More

    ಕ್ಯಾನ್ಸರ್​ಗೆ​ ತುತ್ತಾಗಿದ್ದ ‘ಪ್ರೀತ್ಸೇ ಪ್ರೀತ್ಸೇ’ ಸೋನಾಲಿ ಬೇಂದ್ರೆ ಬದುಕುಳಿಯುವುದೇ ಡೌಟ್​​ ಎಂದಿದ್ರು ಡಾಕ್ಟರ್

    ಮುಂಬೈ: ಒಂದು ಕಾಲದಲ್ಲಿ ತನ್ನ ಬ್ಯೂಟಿಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದ ನಟಿ ಸೋನಾಲಿ ಬೇಂದ್ರೆ. ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದಿರುವ ಅನೇಕ ನಾಯಕಿಯರು ದಕ್ಷಿಣ ಪ್ರೇಕ್ಷಕರಿಗೂ ಪರಿಚಿತರು. ಆ ಪಟ್ಟಿಯಲ್ಲಿ ಸೋನಾಲಿ ಬೇಂದ್ರೆ (49) ಕೂಡ ಒಬ್ಬರು. ಹಲವು ಭಾಷೆಗಳಲ್ಲಿ ನಟಿಸಿ ಹೆಸರು ಸಂಪಾದಿಸಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು, ಸಾವನ್ನು ಗೆದ್ದು ಬಂದಿರುವ ನಟಿ ಸೋನಾಲಿ ಬೇಂದ್ರೆ ತಾವು ಎದುರಿಸಿದ ಕಷ್ಟದ ಕುರಿತಾಗಿ ಮಾತನಾಡಿದ್ದಾರೆ.

    ಕ್ಯಾನ್ಸರ್​ಗೆ​ ತುತ್ತಾಗಿದ್ದ 'ಪ್ರೀತ್ಸೇ ಪ್ರೀತ್ಸೇ' ಸೋನಾಲಿ ಬೇಂದ್ರೆ ಬದುಕುಳಿಯುವುದೇ ಡೌಟ್​​ ಎಂದಿದ್ರು ಡಾಕ್ಟರ್

    ಮುಂಬೈನಲ್ಲಿ ಜನಿಸಿದ ಸೋನಾಲಿ ಬೇಂದ್ರೆ ರಾಮ್ ನಾರಾಯಣ ಲೋಹಿಯಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಟಿ ತನ್ನ ಅಧ್ಯಯನದ ಜತೆಗೆ ಮಾಡೆಲಿಂಗ್ ಪ್ರಾರಂಭಿಸಿದರು. ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಲೋಕದತ್ತ ಸೋನಾಲಿ ಪ್ರಯಾಣ ಬೆಳೆಸಿದ್ರು. ಆಕೆಯ ಮೊದಲ ಚಿತ್ರ ‘ಆಗ್’ 1994 ರಲ್ಲಿ ಬಿಡುಗಡೆಯಾಯಿತು. ನಟ ಗೋವಿಂದ್ ಜೊತೆ ನಾಯಕಿಯಾಗಿ ನಟಿಸಿದ್ರು. ಮೊದಲ ಸಿನಿಮಾದಲ್ಲೇ ಗಮನಸೆಳೆದಿದ್ರು. ನಂತರ ಕನ್ನಡ, ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಮೂಲಕವಾಗಿ ಸೂಪರ್​ ಹಿಟ್​​ ಸಿನಿಮಾಗಳನ್ನು ನೀಡಿದ್ದಾರೆ.

    ಕ್ಯಾನ್ಸರ್​ಗೆ​ ತುತ್ತಾಗಿದ್ದ 'ಪ್ರೀತ್ಸೇ ಪ್ರೀತ್ಸೇ' ಸೋನಾಲಿ ಬೇಂದ್ರೆ ಬದುಕುಳಿಯುವುದೇ ಡೌಟ್​​ ಎಂದಿದ್ರು ಡಾಕ್ಟರ್

    ಮುಂಬೈ ಬೆಡಗಿ ಸೊನಾಲಿ ಬೇಂದ್ರೆ ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ‘ಪ್ರೀತ್ಸೆ’ ಚಿತ್ರದಲ್ಲಿ ಉಪೇಂದ್ರ, ಶಿವರಾಜ್‌ಕುಮಾರ್ ಜೊತೆಗೂ ಮಿಂಚಿ ಕನ್ನಡ ಸಿನಿರಸಿಕರಿಗೂ ಪರಿಚಿತರಾಗಿದ್ದರು. 2013ರಲ್ಲಿ ಆಕೆ ಕೊನೆಯ ಬಾರಿಗೆ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ’ ಚಿತ್ರದಲ್ಲಿ ನಟಿಸಿದ್ದರು.

