More

    ಸಿಎಂ ಬೈದರೂ ಆಶೀರ್ವಾದ ಇದ್ದಂತೆ

    ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನಗೆ ಆದರ್ಶ, ಸ್ಫೂರ್ತಿ. ಅವರು ತೆಗಳಲಿ, ಹೊಗಳಲಿ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್ ಹೇಳಿದರು.
     ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದರು. ಆದರೂ ಕಣದಲ್ಲಿ ಇರುವುದರಿಂದ ಕೋಪ, ಅಸಮಾಧಾನ ಆಗಿರಬಹುದು. ಜಿಲ್ಲೆಯ ಜನರು ತೋರಿದ ಪ್ರೀತಿ, ವಿಶ್ವಾಸ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆ ಮಾಡಿದ್ದೇನೆ. ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
     ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ರಾಜಕಾರಣದಲ್ಲಿ ತಂತ್ರ, ಪ್ರತಿತಂತ್ರ ಇದ್ದೇ ಇರುತ್ತದೆ. ವಿನಯ್ ಕುಮಾರ್ ಗೆದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏನೂ ಕೆಲಸ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದೂ ಹೇಳಿದ್ದಾರೆ. ಇದು ನನಗೆ ಆಶೀರ್ವಾದವೆಂದು ತಿಳಿಯುವುದಾಗಿ ಹೇಳಿದರು.
     ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಒಂದು ವರ್ಷದ ರಾಜಕಾರಣದಲ್ಲಿ ಇಷ್ಟು ಹೆಸರು ಮಾಡಲು ಅವರೂ ಸಹ ಪ್ರಮುಖ ಕಾರಣ. ನಾನು ಇಲ್ಲಿ ಹೋರಾಟ ಮಾಡಿದ್ದೇನೆ. ಎಐಸಿಸಿ ಮಟ್ಟದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿಕೆ ವಿಚಾರದಲ್ಲಿ ನನ್ನ ಹೆಸರು ಪ್ರಸ್ತಾಪವಾಗಲು ಸಿಎಂ ಅವರ ಸಹಕಾರ ಕಾರಣ ಎಂದರು.
     ನಾನು ಮೋದಿ ಅವರ ಬಳಿ ಕೆಲಸ ಕೇಳಲು ಹೋಗುವುದಿಲ್ಲ, ಸಂಸದನಾದರೆ ಅವರ ಬಳಿಯೆ ಅನುದಾನ ಕೇಳಬೇಕು ಎಂದೇನಿಲ್ಲ. ನಾನು ಈಗಲೂ ಕಾಂಗ್ರೆಸ್‌ನಲ್ಲಿಯೆ ಇದ್ದೇನೆ. ನಾಲ್ಕು ದಿನಗಳ ಬಳಿಕ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆಯಲ್ಲಿಯೆ ಮುಂದುವರಿಯುತ್ತಿದ್ದೇನೆ. ಯಾವುದೆ ಸರ್ಕಾರ ಇದ್ದರೂ ಅನುದಾನ ತಂದು ಹೇಗೆ ಅಭಿವೃದ್ಧಿ ಮಾಡಬೇಕು ಎಂಬುದು ನನಗೆ ಗೊತ್ತು. ನನಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಆಗುವುದಿಲ್ಲ ಎಂದು ಹೇಳಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts