ಈ ಬಗ್ಗೆ ಸ್ವತಃ 'ಎಸ್ಡಿಟಿ 15' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಶ್ರೀ ವೆಂಕಟೇಶ್ವರ ಸಿನಿಸ್, ಚಿತ್ರದ ಸೆಟ್ಗಳಿಗೆ ಆಗಮಿಸಿದ ನಟನನ್ನು ಚಿತ್ರತಂಡ ಸ್ವಾಗತಿಸುವ ವಿಡಿಯೋವೊಂವನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಇನ್ನು, ವಿಡಿಯೋದಲ್ಲಿ ನಟ ಸಾಯಿ ಭಾವುಕರಾಗಿರುವುದು ಕಂಡು ಬಂದಿದೆ. ಸಾಯಿ, "ನನಗೆ ಇಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು," ಎಂದು ತಿಳಿಸಿದ್ದಾರೆ.