ಇದೀಗ, ನಟ ಅಜಿತ್ ಕುಮಾರ್ ಅವರ ಅಭಿಮಾನಿಗಳು ಆ ಮೀತಿ ದಾಟಿದ್ದಾರೆ. ಹೌದು, ಈಗ ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲಿಯೂ ಟ್ವಿಟರ್ನಲ್ಲಿ #RIPJosephVijay ಎಂಬ ಹ್ಯಾಷ್ ಟ್ಯಾಗ್ ಸಖತ್ ಟ್ರೆಂಡಿಂಗ್ನಲ್ಲಿದೆ. ನಟ ಅಜಿತ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ನಟ ದಳಪತಿ ವಿಜಯ್ ಅವರಿಗೆ ಅಗೌರವ, ಅವಮಾನ ಮಾಡುತ್ತಿದ್ದಾರೆ. ನಟ ವಿಜಯ್ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತುಂಬಾನೆ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಸದ್ಯ, ಈ ವಿಷಯ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.