ಪ್ರಕಾಶ್ ರಾಜ್ ಅವರು, "ನನ್ನ ದಿನವಾದ ಈ ದಿನದಂದು, ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತಸ ಪಡುತ್ತೇನೆ. ಪ್ರಕಾಶ್ ರಾಜ್ ನೇತೃತ್ವದಲ್ಲಿ 'ಹಿಂದಿರುಗಿಸೋಣ'', ಎಂದು ಬರೆದುಕೊಂಡು 'ಅಪ್ಪು ಎಕ್ಸ್‌ಪ್ರೆಸ್' ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ, ಒಂದು ಟ್ವೀಟ್ನ ಹೊರತು ಪ್ರಕಾಶ್ ಬೇರೆ ಏನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ, ಪುನೀತ್ ಅವರ ಜೊತೆಗೆ ನಟ ಪ್ರಕಾಶ್ ರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಸದ್ಯ 'ಅಪ್ಪು ಎಕ್ಸ್‌ಪ್ರೆಸ್' ಎನ್ನುವ ಯೋಜನೆಯನ್ನು ಕೈಗೊಂಡಿರುವುದಾಗಿ ಮಾತ್ರ ಹೇಳಿಕೊಂಡಿದ್ದು, ಇನ್ನು ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ.