ಹೀಗಾಗಿ, ಚಿತ್ರತಂಡ ಖುಷಿಯಾಗಿದ್ದು, ರಾಜಮೌಳಿ ಅವರ 5 ವರ್ಷಗಳ ಕಷ್ಟಕ್ಕೆ ಫಲ ದೊರಕಿದಂತಿದೆ. ಆದರೆ, ಎಸ್ ಎಸ್.ರಾಜಮೌಳಿ ಮತ್ತು ಆಲಿಯಾ ಭಟ್ ಅವರ ನಡುವೆ ಮಾತ್ರ ಏನೋ ಅಸಮಾಧಾನ ಇದ್ದಂತಿದೆ. ಹೌದು, ಈ ಚಿತ್ರತಂಡದ ಬಗ್ಗೆ ಸದ್ಯ ಹಲವು ಗುಸುಗುಸುಗಳು ಕೇಳಿಬರುತ್ತಿವೆ. ‘ಆರ್ಆರ್ಆರ್’ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಘೋಷಣೆಯಾದ ನಂತರವೇ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಮೈಲೇಜ್ ಹೆಚ್ಚಿತ್ತು. ಆದರೆ, ‘ಆರ್ಆರ್ಆರ್’ ಚಿತ್ರದಲ್ಲಿ ನಟಿ ಆಲಿಯಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ ಎಂಬ ಸುದ್ದಿಗಳು ಈಗಲೂ ಕೇಳಿಬರುತ್ತಿವೆ. ಒಂದು ದೀರ್ಘ ಅವಧಿಯ ಚಿತ್ರದಲ್ಲಿ ನಟಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೇವಲ 8 ನಿಮಿಷಗಳಂತೆ. ಇನ್ನು, ಸಿನಿಮಾ ರಿಲೀಸ್ ಆದ ಬಳಿಕ ಚಿತ್ರವನ್ನು ನೋಡಿದ ಆಲಿಯಾಗೆ ಇದರಿಂದ ಬಹಳಷ್ಟು ಅಸಮಾಧಾನವಾಗಿದೆ ಎನ್ನಲಾಗಿದೆ. ‘