕಲ್ಲೇಶ್, ಡಾ.ಉಮೇಶ್, ಅಶೋಕ್ ಮತ್ತಿತರರಿದ್ದರು.
ಕಡೂರು ತಾಲೂಕಿನ ತಂಗಲಿ ಕೆರೆ ಬಳಿ ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ 
ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಧನಪಾಲ್‌ನಾಯ್ಕ, ಹರ್ಷ, ರವಿ ಇತರರಿದ್ದರು.
Read More