ಬೇಡಾ ಅಂದ್ರು ಬಿಡಲಿಲ್ಲ..ನಾಲಿಗೆಯಿಂದ ನನ್ನ ಮುಖ ನೆಕ್ಕಿದ ನಂತ್ರ 10 ಸಲ ತೊಳೆದುಕೊಂಡೆ ಎಂದ 'ಮೊನಾಲಿಸಾ' ನಟಿ ಸದಾ...

sadha
Published on

ಮುಂಬೈ: ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸದಾ ಅವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ದಕ್ಷಿಣ ಭಾರತದ ಪ್ರಖ್ಯಾತ ನಟಿ ಸದಾ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟಿ ಸಿನಿಮಾ ಶೂಟಿಂಗ್​ವೊಂದರಲ್ಲಿ ಉಂಟಾಗಿದ್ದ ಮುಜುಗರದ ಸಂಗತಿಯೊಂದನ್ನು ರಿವೀಲ್​​ ಮಾಡಿದ್ದಾರೆ.

ಸದಾ ನಟಿಸಿದ ಮೊದಲ ಸಿನಿಮಾ ತೆಲುಗಿನ 'ಜಯಂ' ದೊಡ್ಡ ಹಿಟ್ ಅಯ್ತು. ಇದಾದ ನಂತರದಲ್ಲಿ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದರು. ಅದ್ಯಾಕೋ ಏನೋ ಸದಾ ಅವರು ವರ್ಷಕ್ಕೆ ಒಂದು ಎರಡು ಸಿನಿಮಾ ಮಾಡತೊಡಗಿದರು. 2002ರಿಂದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಸದಾ ಸಿನಿಮಾಗಳ ಸಂಖ್ಯೆ ಬಹಳ ಕಡಿಮೆ.

ಸದಾ ಅವರು ನಟಿಸಿದ್ದ ಮೊಟ್ಟಮೊದಲ ಚಿತ್ರ ಜಯಂನ ನಿರ್ದೇಶಕ ತೇಜ. ಈ ಚಿತ್ರದಲ್ಲಿ ನಿತಿನ್‌ ಹೀರೋ ಆಗಿದ್ದರು. ಆಲ್‌ ಟೈಮ್‌ ಬ್ಲಾಕ್‌ಬಸ್ಟರ್‌ ಆಗಿದ್ದ ಈ ಸಿನಿಮಾದ ಒಂದು ದೃಶ್ಯ ಈಗಲೂ ತಮಗೆ ಕಾಡುತ್ತಿದೆ. ತನಗೆ ಒಂಚೂರು ಇಷ್ಟವಿಲ್ಲದ ದೃಶ್ಯವೊಂದರಲ್ಲಿ ನಟಿಸುವಂತೆ ನಿರ್ದೇಶಕರು ಒತ್ತಾಯ ಹಾಕಿದ್ದರು. ಸಾಕಷ್ಟು ಹೀರೋ ಹಾಗೂ ಹೀರೋಯಿನ್‌ರನ್ನು ಸ್ಟಾರ್‌ ಆಗಿ ಮಾಡಿದ ನಿರ್ದೇಶಕ ತೇಜಾ ವಿರುದ್ಧ ಸದಾ ಇಂಥದ್ದೊಂದು ಆರೋಪ ಮಾಡಿದ್ದಾರೆ.

ಸದಾ ಮಾತನಾಡಿ,  ಚಿತ್ರದ ಒಂದು ದೃಶ್ಯದಲ್ಲಿ ಸದಾ, ನಿತಿನ್‌ ಹಾಗೂ ಗೋಪಿಚಂದ್‌ ಮೂವರು ಇದ್ದರು. ಈ ಚಿತ್ರದಲ್ಲಿ ಗೋಪಿಚಂದ್‌ ವಿಲನ್‌ ಆಗಿ ನಟಿಸಿದ್ದರು. ಒಂದು ಸಮಯದಲ್ಲಿ ನನಗೆ ಒಂಚೂರು ಇಷ್ಟವಿಲ್ಲದ ದೃಶ್ಯದಲ್ಲಿ ನಟಿಸಲೇಬೇಕಾದ ಅನಿವಾರ್ಯತೆ ಎದುರಾಯಿತು. ಒಂದು ಸೀನ್‌ನಲ್ಲಿ ಗೋಪಿಚಂದ್‌ ನನ್ನ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕುತ್ತಾರೆ. ಚಿತ್ರದ ಚಿತ್ರೀಕರಣ ಮಾಡುವಾಗ ಈ ದೃಶ್ಯದಲ್ಲಿ ನಾನು ನಟಿಸೋದೇ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದಲ್ಲದೆ, ಬೇಕಿದ್ದಲ್ಲಿ ನಾನು ಚಿತ್ರದಿಂದ ಬೇಕಾದರೆ ಹೊರಹೋಗಲು ಸಿದ್ಧ ಎಂದಿದ್ದೇನು. ನಿರ್ದೇಶಕರಾಗಿದ್ದ ತೇಜ ಯಾವುದನ್ನೂ ಕೇಳಲಿಲ್ಲ. ಈ ದೃಶ್ಯವೇ ಚಿತ್ರದಲ್ಲಿ ಹೈಲೈಟ್‌ ಆಗಿರಲಿದೆ ಎಂದಿದ್ದರು. ಆ ದೃಶ್ಯದ ಬಳಿಕ ನಾನು ಬಹುಶಃ 10 ಸಾರಿ ಮುಖ ತೊಳೆದುಕೊಂಡಿದ್ದೆ. ಮನಸ್ಸಿಗೆ ಸಾಕಷ್ಟು ನೋವು ಕೂಡ ಆಗಿತ್ತು ಎಂದಿದ್ದಾರೆ.

2016ರಲ್ಲಿ 'ದಿಲ್ ತೋ ದಿವಾನಾ ಹೇ', 2018ರಲ್ಲಿ 'ಟಾರ್ಚ್‌ಲೈಟ್', 2020ರಲ್ಲಿ 'ಕಿಟ್ಟಿಪಾರ್ಟಿ' ಸಿನಿಮಾಗಳಲ್ಲಿ ಸದಾ ನಟಿಸಿದ್ದರು. ಕನ್ನಡದ 'ಮೊನಾಲಿಸಾ', 'ಮೋಹಿನಿ 9886788888', 'ಹುಡುಗ ಹುಡುಗಿ', 'ಮೈಲಾರಿ', 'ಮಲ್ಲಿಕಾರ್ಜುನ', 'ಆರಕ್ಷಕ' ಚಿತ್ರಗಳಲ್ಲಿ ಸದಾ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net