More

    PHOTO VIRAL | ಸ್ಯಾಂಡಲ್​ವುಡ್​ ನಟರನ್ನು ಮಹಾಭಾರತದ ಪಾತ್ರಗಳಂತೆ ಚಿತ್ರಿಸಿದ AI!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳು ಹೆಚ್ಚಾಗುತ್ತಿದ್ದು ಇತ್ತೀಚಿನ ಈ ಪ್ರವೃತ್ತಿಗೆ ಹೊಸ ಸೇರ್ಪಡೆ ‘ಆದಿಪುರುಷ’ ಚಿತ್ರ.

    ಇದಲ್ಲದೆ, ರಾಜಮೌಳಿ ಮತ್ತು ಅಮೀರ್ ಖಾನ್​ರಂತಹ ಸಿನಿಮಾ ರಂಗದ ಹಿರಿಯರು, ಮಹಾಭಾರತವನ್ನು ಬೆಳ್ಳಿತೆರೆಗೆ ತರಲು ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಉದ್ಭವಿಸುವ ಪ್ರಶ್ನೆ, ಮಹಾಭಾರತದ ಮಹಾಕಾವ್ಯವನ್ನು ಚಲನಚಿತ್ರವಾಗಿ ಮಾಡುವ ಸವಾಲನ್ನು ಕನ್ನಡ ಚಿತ್ರರಂಗ ತೆಗೆದುಕೊಂಡರೆ, ಯಾವ ಪಾತ್ರಕ್ಕೆ ನಟ ಸೂಕ್ತವಾಗುತ್ತಾರೆ? ಸಾಧ್ಯತೆಗಳು ಕುತೂಹಲ ಕೆರಳಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಂದಿರುವ ಕಾಲದಲ್ಲಿ ಸಿನಿ ಅಭಿಮಾನಿಗಳು ಯಾವುದಕ್ಕೂ ಕಾಯುವುದು ಬೇಡ. ತಮ್ಮ ಕಲ್ಪನೆಗಳನ್ನು ಕೃತಕ ಬುದ್ಧಿಮತ್ತೆಗೆ ತಿಳಿಸಿದರೆ ಯಾವ ಪೌರಾಣಿಕ ಪಾತ್ರಗಳಲ್ಲಿ ಯಾರು ಹೇಗೆಲ್ಲಾ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕೃತಕ ಬುದ್ಧಿಮತ್ತೆಯೇ ತೋರಿಸಿದೆ!

    Kannada Actors As Mahabharata Characters

    ಇದನ್ನೂ ಓದಿ: ಮಹಾಭಾರತ ಧಾರಾವಾಹಿ ಖ್ಯಾತಿಯ ಶಕುನಿ ಪಾತ್ರಧಾರಿ ಗುಫಿ ಆಸ್ಪತ್ರೆಗೆ ದಾಖಲು

    ಗ್ರಾಫಿಕ್ ಡಿಸೈನರ್​ ಆಗಿರುವ ದೀಪೇಶ್ ಎನ್ನುವವರು AI ಸಹಾಯದೊಂದಿಗೆ ಈ ಮನಮುಟ್ಟುವ ಫೋಟೊಗಳನ್ನು ಸೃಷ್ಟಿಸಿದ್ದಾರೆ. ಕನ್ನಡ ನಟರು ಮಹಾಭಾರತದ ಪೌರಾಣಿಕ ಪಾತ್ರಗಳಲ್ಲಿ ಅದ್ಭುತ ಸನ್ನಿವೇಶವನ್ನು ಅವರು ಕಲ್ಪಿಸಿಕೊಂಡಿದ್ದು, ನಿಜವಾಗಿಯೂ ನೋಡಲೇ ಬೇಕಾದ ಫೋಟೊಗಳು ಇವು.

