More

  ಸಿಎಸ್​ಕೆ ವಿರುದ್ಧ 27 ರನ್​ಗಳ ಭರ್ಜರಿ ಜಯ; ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಿಷ್ಟು

  ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 27ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇಆಫ್​ಗೆ ಲಗ್ಗೆ ಇಟ್ಟಿದೆ.  ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್, ಬೌಲಿಂಗ್​ನಲ್ಲೂ ಅಮೋಘ ಪ್ರದರ್ಶನ ತೋರಿದ ಆರ್​ಸಿಬಿ ಸಿಎಸ್​ಕೆ ತಂಡವನ್ನು ಪ್ಲೇಆಫ್​ ರೇಸ್​ನಿಂದ ಹೊರದಬ್ಬುವಲ್ಲಿ ಯಶಸ್ವಿಯಾಯಿತು. ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ನಾಯಕ ಫಾಫ್​ ಡು ಪ್ಲೆಸಿಸ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ನನ್ನ ಕೈಯಲ್ಲಿ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ತವರಿನಲ್ಲಿ ಜಯ ಸಾಧಿಸಿ ಲೀಗ್ ಹಂತವನ್ನು ಮುಗಿಸಿರುವುದು ಖುಷಿ ತಂದಿದೆ. ಇದು ಟಿ20ಯಲ್ಲಿ ನಾನು ಆಡಿದ ಅತ್ಯಂತ ಕಠಿಣ ಪಿಚ್ ಎಂದು ಭಾವಿಸುತ್ತೇನೆ. ಮಳೆಯ ಬಳಿಕ ನಾನು ಮತ್ತು ವಿರಾಟ್ 140-150 ರನ್​ಗಳ ಬಗ್ಗೆ ಮಾತನಾಡುತ್ತಿದ್ದೆವು. ಈ ಪಿಚ್​ನಲ್ಲಿ 200 ಗಳಿಸಿದ್ದು, ನಂಬಲು ಸಾಧ್ಯವಾಗಲಿಲ್ಲ. ಆದರೆ, ಕಳೆದ 6 ಪಂದ್ಯಗಳಲ್ಲಿ ನಮ್ಮ ಬ್ಯಾಟರ್‌ಗಳು ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದ್ದಾರೆ. ನಾವು ಆರಂಭದಲ್ಲಿ ನಿಧಾನವಾಗಿದ್ದೆವು. ಅಂತಿಮವಾಗಿ ಕಠಿಣ ಟಾರ್ಗೆಟ್ ಬಂದಿದ್ದು ಖುಷಿ ನೀಡಿತು.

  faf du plesi

  ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ವಿರಾಟ್​​ ಕೊಹ್ಲಿ

  ಧೋನಿ ಬ್ಯಾಟ್​ ಮಾಡುವ ವೇಳೆ ನನಗೆ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಏಕೆಂದರೆ ಅನೇಕ ಬಾರಿ ಅವರು ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಟ್ಟಿರುವುದನ್ನು ನಾವು ನೋಡಿದ್ದೇವೆ. ವೆಟ್​ ಔಟ್​ಫೀಲ್ಡ್​ನಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ನಂಬಲಾಗದಂತಿತ್ತು. ಯಶ್​ ದಯಾಳ್​ ಬೌಲಿಂಗ್​ ಮಾಡಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ನಾನು ನನ್ನ ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಯನ್ನು ಅವರಿಗೆ ನೀಡುತ್ತೇನೆ.

  ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಯಾರ್ಕರ್​ ಅಷ್ಟಾಗಿ ಕೆಲಸ ಮಾಡಲಿಲ್ಲ. ನಂತರ ನಂಬಲಾಗದಷ್ಟು ಚೆನ್ನಾಗಿ ಬೌಲಿಂಗ್ ಮಾಡಿದರು. ನಮಗೆ ಸದಾ ಪ್ರೋತ್ಸಾಹ ನೀಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ನಮಗೆ ಪ್ರೋತ್ರಾಹಿಸಿದ ರೀತಿನಮಗೆ ಹೆಚ್ಚು ಶಕ್ತಿ ನೀಡಿತ್ತು ಎಂದು ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts