More

    ರಾತ್ರಿ ಬಟ್ಟೆ ಇಲ್ಲದೆ ಬೆತ್ತಲಾಗಿ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ಆರೋಗ್ಯಕ್ಕೆ ಒಳ್ಳೆಯದ್ದು ಬಿಡಿ..

    ಬೆಂಗಳೂರು: ಅನೇಕ ಜನರು ರಾತ್ರಿ ಮಲಗುವಾಗ ನೈಟ್ ವೇರ್ ಧರಿಸುತ್ತಾರೆ. ಕೆಲವರು ದಿನವಿಡೀ ಇರುವ ಉಡುಪಿನಲ್ಲೇ ಮಲಗುತ್ತಾರೆ. ಆದರೆ ನಿಜವಾದ ಬಟ್ಟೆ ಇಲ್ಲದೆ ರಾತ್ರಿ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಆಆರೋಗ್ಯ ತಜ್ಞರು.

    ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ದೇಹಕ್ಕೆ ಸಾಕಷ್ಟು ಗಾಳಿ ಬಂದರೆ ಅಲರ್ಜಿ ಬರುವುದಿಲ್ಲ ಎನ್ನುತ್ತಾರೆ ತಜ್ಞರು.

    ಬಟ್ಟೆ ಇಲ್ಲದೆ ಮಲಗುವುದು ನಿದ್ರಾಹೀನತೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಡೀ ದಿನದ ದಣಿವು ದೂರವಾಗುತ್ತದೆ ಮತ್ತು ನಿದ್ರೆ ನಡೆಯುತ್ತದೆ.

    ಒಳಉಡುಪು ಇಲ್ಲದೆ ಮಲಗಿದರೆ ಆಗ ದೇಹದ ಸಂಪೂರ್ಣ ಉಷ್ಣತೆಯು ಕಡಿಮೆಯಾಗುವುದು. 37 ಡಿಗ್ರಿಗಿಂತ ಕಡಿಮೆ ತಾಪಮಾನವಿದ್ದರೆ ಆಗ ಆರೋಗ್ಯಕರವಾಗಿ ವೀರ್ಯದ ಉತ್ಪತ್ತಿಯಾಗುವುದು.

    ರಾತ್ರಿ ಬಟ್ಟೆ ಇಲ್ಲದೆ ಮಲಗುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಹೀಗೆ ಮಲಗುವುದರಿಂದ ಮೆಟಬಾಲಿಕ್ ರೇಟ್ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

    ರಾತ್ರಿ ಬಟ್ಟೆ ಇಲ್ಲದೆ ಮಲಗುವುದು ಕೂಡ ತೂಕ ಇಳಿಸಲು ಉಪಯುಕ್ತ ಎಂದು ಹೇಳಲಾಗುತ್ತದೆ. ಹೀಗೆ ಮಲಗುವುದರಿಂದ ಚಯಾಪಚಯ ಕ್ರಿಯೆ ಚುರುಕುಗೊಂಡು ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

    ಉಡುಪಿಲ್ಲದೆ ದೇಹ ನಿರಾಳವಾಗುತ್ತದೆ. ಇದರಿಂದಾಗಿ ದೇಹದಲ್ಲಿ ಆನಂದವನ್ನು ಹೆಚ್ಚಿಸುವ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ. ಇದರಿಂದ ಒತ್ತಡ, ಖಿನ್ನತೆಯಂತಹ ಸಮಸ್ಯೆಗಳು ದೂರವಾಗುತ್ತವೆ.

    ರಾತ್ರಿಯಲ್ಲಿ ಬೆತ್ತಲೆಯಾಗಿ ಮಲಗುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ. ಅಧಿಕ ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆಯೂ ದೂರವಾಗುತ್ತದೆ.

    ಗಮನಿಸಿ: ಮೇಲಿನ ಮಾಹಿತಿಯು ಮೂಲಭೂತ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಉತ್ತಮ.

    ಬೇಡಾ ಅಂದ್ರು ಬಿಡಲಿಲ್ಲ..ನಾಲಿಗೆಯಿಂದ ನನ್ನ ಮುಖ ನೆಕ್ಕಿದ ನಂತ್ರ 10 ಸಲ ತೊಳೆದುಕೊಂಡೆ ಎಂದ ‘ಮೊನಾಲಿಸಾ’ ನಟಿ ಸದಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts