ಗ್ಯಾರಂಟಿ ಯೋಜನೆ ವಾರದೊಳಗೆ ವರದಿ ಸಲ್ಲಿಸಿ

ಬೀದರ್​ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯಕ್​ ಮಾತನಾಡಿದರು. ಅಮೃತರಾವ ಚಿಮಕೋಡೆ, ಗಿತ್ತೆ ಮಾಧವ್​ ಇತರರಿದ್ದರು.
ಬೀದರ್​ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯಕ್​ ಮಾತನಾಡಿದರು. ಅಮೃತರಾವ ಚಿಮಕೋಡೆ, ಗಿತ್ತೆ ಮಾಧವ್​ ಇತರರಿದ್ದರು.
Published on: 

ಬೀದರ್​: ರಾಜ್ಯ ಸರ್ಕಾರದ ಮಹತ್ವಕಾಂ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿದ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯಕ್​ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಒಟ್ಟು ಗೃಹಲಕ್ಷಿ$್ಮ ಯೋಜನೆಯಡಿಯಲ್ಲಿ ನೋಂದಣಿಯಾದ 3,64,287 ಫನಾನುಭವಿಗಳ ಪೈಕಿ ಪರಿಷ್ಕರಣೆಗೊಂಡ ನಂತರ ಉಳಿದ 3,40,756 ಫಲಾನುಭವಿಗಳ ಖಾತೆಗೆ ಜುಲೈವರೆಗೆ ಒಟ್ಟು 2,111 ಕೋಟಿ73 ಲಕ್ಷ ರೂ. ಜಮೆ ಮಾಡಲಾಗಿದೆ. ಉಳಿದ ಕಂತಿನ ಹಣವನ್ನು ಸಹ ಸಂಪನ್ಮೂಲಗಳನ್ನು ಕ್ರೂಢಿರಿಸಿ ಹಂತ ಹಂತವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟು 18 ಲಕ್ಷದಷ್ಟು ಜನಸಂಖ್ಯೆ ಇದ್ದು ಅದರಲ್ಲಿ ಗ್ಯಾರಂಟಿ ಯೋಜನೆಯಡಿ ಸುಮಾರು 13 ಲಕ್ಷದಷ್ಟು ಫಲನಾನುಭವಿಗಳಿದ್ದಾರೆ. ಕಳೆದ 6 ತಿಂಗಳಲ್ಲಿ ಮರಣ ಹೊಂದಿದ ಸುಮಾರು 7 ಸಾವಿರದಷ್ಟು ಜನರನ್ನು ಗುರುತಿಸಿ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ. ವೈದ್ಯಕಿಯ ಹಿನ್ನೆಲೆ ಹೊಂದಿದ ಸುಮಾರು 100 ಜನರನ್ನು ಗುರುತಿಸಿ ಪಡಿತರ ಚೀಟಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ನಿಜವಾದ ಫಲನಾನುಭವಿಗಳಿಗೆ ಯೋಜನೆ ಸಿಗುವಂತಾಗಬೇಕು. ತೆರಿಗೆ ಪಾವತಿಸುವ ಹಾಗೂ ಹೊರ ಜಿಲ್ಲೆಯಿಂದ ನೆಲೆಸಿದವರನ್ನು ಗುರುತಿಸಿ ಈ ಯೋಜನೆಯಿಂದ ಹೊರಗಿಡುವಂತಾಗಬೇಕು. ನಿಖರವಾಗಿ ಸಮೀಕ್ಷೆ ನಡೆಸಿ ಈ ಯೋಜನೆಯಲ್ಲಿ ವಂಚಿತರಾದವರನ್ನು ಗುರುತಿಸಿ ಅಂತವರಿಗೆ ಯೋಜನೆಗಳ ಲಾಭ ಸಿಗುವಂತಾಗಬೇಕು. ಶೀಘ್ರವಾಗಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಬೇಕು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಯವರೆಗೆ 19.59 ಲಕ್ಷದಷ್ಟು ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣಿಸಿದ್ದಾರೆ. ಬಸ್​ ನಿಲ್ಧಾಣಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಹಾಲು ಉಣಿಸುವ ಕೋಣೆ, ಕುಡಿಯುವ ಶುದ್ಧ ನೀರು, ಶೌಚಗೃಹ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಎಚ್ಚರಿಸಿದರು.

ಕಾಲೇಜು ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ಹೆಚ್ಚು ಆಸಕ್ತಿ ನೀಡದಿರುವುದು ಕಂಡು ಬಂದಿದೆ. ಅಧಿಕಾರಿಗಳು ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳಿಗೆ ಭೇಟಿ ನೀಡಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಯುವಕರಲ್ಲಿ ಪ್ರೇರೆಪಿಸಬೇಕು. ಈ ಯೋಜನೆಗಳ ಕರ ಪತ್ರ ನೀಡಿ ಮಾಹಿತಿ ನೀಡಿ ಯೋಜನೆಗಳ ಲಾಭ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನಗಳ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ್​, ಜಿಲ್ಲಾಮಟ್ಟದ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಯೋಜನೆಗಳ ಸದಸ್ಯರು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸ್ಥಳಿಯ ಗ್ಯಾರಂಟಿ ಅಧ್ಯಕ್ಷರು ಹಾಗೂ ಸದಸ್ಯರ ನಿಯೋಗದೊಂದಿಗೆ ಬಸ್​ ನಿಲ್ಧಾಣಗಳ ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿ ವರದಿ ನೀಡಬೇಕು.
> ಪಿ.ಟಿ.ಪರಮೇಶ್ವರ ನಾಯಕ್​ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