More

    ವಿದೇಶದಲ್ಲಿದ್ದ ಐಷಾರಾಮಿ ಜೀವನ ಬಿಟ್ಟು ಭಾರತಕ್ಕೆ ವಾಪಸ್ಸಾದ ನಟಿ ಗೀತಾ; ಈಗ ಎಲ್ಲಿದ್ದಾರೆ ?ಏನ್ ಮಾಡ್ತಿದ್ದಾರೆ..

    ಬೆಂಗಳೂರು: 80-90ನೇ ಕಾಲಘಟ್ಟದ ಟಾಪ್​ ನಟಿ ಗೀತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ಟಾರ್​ ನಟರೊಂದಿಗೆ ಸಾಲು..ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಈ ಕಲಾವಿದೆ ಕನ್ನಡ ಸೇರಿದಂತೆ, ತಮಿಳು, ತೆಲುಗು ಹಾಗೂ ಮಲಯಾಳಂ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ನಟಿ ಗೀತಾ ಹೆಸರು ಕೇಳುತ್ತಿದ್ದಂತೆ ಡಾ. ರಾಜ್​ಕುಮಾರ್​ ಅವರ ಸಿನಿಮಾಗಳು ನೆನಪಾಗುತ್ತವೆ. ಈ ನಟಿ ಇದೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡುವುದು ಸಹಜ. ಇಂದು ಈ ಹಿರಿಯ ನಟಿಯ ಕುರಿತಾಗಿ ಕೆಲವು ಮಾಹಿತಿಯನ್ನು ತಿಳಿದುಕೊಳ್ಳೋಣ…

    1962ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಗೀತಾ. ಬಾಲ್ಯದಲ್ಲಿಯೇ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಅವರು 1978ರಲ್ಲಿ ತಮಿಳು ಚಿತ್ರವಾದ ಬೈರವಿ ಸಿನಿಮಾ ಮೂಲಕವಾಗಿ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಾರೆ.  ಗೀತಾ ಅವರು ರಜನಿಕಾಂತ್​ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಕಾಶ ಸಿಕ್ಕಿತ್ತು. ನಂತರ ಸಿನಿಮಾ ಇಂಡಸ್ಟ್ರೀಯಲ್ಲಿ ಗೀತಾ ಅದೃಷ್ಟ ಬದಲಾಗಿತ್ತು. ನಂತರ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಗೆ ಕೈ ಬಿಟ್ಟು ಪೂರ್ಣಪ್ರಮಾಣದಲ್ಲಿ ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಷ್ಣುವರ್ಧನ್​, ರಾಜ್​ಕುಮಾರ್​ ಸೇರಿಂದತೆ ಅನೇಕ ಕಲಾವಿದರ ಜತೆ ನಟಿಸುವ ಅವಕಾಶ ಒದಗಿ ಬರುತ್ತದೆ. ನಟಿಯ ಸಹಜವಾದ ನಟನೆಯು ಮತ್ತಷ್ಟು ಅವಕಾಶವನ್ನು ತಂದು ಕೊಡುತ್ತದೆ.

    ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್ ಮೊದಲಾದ ಘಟಾನುಘಟಿ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಗೀತಾ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿರುವ ಗೀತಾ.

    ಹೆಣ್ಣಿನ ಸೇಡು, ದೇವರ ಆಟ, ಆಶಾ ಕಿರಣ, ಎರಡು ರೇಖೆಗಳು, ಪ್ರಚಂಡ ಕುಳ್ಳ, ಅರುಣರಾಗ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿ ಗೀತಾ ನಟಿಸಿದ್ದಾರೆ. ಮನಮೆಚ್ಚು ನಟನೆ, ಮುಗ್ಧ-ಸ್ನಿಗ್ಧ ಸೌಂದರ್ಯದಿಂದ ಸಿನಿಮಾ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ನಟಿ ಗೀತಾ ಅವರಿಗೆ ಅಂದಿನ ಕಾಲದಲ್ಲಿ ಬಹಳಷ್ಟು ಅಭಿಮಾನಿಗಳಿದ್ದರು.

    ಸಿನಿಮಾರಂಗದಲ್ಲಿ ಪೀಕ್‌ನಲ್ಲಿ ಇರುವಾಗಲೇ, ಚಾರ್ಟೆಡ್ ಅಕೌಂಟೆಟ್ ವಾಸನ್ ಎನ್ನುವವರ ಜತೆ ಲವ್‌ನಲ್ಲಿ ಬಿದ್ದು, 1997ರಲ್ಲಿ ಮುದುವೆಯಾಗಿ ಅಮೆರಿಕಾಗೆ ಹೋಗಿ ಅಲ್ಲಿ ಸೆಟ್ಲ್ ಆಗಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಈಗವರೆಗೂ ಇವರ ಕುಟುಂಬದ ಫೋಟೋ ಎಲ್ಲೂ ರಿವೀಲ್​ ಆಗಿಲ್ಲ. ಆದರೆ ತಾಯ್ನಾಡಿನ ಸೆಳೆತ ಎಂದಿಗೂ ಬಿಡುವುದಿಲ್ಲ ಎಂಬ ಮಾತಿನಂತೆ, ಮತ್ತೆ ಅಮೆರಿಕಾದಲ್ಲಿ ಎಲ್ಲವೂ ಇದೆ ಆದರೆ ತಮಗೆ ಬೇಕಾದ ತಾಯ್ನಾಡಿನ ವಾತ್ಸಲ್ಯ ಮಾತ್ರ ಸಿಗುತ್ತಿಲ್ಲವೆಂದು ​ ಭಾರತಕ್ಕೆ ಬಂದು ಚೆನ್ನೈನಲ್ಲಿ ಮನೆ ಖರೀದಿಸಿ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ ಎನ್ನಲಾಗಿದೆ.

    ಇಂದಿಗೂ ಕೂಡಾ ಅಲ್ಲೊಂದು ಇಲ್ಲೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈಗ ಕೆಲವು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಗೀತಾ. ಸದ್ಯಕ್ಕೆ ನಟಿ ಗೀತಾ ಪಾಲಿಗೆ ಬಂದ ಎಲ್ಲ ಪಾತ್ರಗಳನ್ನು ಹಿಂದುಮುಂದು ನೋಡದೇ ಒಪ್ಪಿಕೊಳ್ಳುತ್ತಿಲ್ಲ. ತಮ್ಮ ವಯಸ್ಸು, ಮನಸ್ಸು ಒಪ್ಪಿಕೊಳ್ಳುವ ಜತೆಗೆ ತಮ್ಮನ್ನು ಈಗಿನ ಸ್ಥಿತಿಯಲ್ಲಿ ಪ್ರೇಕ್ಷಕರು ಒಪ್ಪಿಕೊಳ್ಳುವಂಥ ಪಾತ್ರಗಳನ್ನು ಮಾತ್ರ ಅಳೆದೂ ತೂಗಿ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇಂದಿಗೂ ಕೂಡ ಕನ್ನಡ ಸಿನಿಪ್ರೇಕ್ಷಕರು ನಟಿ ಗೀತಾ ಅವರನ್ನು ಅವರ ನಟನೆ, ಸಿನಿಮಾಗಳ ಕಾರಣಕ್ಕೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ.

    ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts