6 ಮರಿಗಳಿಗೆ ಜನ್ಮ ನೀಡಿದ 777 ಚಾರ್ಲಿ ಚಿತ್ರದ ಶ್ವಾನ! ಸಂತಸ ಹಂಚಿಕೊಂಡ ನಟ ರಕ್ಷಿತ್​ ಶೆಟ್ಟಿ

Charlie Dog

ಬೆಂಗಳೂರು: ನಟ ರಕ್ಷಿತ್​ ಶೆಟ್ಟಿ ಅಭಿನಯದ ಸೂಪರ್​ ಹಿಟ್​ “777 ಚಾರ್ಲಿ” ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ, ತನ್ನ ಅಭಿನಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿರುವ ಶ್ವಾನ, ವಾರದ ಹಿಂದಷ್ಟೇ 6 ಮರಿಗಳಿಗೆ ಜನ್ಮ ನೀಡಿದೆ. ಈ ಸುದ್ದಿಯನ್ನು ಸ್ವತಃ ರಕ್ಷಿತ್​ ಶೆಟ್ಟಿಯವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

blank

ಶ್ವಾನ ತರಬೇತುದಾರ ಬಿ.ಸಿ. ಪ್ರಮೋದ್​ ಅವರ ಮೈಸೂರಿನ ಡಿ. ಸಾಲುಂಡಿ ಗ್ರಾಮದ ನಿವಾಸದಲ್ಲಿ ಚಾರ್ಲಿಗೆ ಚೊಚ್ಚಲ ಹೆರಿಗೆಯಾಗಿದೆ. ಜನ್ಮ ನೀಡಿದ ಒಟ್ಟು ಆರು ಮರಿಗಳಲ್ಲಿ ಐದು ಹೆಣ್ಣು ಮತ್ತು ಒಂದು ಗಂಡು. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ರಕ್ಷಿತ್​ ಶೆಟ್ಟಿ, ಬುಧವಾರ (ಮೇ 15) ಮೈಸೂರಿನ ಸಾಲುಂಡಿಗೆ ಆಗಮಿಸಿ, ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಿ ಸಂಭ್ರಮಿಸಿದ್ದಾರೆ. ಅಲ್ಲದೆ, ಸ್ಥಳದಿಂದಲೇ ಇನ್​ಸ್ಟಾಗ್ರಾಂ ಲೈವ್​ ಬಂದು, ಇದೊಂದು ಸರ್ಪ್ರೈಸ್​ ಲೈವ್​, 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ 2 ವರ್ಷ ಕಳೆಯುತ್ತಾ ಬಂತು. ನನಗೆ ಮತ್ತು ‘777 ಚಾರ್ಲಿ’ ಚಿತ್ರತಂಡಕ್ಕೆ ಚಾರ್ಲಿ ತಾಯಿಯಾಗಬೇಕು ಎಂಬ ಆಲೋಚನೆ ಇತ್ತು. ಚಾರ್ಲಿ ತಾಯಿಯಾದರೆ ಈ ಪಯಣ ಸಂಪೂರ್ಣವಾಗಲಿದೆ ಎಂಬ ಭಾವನೆ ಇತ್ತು. ನಾನು ಯಾವಾಗಲೂ ಪ್ರಮೋದ್​ ಅವರಿಗೆ ಕರೆ ಮಾಡಿ ವಿಚಾರಿಸುತ್ತಿದ್ದೆ. ಚಾರ್ಲಿಗೆ ವಯಸ್ಸಾಗಿದೆ ಏನಾಗುತ್ತದೆ ಅಂತಾ ಕಾದು ನೋಡಬೇಕು ಎಂದು ಹೇಳುತ್ತಿದ್ದರು. ಅಂತಿಮವಾಗಿ ಅಚ್ಚರಿಯೆಂಬಂತೆ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಕೊನೆಗೂ ಚಾರ್ಲಿ ಲೈಫ್​ ಜರ್ನಿ ಕಂಪ್ಲೀಟ್​ ಆಯಿತು ಎಂದಿದ್ದಾರೆ.

ಚಾರ್ಲಿ ಮರಿಗಳಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆ ನಾನು ಮೈಸೂರಿಗೆ ಬಂದೆ. ನೀವು 777 ಚಾರ್ಲಿ ಚಿತ್ರದ ಮೇಲೆ ತೋರಿದ ಪ್ರೀತಿಗಾಗಿ ನಾನು ನಿಮಗೆ ಚಾರ್ಲಿ ಮತ್ತು ಅದರ ಮರಿಗಳನ್ನು ತೋರಿಸಬೇಕು ಅಂತ ಈ ಲೈವ್​ ಬಂದೆ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ.

ಶ್ವಾನ ತರಬೇತುದಾರ ಪ್ರಮೋದ್​ ಮಾತನಾಡಿ, ವಾರದ ಹಿಂದೆಷ್ಟೇ ಚಾರ್ಲಿ ನಮ್ಮ ಮನೆಯಲ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಎಲ್ಲ ಮರಿಗಳು ಮತ್ತು ಚಾರ್ಲಿ ಆರೋಗ್ಯವಾಗಿದ್ದಾರೆ. ನಟ ರಕ್ಷಿತ್​ ಶೆಟ್ಟಿಯವರು ಮನೆಗೆ ಆಗಮಿಸಿ, ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಿಕೊಂಡು ಹೋಗಿದ್ದು, ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಪ್ಲೇಆಫ್​ಗೇರಲು RCB-CSK ನಡುವೆ ಹೈವೋಲ್ಟೇಜ್​ ಪಂದ್ಯ! ಭಜ್ಜಿ ಪ್ರಕಾರ ಗೆಲ್ಲೋದು ಇವರೇ…

ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

Share This Article
blank

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

blank