More

    ಮತದಾನ ಹಕ್ಕು ತಪ್ಪದೇ ಚಲಾಯಿತಿ

    ಸಿಂದಗಿ: ದೇಶದ ಜನರು ಪ್ರಜ್ಞಾವಂತರಾದರೂ ಕೆಲವು ಕಾರಣಗಳಿಂದ ಮತದಾನದ ಪ್ರಮಾಣ ಕುಂಠಿತಗೊಳ್ಳುತ್ತಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

    ಲೋಕಸಭಾ ಚುನಾವಣೆ ನಿಮಿತ್ತ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವಿಜಯಪುರ ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ ಮತ್ತು ತಾಲೂಕ ಸ್ವೀಪ್ ಸಮಿತಿ ಸಿಂದಗಿ, ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಭವಿಷ್ಯದ ನಾಗರಿಕರಾದ ವಿದ್ಯಾರ್ಥಿಗಳನ್ನು ಮತದಾನ ಜಾಗೃತಿಗೆ ಅಣಿಗೊಳಿಸುವ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ. ಮತ ನಮ್ಮ ಹಕ್ಕು. ಅದನ್ನು ಶ್ರದ್ಧೆಯಿಂದ ಚಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ಆಶಯ ಮತ್ತು ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಾವೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ದೇಶದ ಪೌರರಾದ ನಾವು ಸಂವಿಧಾನ ಬದ್ಧವಾದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಪಾಲಿಸಿ, ಮುಕ್ತ ಮತ್ತು ನ್ಯಾಯ ಸಮ್ಮತವಾದ, ಪ್ರಜಾಪ್ರಭುತ್ವದ ಆಯ್ಕೆಯಲ್ಲಿ ದೃಢವಿಶ್ವಾಸದಿಂದ ಪಾಲ್ಗೊಂಡು, ಶೇಕಡಾ ನೂರಕ್ಕೆ ನೂರರಷ್ಟು ಮತದಾನಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದರು.

    ವಿದ್ಯಾರ್ಥಿಗಳ ಮತದಾನ ಜಾಗೃತಿ ಅಭಿಯಾನ ಸಾರಂಗಮಠದಿಂದ ಆರಂಭಗೊಂಡು ಕನಕದಾಸ ವೃತ್ತ, ಗೌಡರ ಓಣಿ, ಮಲ್ಲಿಕಾರ್ಜುನ ದೇವಸ್ಥಾನ, ಹೆಗ್ಗೇರೇಶ್ವರ ದೇವಸ್ಥಾನ, ಹಳೆಯ ಬಜಾರ ಮಾರ್ಗವಾಗಿ ಸಾಗಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಕೊನೆಗೊಂಡಿತು. ಅಭಿಯಾನದಲ್ಲಿ ಪ್ರಶಿಕ್ಷಣಾರ್ಥಿಗಳು ನಾಗರಿಕರಿಗೆ ಕರಪತ್ರ ನೀಡಿ ಮತದಾನ ಜಾಗೃತಿ ಮೂಡಿಸಿದರು.

    ಅಭಿಯಾನದಲ್ಲಿ ಪ್ರಾಚಾರ್ಯೆ ಜೆ.ಸಿ. ನಂದಿಕೋಲ, ಉಪನ್ಯಾಸಕ ಪ್ರಶಾಂತ ಕುಲಕರ್ಣಿ, ಪ್ರಶಾಂತ ಕುಲಕರ್ಣಿ, ಆರ್.ಎ. ಹಾಲಕೇರಿ, ಸಿ.ಜಿ. ಕತ್ತಿ, ವಿದ್ಯಾ ಮೋಗಲಿ, ಸುಧಾಕರ ಚವ್ಹಾಣ, ಮಹಾದೇವಿ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts