More

  ನಟಿ ಪವಿತ್ರಾ ಗೆಳೆಯ ಚಂದ್ರಕಾಂತ್ ಮರಣೋತ್ತರ ಪರೀಕ್ಷೆ ಪೂರ್ಣ..ವರದಿಯಲ್ಲಿ ಏನಿದೆ?

  ಹೈದ್ರಾಬಾದ್​: ನಟ ಚಂದ್ರಕಾಂತ್ ನಿಧನರಾದ ವಿಚಾರ ಗೊತ್ತೇ ಇದೆ. ಗೆಳತಿ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನೋವಿನಲ್ಲಿದ್ದ ಚಂದ್ರಕಾಂತ್​ ಶುಕ್ರವಾರ ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ನಟ, ನಟಿಯ ಸಾವು ಕಿರುತೆರೆ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ಗೆಳತಿ ಹಾಗೂ ಸಹನಟಿ ಪವಿತ್ರಾ ಜಯರಾಂ ಅವರ ಸಾವನ್ನು ಅರಗಿಸಿಕೊಳ್ಳಲಾಗದೆ ಚಂದ್ರಕಾಂತ್ ಇಂತಹ ಕ್ರೂರ ನಿರ್ಧಾರ ಕೈಗೊಂಡಿದ್ದಾರೆ. ಭಾನುವಾರ ನಡೆದ ಅಪಘಾತದಲ್ಲಿ ಪವಿತ್ರಿ ಜಯರಾಂ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಕಾರಿನಲ್ಲಿ ಚಂದು ಕೂಡ ಇದ್ದರು. ಆ ನಂತರ ಪವಿತ್ರಾ ಬಗ್ಗೆ ಸರಣಿ ಪೋಸ್ಟ್ ಗಳನ್ನು ಮಾಡಿ ತಾವೂ ಚಂದ್ರಕಾಂತ್​ ಪ್ರಾಣ ಕೆಳೆದುಕೊಂಡಿದ್ದಾರೆ.

  ವಿಷಯ ತಿಳಿದ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಶನಿವಾರ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಚಂದು ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಚಂದು ಅವರ ಪಾರ್ಥಿವ ಶರೀರವನ್ನು ಬನ್ಸಿಲಾಲ್ ಪೇಟಾದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

  ಖಿನ್ನತೆಗೆ ಒಳಗಾಗಿ ಚಂದು ಇಂತಹ ಘೋರ ನಿರ್ಧಾರ ತೆಗೆದುಕೊಂಡಿದ್ದಾರಂತೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

  ಪವಿತ್ರಾ ಜಯರಾಮ್ ನಿಂದಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾಳನ್ನು ಭೇಟಿಯಾದ ನಂತರ ಚಂದು ತನ್ನಿಂದ ದೂರವಾದ. ಐದು ವರ್ಷದಿಂದ ತಮ್ಮಿಂದ ದೂರವೇ ಇದ್ದಾನೆ. ಪವಿತ್ರಾಗಾಗಿ ಚಂದು ತನಗೆ ಚಿತ್ರಹಿಂಸೆ ನೀಡಿದ್ದ ಎಂದು ಚಂದು ಪತ್ನಿ ಶಿಲ್ಪಾ ಆರೋಪ ಮಾಡಿದ್ದಾಳೆ.

  ಚಂದು ಮತ್ತು ಪವಿತ್ರಿ ಜಯರಾಮ್ ತ್ರಿನಯನಿ ಧಾರಾವಾಹಿಯಲ್ಲಿ ಭೇಟಿಯಾದರು. ಕಳೆದ ಐದು ವರ್ಷಗಳಿಂದ ಈ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಹೀಗೆ ಇಬ್ಬರ ನಡುವೆ ಏರ್ಪಟ್ಟ ಸಂಪರ್ಕ ಕೊಂಚ ಪ್ರೀತಿಗೆ ತಿರುಗಿತ್ತು ಎನ್ನುವ ಟಾಕ್​ ಇದೆ ಆದರೆ ಎಷ್ಟ ಮಟ್ಟಿಗೆ ನಿಜವಾದ ಸಂಗತಿ ಎನ್ನುವುದು ಗೊತ್ತಿಲ್ಲ. ಆದರೆ ಗೆಳತಿ ಸಾವಿನಿಂದ ಮನನೊಂದ ಚಂದ್ರಕಾಂತ್​ ಪ್ರಾಣ ಕಳೆದುಕೊಂಡಿದ್ದಾರೆ.

  11 ವರ್ಷ ಪ್ರೀತಿಸಿ ಮದ್ವೆಯಾದೆ..ಆದ್ರೆ ಆಕೆಗಾಗಿ ನನ್ನ ಜೀವನ ಹಾಳು ಮಾಡಿದ ಎಂದು ಬಿಕ್ಕಿಬಿಕ್ಕಿ ಅತ್ತ ಚಂದ್ರಕಾಂತ್ ಪತ್ನಿ

  ಆತ್ಮಹತ್ಯೆಗೂ ಮುನ್ನ ಚಂದ್ರಕಾಂತ್​ ಸರಣಿ ಪೋಸ್ಟ್; ಗೆಳತಿ ಇಲ್ಲದೆ ನರಕಯಾತನೆ ಅನುಭವಿಸಿದ್ದ ಈ ನಟ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts