More

  ನಿಮ್ಮ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಈ 6 ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಸಾಕು

  ಬೆಂಗಳೂರು: ನಮ್ಮಲ್ಲಿ ಅನೇಕರು ತಮ್ಮ ದೈನಂದಿನ ಕೆಲಸ-ಕಾರ್ಯಗಳಲ್ಲಿ ಚುರುಕಾಗಿ ಇರುವುದೇ ಇಲ್ಲ. ಕೆಲಸಕ್ಕೆ ಬಂದ ಮೇಲೆಯೇ ಹೆಚ್ಚು ಸೋಮಾರಿತನ ತೋರುತ್ತಾರೆ. ಅದರಲ್ಲೂ ದಿನನಿತ್ಯ ಕೆಲಸ ಮಾಡಿ, ಸಂಜೆ ಅದರ ಬಗ್ಗೆ ಕೇಳಿದ್ರೆ, ಮಾಡಿದ ಕೆಲಸಗಳೇನು ಎಂಬುದೇ ನೆನಪಿನಲ್ಲಿ ಇರುವುದಿಲ್ಲ. ಇದರ ಜತೆಗೆ ಯಾವುದೇ ಅಥವಾ ಎಂತಹ ಸಂದರ್ಭಗಳನ್ನು ಕೊಟ್ಟರು, ಅದನ್ನು ಬುದ್ಧವಂತಿಕೆಯಿಂದ ಬೇಧಿಸುವ ಸಾಮರ್ಥ್ಯವನ್ನೇ ಇಂದಿನ ಯುವಜನತೆ ಕಳೆದುಕೊಂಡಿದೆ.

  ಇದನ್ನೂ ಓದಿ: ಅಪಘಾತದಲ್ಲಿ ನಟಿ ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ಆಕೆಯ ಗೆಳೆಯ ಚಂದು ಆತ್ಮಹತ್ಯೆಗೆ ಶರಣು!

  ಇದಕ್ಕೆ ಮೊದಲು ಅಗತ್ಯವಿರುವುದು ಉತ್ತಮ ಬುದ್ಧಿಶಕ್ತಿ. ಯಾರಿಗೆ ಬುದ್ಧಿಶಕ್ತಿ ಚೆನ್ನಾಗಿ ಕೆಲಸ ಮಾಡುತ್ತದೆಯೋ, ಅಂತವರು ಇಂದು ಹಲವಾರು ಸಾಧನೆಗಳನ್ನು ಮಾಡಿದ್ದಾರೆ, ಇತರರಿಗೆ ಮಾರ್ಗದರ್ಶನವಾಗಿ ನಿಂತಿದ್ದಾರೆ. ನಮ್ಮಲ್ಲಿಯೂ ಇದೇ ರೀತಿ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿ ತಿಳಿಸಲಾದ ಆರು ಸರಳ ಅಭ್ಯಾಸಗಳನ್ನು ಅನುಸರಿಸಿ.

  ಓದುವುದು: ಕಥೆ, ಕಾದಂಬರಿ, ಕವನ ಹೀಗೆ ವಿವಿಧ ವಿಭಾಗಗಳನ್ನು ಹೊಂದಿರುವ ಹಲವಾರು ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ನಿಮ್ಮ ಬುದ್ಧಿಶಕ್ತಿ ಕ್ರಮೇಣವಾಗಿ ಹೆಚ್ಚಾಗುತ್ತದೆ. ಓದುವ ಹವ್ಯಾಸ ನಿಮ್ಮ ಚಿಂತನೆ, ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಸಹ ಹೆಚ್ಚಿಸುತ್ತದೆ.

  ಇದನ್ನೂ ಓದಿ: ನನ್ನ ಬಂಧನ ಯಾವ ವ್ಯತ್ಯಾಸ ತರುವುದಿಲ್ಲ, ಪ್ರತಿಯೊಬ್ಬ ಎಎಪಿ ಕಾರ್ಯಕರ್ತ ಕೂಡ ಕೇಜ್ರಿವಾಲ್​: ದೆಹಲಿ ಸಿಎಂ

  ಸಾಮಾಜಿಕ ಸಂವಹನ: ಅನೇಕ ವ್ಯಕ್ತಿಗಳೊಂದಿಗೆ ಉತ್ತಮ ಸಂಭಾಷಣೆ ನಡೆಸುವುದರಿಂದ ನಿಮ್ಮ ಬುದ್ಧಿಶಕ್ತಿ ಮತ್ತು ಚಿಂತಿಸುವ ದಾಟಿ ಮತ್ತು ದೃಷ್ಟಿಕೋನಗಳು ಬದಲಾಗುತ್ತವೆ. ವಿಚಾರವಂತರೊಂದಿಗೆ ಹೆಚ್ಚು ಸಮಯ, ಒಳ್ಳೆಯ ವಿಷಯ ಕುರಿತು ನಡೆಸುವ ಸಂಭಾಷಣೆ ನಿಮ್ಮ ಬುದ್ಧಿಶಕ್ತಿಗೆ ಮತ್ತಷ್ಟು ಪುಷ್ಠಿ ನೀಡುತ್ತದೆ.

  ಯಶಸ್ಸಿನ ಬಗ್ಗೆ ಗಮನಹರಿಸಿ: ನಿಮ್ಮ ಯಶಸ್ಸಿನ ಹಾದಿಯಲ್ಲಿ ಕೇವಲ ಗೆಲುವು ಮಾತ್ರವಲ್ಲ ಸೋಲು, ಅನುಭವಗಳ ಬಗ್ಗೆ ನಿರಂತರವಾಗಿ ಚಿಂತಿಸಿ, ಗಮನಹರಿಸಿ, ಇದನ್ನು ನಿಲ್ಲಿಸಬೇಡಿ. ಇದು ಕೂಡ ನಿಮ್ಮ ಬುದ್ಧಿಶಕ್ತಿ ಹೆಚ್ಚಿಸಲು ತುಂಬ ಸಹಾಯ ಮಾಡುತ್ತದೆ.

  ಇದನ್ನೂ ಓದಿ: ‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

  ಇತರರಿಗೆ ಬೋಧನೆ ಮಾಡಿ: ನಾವೆಲ್ಲಾ ನೋಡಿರುವ ಹಾಗೆ ನಮ್ಮಲ್ಲಿ ಶಿಕ್ಷಕರು ಬಿಟ್ಟರೆ ಉಳಿದ ಯಾರು ಸಹ ಬೋಧನೆ ಮಾಡುವ ಕೆಲಸವನ್ನು ಇಚ್ಛಿಸುವುದಿಲ್ಲ. ಯಾಕಂದ್ರೆ, ನಾವೇನು ಟೀಚರ್​ಗಳೇ? ಎಂದು ಭಾವಿಸುತ್ತಾರೆ. ಅಸಲಿಗೆ ಶಿಕ್ಷಕರು ಮಾಡುವ ಪಾಠ ನೀವು ಮಾಡಬೇಕಿಲ್ಲ. ನಿಮ್ಮ ಸ್ನೇಹಿತರಿಗೆ ಅಥವಾ ವಿಚಾರಗಳ ಅಗತ್ಯ ಯಾರಿಗೆ ಇದೆಯೋ, ಅಂತವರಿಗೆ ಬೋಧನೆ ಮಾಡುವುದರಲ್ಲಿ ತಪ್ಪಿಲ್ಲ. ಹೀಗೆ ಮಾಡುವುದರಿಂದ ಇಬ್ಬರ ಬುದ್ಧಿಶಕ್ತಿ ಕೂಡ ಹೆಚ್ಚಾಗುತ್ತದೆ.

  ಕಲಿಯುವ ಮಾರ್ಗ: ವಿವಿಧ ರೀತಿಯಲ್ಲಿ ಕಲಿಕೆಗೆ ಆದ್ಯತೆ ಕೊಡುವುದು ಅಗತ್ಯ. ಉದಾಹರಣೆಗೆ, ಕೇಳುವುದರಿಂದ, ನೋಡುವುದರಿಂದ, ಪ್ರಯೋಗ ಮಾಡುವುದರಿಂದ ಹೀಗೆ ಯಾವ ಮಾರ್ಗದಲ್ಲಿ ಕಲಿಯುವುದು ನಿಮಗೆ ಸುಲಭ ಎನಿಸುತ್ತದೆಯೋ, ಅದನ್ನು ಪಾಲಿಸುವುದರಿಂದ ಅಥವಾ ಅಳವಡಿಸಿಕೊಳ್ಳುವುದರಿಂದ ಬುದ್ಧಿಶಕ್ತಿ ಹೆಚ್ಚಳಕ್ಕೆ ಸಹಾಯವಾಗುತ್ತದೆ.

  ಇದನ್ನೂ ಓದಿ: ಆತನಿಗಾಗಿ 22ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡ ಬಾಲಿವುಡ್​ನ ಖ್ಯಾತ ನಟಿ!

  ಪ್ರಚಲಿತ ವಿದ್ಯಮಾನ: ಪ್ರತಿನಿತ್ಯ ಜಗತ್ತಿನಲ್ಲಿ ಏನಾಗುತ್ತಿದೆ? ಏನೆಲ್ಲಾ ಘಟನೆಗಳು ಸಂಭವಿಸುತ್ತಿದೆ ಎಂಬುದರ ಅಪ್ಡೇಟ್​ ನಮಗೆ ಇರಬೇಕು. ಇದಕ್ಕಾಗಿ ನ್ಯೂಸ್​ಪೇಪರ್​, ರೇಡಿಯೋ ಹೀಗೆ ಹಲವು ಸಾಧನಗಳಿಂದ ಮಾಹಿತಿ ಪಡೆಯುವುದು ಉತ್ತಮ. ಇದು ನಿಮ್ಮ ಬುದ್ಧಿಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ,(ಏಜೆನ್ಸೀಸ್).

  ‘ಆತನದು ಸ್ಟಾಪ್-ಸ್ಟಾರ್ಟ್ ಕರಿಯರ್’​! ವಿರಾಟ್​ ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ ಸುನಿಲ್ ಗವಾಸ್ಕರ್​, ಇದೆಲ್ಲಾ ನಿಮಗೆ…

  ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts