ಮಗನ ಪ್ರಶಸ್ತಿ ಸ್ವೀಕರಿಸಿದ ತಾಯಿ

ಬೀದರ್ ನಲ್ಲಿ ಪ್ರಶಸ್ತಿ ಪ್ರದಾನ
bidar
ಬೀದರ್‍ನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸ್ಪರ್ಧಾ ಸಂಕಲ್ಪ ಅಕಾಡೆಮಿ ಅಧ್ಯಕ್ಷ ನಾಗೇಶ್ ಸ್ವಾಮಿ ಮಸ್ಕಲ್ ಅನುಪಸ್ಥಿತಿಯಲ್ಲಿ ಅವರ ತಾಯಿ ಪಾರ್ವತಿ ಮಾದಯ್ಯ ಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
Published on: 

ಬೀದರ್: ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ತಾಯಿಯೊಬ್ಬರು ಮಗನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಪ್ರಶಸ್ತಿಗೆ ಆಯ್ಕೆಯಾಗಿದ್ದ ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಅಧ್ಯಕ್ಷ ನಾಗೇಶ್ ಸ್ವಾಮಿ ಮಸ್ಕಲ್ ಅವರು ಅನಾರೋಗ್ಯದ ಕಾರಣ ಸಮಾರಂಭಕ್ಕೆ ಹಾಜರಾಗಲಿಲ್ಲ. ಹೀಗಾಗಿ ಮಗನ ಸಾಧನೆಗಾಗಿ ನೀಡಿದ ಪ್ರಶಸ್ತಿಯನ್ನು ಅವರ ತಾಯಿ ಪಾರ್ವತಿ ಮಾದಯ್ಯ ಸ್ವಾಮಿ
ಅವರು ಹೆಮ್ಮೆ ಹಾಗೂ ಅಭಿಮಾನದಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ಭಾವುಕರೂ ಆದರು.
ನಾಗೇಶ್ ಸ್ವಾಮಿ ಮಸ್ಕಲ್ ಎರಡು ದಶಕದಿಂದ ಶಿಕ್ಷಣ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ.
ನಾಗೇಶ್ ಸ್ವಾಮಿ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ, ಓಂಕಾರ ಉಪ್ಪೆ, ಸಂಗಮೇಶ್ ಜ್ಯಾಂತೆ, ಸಿದ್ಧಾರೂಢ ಭಾಲ್ಕೆ, ಶರಣು ಚಿದ್ರೆ, ಡಾ. ಶ್ರೇಯಾ ಮಹೇಂದ್ರಕರ್, ಸ್ವರೂಪರಾಣಿ, ಶಿಲ್ಪಾ ಮಜಗೆ, ಡಾ. ಸುಜಾತಾ ಹೊಸಮನಿ, ಅಂಬಿಕಾ ಹಳ್ಳಿಖೇಡೆ, ಅಂಬಿಕಾ ಸ್ವಾಮಿ, ಡಾ. ಎಸ್.ಎಂ. ಮಠಪತಿ, ಗೌತಮ, ಶರಣುಕುಮಾರ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.