    ಸೋನಾಲಿ ಬೇಂದ್ರೆ 2018ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದು, ಕೆಲ ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಅದರಿಂದ ಚೇತರಿಸಿಕೊಂಡಿದ್ದಾರೆ. ಇದೀಗ ಈ ನಟಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡ ನಟಿ, ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ.

    ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧದ ಹೋರಾಟದ ಕುರಿತಾಗಿ ಮಾತನಾಡಿ, ನನಗೆ ಈ ಕಾಯಿಲೆ ಇರುವುದು ಗೊತ್ತಾದ ಬಳಿಕ ತುಂಬಾ ಕುಗ್ಗಿ ಹೋಗಿದ್ದೇನು. ನಗೆ ಈ ರೀತಿ ಆಗುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ. ಪ್ರತಿ ದಿನ ಭಯಾನಕವಾದ ಕನಸಿನಿಂದ ಎಚ್ಚರ ಗೊಳ್ಳುತ್ತಿದ್ದೇನು ಎಂದಿದ್ದಾರೆ.

    ನನ್ನ ಕ್ಯಾನ್ಸರ್ ಇರುವುದು ಗೊತ್ತಾದ ಬಳಿಕ, ನನ್ನ ಮೊದಲ ಆಲೋಚನೆಯು, ‘ನಾನೇಕೆ?’ ಎಂದು ಕೊಳ್ಳುತ್ತಿದ್ದೇನು. ಆಗ ನಾನು ಯೋಚಿಸಿದ ರೀತಿಯನ್ನು ಬದಲಾಯಿಸಲು ಪ್ರಾರಂಭಿಸಿದೆ. ನಾನು ಇದನ್ನು ಎದುರಿಸಲು ಶಕ್ತಿ ಹೊಂದಿದ್ದೇನೆ ಎಂದು ನಾನು ಅರಿತುಕೊಂಡೆ, ನಾನು ಅತ್ಯುತ್ತಮ ಆಸ್ಪತ್ರೆಗಳಿಗೆ ಹೋಗಬಹುದು. ನನಗೆ ಸಹಾಯ ಮಾಡುವ ಬೆಂಬಲ ನೀಡುವವರನ್ನು ಹೊಂದಿದ್ದೇನೆ. ‘ನಾನೇಕೆ ಬೇಡ’ ಎಂದು ಕೇಳಲು ಆರಂಭಿಸಿದೆ. ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿದು ಸೂಕ್ತವಾದ ಚಿಕಿತ್ಸೆ ಪಡೆದುಕೊಂಡೆನು ಎಂದಿದ್ದಾರೆ.

    2018 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು, ನಂತರ ಅವರು ಯುನೈಟೆಡ್ ಸ್ಟೇಟ್​​​ನಲ್ಲಿ ಚಿಕಿತ್ಸೆ ಪಡೆದೆ. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆಗೆಂದು ಬಂದಾಗ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು, ಬದುಕುಳಿಯುವ ಸಾಧ್ಯತೆ ಶೇ.30 ಮಾತ್ರ ಎಂದು ವೈದ್ಯರು ಹೇಳಿದ್ದರು ಎಂದು ಸೋನಾಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

    ಸೋನಾಲಿ ಬೇಂದ್ರೆ ಅತ್ಯಂತ ಧೈರ್ಯದಿಂದ ಕ್ಯಾನ್ಸರ್ ಅನ್ನು ಜಯಿಸಿದ್ದಾರೆ. ಈ ಅವಧಿ ಸೋನಾಲಿಗೆ ತುಂಬಾ ಕಷ್ಟಕರವಾಗಿತ್ತು. ಸೋನಾಲಿ ಹಲವಾರು ತಿಂಗಳುಗಳ ಕಾಲ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ನ್ಯೂಯಾರ್ಕ್ ನಲ್ಲಿದ್ದ ನಟಿ ತನ್ನ ಕುಟುಂಬದಿಂದ ದೂರವಿದ್ದರು. ಈ ಸಮಯದಲ್ಲಿ ಅವಳು ತುಂಬಾ ನೋವಿನಿಂದ ಬಳಲುತ್ತಿದ್ದರಂತೆ. ಈಗ ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

    ನನಗೆ ಖಾಯಿಲೆ ಇದೆ, ಈ ರೀತಿ ಬಾಡಿ ಶೇಮಿಂಗ್ ಮಾಡಿ ಗೇಲಿ ಮಾಡಬೇಡಿ ಎಂದು ಕಣ್ಣೀರಿಟ್ಟ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts