

ಚಿಟಗುಪ್ಪ: ಬೋರಾಳ ಗ್ರಾಮದ ಎಸ್.ಆರ್. ಕಾಲೇಜು ಕ್ಯಾಂಪಸ್ನಲ್ಲಿ ಶಾಲಾ ಶಿಣ ಇಲಾಖೆ (ಪದವಿಪೂರ್ವ) ಬೆಂಗಳೂರು, ಉಪ ನಿರ್ದೇಶಕರ ಕಚೇರಿ ಬೀದರ್ ಸಹಯೋಗದಡಿ ಆಯೋಜಿಸಿದ್ದ 2026&27ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಎರಡು ದಿನದ ಶನಿವಾರ ರಾಜ್ಯಮಟ್ಟದ ಯೋಗಾಸನದ ಅಂತಿಮ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಯ 9 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯದ 38ಶೈಕ್ಷಣಿಕ ಜಿಲ್ಲೆಗಳ ಸುಮಾರು 400 ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ್ ವಿ.ಜಿ., ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಮೈಸೂರು ಜಿಲ್ಲೆಯ ರಜತ್ ಗಿರಿ, ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಗೌತಮ್ ಜಲ್ಲೆ ಎಸ್.ಡಿ, ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವಾಸ್ತರಾಜ್ ಮತ್ತು ಪೃಥ್ವಿಚಾರ್ ಆಯ್ಕೆಯಾಗಿದ್ದಾರೆ.
ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ಹಾಗೂ ಕಲಾತ್ಮಕ ಯೋಗಾಸನ ವೈಯಕ್ತಿಕ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಸೃಷ್ಟಿ ಕೆ.ವೈ., ಕಲಾತ್ಮಕ ಯೋಗಾಸನ ಜೋಡಿ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನನ್ಯಾ ಸುಧಾಕರ್ ಗುರು ಮತ್ತು ಪೂರ್ವಿಕಾ ಜೆ.ಎಂ. ಆಯ್ಕೆಯಾಗಿದ್ದಾರೆ.
ಅಂತಿಮ ಫಲಿತಾಂಶ: ಬಾಲಕರ ವಿಭಾಗ: ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. ಪ್ರಥಮ, ಮೈಸೂರು ಜಿಲ್ಲೆಯ ರಜತ್ ಗಿರಿ ದ್ವೀತಿಯ ಹಾಗೂ ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. ಪ್ರಥಮ, ಮೈಸೂರು ಜಿಲ್ಲೆಯ ರಜತ್ ಗಿರಿ ದ್ವೀತಿಯ ಹಾಗೂ ಬಳ್ಳಾರಿ ಜಿಲ್ಲೆಯ ಗಿರಿರಾಜ ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಗೌತಮ್ ಜಲ್ಲೆ ಪ್ರಥಮ, ಬೆಂಗಳೂರು ಕೇಂದ್ರ ಜಿಲ್ಲೆಯ ಜೀವನ್ ಎ. ಮತ್ತು ಪ್ರೀತಮ್ ಶೇಖರ್ ಎಸ್. ದ್ವೀತಿಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಕ್ಷಯ ಗಣೇಶ ಭಟ್ ಮತ್ತು ಸಂಜಯ್ ಜಗದೀಶ ನಾಯಕ್ ತೃತೀಯ ಸ್ಥಾನ. ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವತ್ಸರಾಜ್ ಮತ್ತು ಪೃಥ್ವಿಚಾರ್ ಪ್ರಥಮ, ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಸುದರ್ಶನ್ ಎಂ. ದ್ವೀತಿಯ ಹಾಗೂ ಧಾರವಾಡ ಜಿಲ್ಲೆಯ ಪ್ರೀತಮ್ ಜಿ. ಸುರಂಗಿ ಮತ್ತು ಉಮೇಶ್ ಎಚ್. ದೊಡಮನಿ ತೃತೀಯ ಸ್ಥಾನ ಗಳಿಸಿದ್ದಾರೆ.
ಬಾಲಕೀಯರ ವಿಭಾಗ : ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಸೃಷ್ಟಿ ಕೆ.ವೈ. ದಾವಣಗೆರೆ ಜಿಲ್ಲೆ ಪ್ರಥಮ, ಜಯಲಕ್ಷಿ$್ಮ ಜಿ.ಕೆ. ಹಾವೇರಿ ಜಿಲ್ಲೆ ದ್ವೀತಿಯ, ಬೃಂದಾ ಎ.ಆರ್. ಬೆಂಗಳೂರು ಉತ್ತರ ಜಿಲ್ಲೆ ತೃತೀಯ ಸ್ಥಾನ. ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಸೃಷ್ಟಿ ಕೆ.ವೈ ದಾವಣಗೆರೆ ಜಿಲ್ಲೆ ಪ್ರಥಮ ಸ್ಥಾನ, ಸಂಪದಾ ಸತೀಶ್ ಹೆಗಡೆ ಉತ್ತರ ಕನ್ನಡ ಜಿಲ್ಲೆ ದ್ವೀತಿಯ ಸ್ಥಾನ, ಎಚ್.ಅಭಿಜ್ಞಾ ದಕ್ಷಿಣ ಕನ್ನಡ ಜಿಲ್ಲೆ ತೃತೀಯ ಸ್ಥಾನ.
ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್ ಗುರುವ್ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಷಾ ಎಂ. ಮತ್ತು ದಿವ್ಯಾ ಎಂ.ಎ. ಮೈಸೂರು ಜಿಲ್ಲೆ ದ್ವೀತಿಯ ಸ್ಥಾನ, ಬಿಂದುಶ್ರೀ ಎಚ್. ಮತ್ತು ವರ್ಷಾ ಆರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ತೃತೀಯ ಸ್ಥಾನ ಪಡೆದಿದ್ದಾರೆ.
ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್ ಗುರುವ್ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಬಿಂದುಶ್ರೀ ಎನ್.ಸಿ. ಮತ್ತು ನೇಸರಾ ಎ.ಎಸ್. ಮಂಡ್ಯ ಜಿಲ್ಲೆ ದ್ವೀತಿಯ ಸ್ಥಾನ, ರತ್ನಾ ಶ್ಯಾಗೋಟಿ ಮತ್ತು ಜ್ಯೋತಿ ಇಂಗಳಗಿ ಧಾರವಾಡ ಜಿಲ್ಲೆ ತೃತೀಯ ಸ್ಥಾನ ಪಡೆದಿದ್ದಾರೆ.