    ದುರ್ಯೋಧನನ ಪಾತ್ರದಲ್ಲಿ ದರ್ಶನ್ ಶಕ್ತಿಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಭೀಮನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬೃಹತ್ ಗದೆಯನ್ನು ಹಿಡಿದಿದ್ದು, ತಮ್ಮ ಫಿಟ್​ ಮೈಕಟ್ಟು ಪ್ರದರ್ಶಿಸಿದ್ದಾರೆ. ಶಿವರಾಜ್‌ಕುಮಾರ್ ಅವರು ಬುದ್ಧಿವಂತ ದ್ರೋಣಾಚಾರ್ಯರಾಗಿ, ಕೇಸರಿ ಉಡುಪಿನಲ್ಲಿ, ಗುರುಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

    Kannada Actors As Mahabharata Characters

    ಆದರೆ ಅಷ್ಟೆ ಅಲ್ಲ! AIನ ಕಲಾ ಸಾಮರ್ಥ್ಯವನ್ನು ದೀಪೇಶ್ ಇಷ್ಟಕ್ಕೇ ನಿಲ್ಲಿಸದೇ, ಕಿಚ್ಚ ಸುದೀಪ್ ಅವರನ್ನು ಭಗವಾನ್ ಕೃಷ್ಣನಾಗಿ, ಕೆಜಿಎಫ್ ಖ್ಯಾತಿಯ ಯಶ್, ವೀರ ಕರ್ಣನಾಗಿ ಮತ್ತು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಕರ್ಷಕ ಅರ್ಜುನನಾಗಿ ಚಿತ್ರಿಸಿದ್ದಾರೆ. ಜನರ ಪ್ರೀತಿಯ ಅಪ್ಪು ಅಂತೂ, ಬಿಲ್ಲು ಬಾಣವನ್ನು ಪ್ರಭಾವಶಾಲಿ ರೂಪದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಇನ್ನು ಕುರುವಂಶಕ್ಕೆ ಹಿರಿಯರಾದ ಭೀಷ್ಮನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಜ್ ಬಿ ಶೆಟ್ಟಿ ಕುತಂತ್ರಿ ಶಕುನಿಗೆ ಜೀವ ತುಂಬಿದ್ದರೆ ರಚಿತಾ ರಾಮ್ ದೌಪದಿಯಾಗಿ ಮಿಂಚಿದ್ದಾರೆ.

    ಇದನ್ನೂ ಓದಿ: 10 ಭಾಗಗಳಲ್ಲಿ ತೆರೆಗೆ ಬರಲಿದೆ ಮಹಾಭಾರತ! ಕನಸಿನ ಯೋಜನೆ ಬಗ್ಗೆ ಮಾತನಾಡಿದ ರಾಜ್​ಮೌಳಿ.. 

    Kannada Actors As Mahabharata Characters

    AIಯ ನಿರಂತರವಾಗಿ ವಿಸ್ತರಿಸುತ್ತಿರುವ ಸಾಮರ್ಥ್ಯಗಳೊಂದಿಗೆ, ಸೃಜನಾತ್ಮಕ ಅಭಿವ್ಯಕ್ತಿಯ ಸಾಧ್ಯತೆಗಳು ಅಪರಿಮಿತವೆಂದು ತೋರುತ್ತದೆ. ರಾಮಾಯಣ- ಮಹಾಭಾರತದಂತಹ ಮಹಾಕಾವ್ಯಗಳವರೆಗೆ, AI ನಾವು ಒಮ್ಮೆ ಅಸಾಧ್ಯ ಎಂದು ಭಾವಿಸಿದ್ದನ್ನು ನಿಜ ಜೀವನಕ್ಕೆ ಇಳಿಸುವ ಸಾಮರ್ಥ್ಯದೊಂದಿಗೆ ನಮ್ಮನ್ನು ವಿಸ್ಮಯಗೊಳಿಸುವುದನ್ನು ಮುಂದುವರೆಸಿದೆ. ಮನರಂಜನಾ ಕ್ಷೇತ್ರ ಇದೀಗ ಎಂದಿಗಿಂತಲೂ ಹೆಚ್ಚು ಮಾಂತ್ರಿಕವಾಗಿ ಕಾಣುತ್ತಿದೆ! (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts