More

  ಪ್ಲೇಆಫ್​ಗೇರಲು RCB-CSK ನಡುವೆ ಹೈವೋಲ್ಟೇಜ್​ ಪಂದ್ಯ! ಭಜ್ಜಿ ಪ್ರಕಾರ ಗೆಲ್ಲೋದು ಇವರೇ…

  ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿ ಮುಗಿಯುವ ಹಂತಕ್ಕೆ ಬಂದಿದೆ. ಈ ಬಾರಿಯ ಐಪಿಎಲ್​ ಟೂರ್ನಿ ರಣ ರೋಚಕವಾಗಿತ್ತು. ಏಕೆಂದರೆ, ಬೃಹತ್ ಸ್ಕೋರ್‌ಗಳು ಮತ್ತು ರೋಮಾಂಚಕ ಚೇಸ್‌ಗಳೊಂದಿಗೆ ಕ್ಯಾಶ್ ರಿಚ್ ಲೀಗ್ ಪ್ರೇಕ್ಷಕರಿಗೆ ಫುಲ್​ ಮನರಂಜನೆಯನ್ನು ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 17ನೇ ಐಪಿಎಲ್​ ಆವೃತ್ತಿಗೆ ಅಂತಿಮ ತೆರೆ ಬೀಳಲಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್​) ಮತ್ತು ರಾಜಸ್ಥಾನ ರಾಯಲ್ಸ್ (ಆರ್​ಆರ್​) ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ. ಉಳಿದ ಎರಡು ಸ್ಥಾನಗಳಿಗಾಗಿ ಐದು ತಂಡಗಳು ಹೋರಾಟ ನಡೆಸುತ್ತಿವೆ.

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡಗಳು ಪ್ಲೇ ಆಫ್ ಸ್ಥಾನಕ್ಕಾಗಿ ಸೆಣಸಾಡುತ್ತಿವೆ. ಮೇ 18ರಂದು ಉಭಯ ತಂಡಗಳ ನಡುವೆ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಪ್ಲೇಆಫ್‌ನಲ್ಲಿ ಮತ್ತೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸಿಎಸ್‌ಕೆಗೆ ಯಾವುದೇ ರನ್​ ರೇಟ್​ ಅವಶ್ಯಕತೆ ಇಲ್ಲ, ಕೇವಲ ಗೆದ್ದರೆ ಸಾಕು. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್​ ಮಾಡಿದರೆ 18 ರನ್​​​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್​ ಮಾಡಿದರೆ 18.1 ಓವರ್​ಗಳಲ್ಲೇ ಗುರಿ ಮುಟ್ಟಬೇಕು. ಹೀಗಾಗಿ ಎಲ್ಲರು ಈ ಪಂದ್ಯಕ್ಕಾಗಿ ಎದುರು ನೋಡುತ್ತಿರುವಾಗಲೇ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಯಾರು ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದಾರೆ.

  ಆರ್‌ಸಿಬಿ-ಸಿಎಸ್‌ಕೆ ನಡುವಿನ ಕ್ರಿಕೆಟ್​ ಕದನದಲ್ಲಿ ಫಾಫ್​ ಡುಪ್ಲೆಸಿಸ್ ಪಡೆ ಗೆಲ್ಲಲಿದೆ ಎಂದು ಹರ್ಭಜನ್ ಹೇಳಿದ್ದಾರೆ. ನಿರ್ಣಾಯಕ ಪಂದ್ಯವಾಗಿರುವುದರಿಂದ ಆಕ್ರಮಣಶೀಲತೆ ಪ್ರದರ್ಶಿಸುವುದು ಮಾತ್ರವಲ್ಲದೆ, ಕೂಲ್ ಆಗಿರುವುದು ಕೂಡ ಅಷ್ಟೇ ಮುಖ್ಯ. ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನಿರ್ಣಾಯಕ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂಬುದು ಗೊತ್ತಿದೆ. ಕೊಹ್ಲಿ ಏಕದಿನ ವಿಶ್ವಕಪ್-2011 ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ. ಅವರ ಕೈಯಲ್ಲಿ ಐಪಿಎಲ್ ಟ್ರೋಫಿ ಇಲ್ಲದಿದ್ದರೂ ಅವರನ್ನು ಕಡೆಗಣಿಸುವಂತಿಲ್ಲ. ಆರ್‌ಸಿಬಿ ಇಲ್ಲಿಯವರೆಗೂ ಒಂದೇ ಒಂದು ಕಪ್ ಗೆಲ್ಲದಿದ್ದರೂ ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಕೊಹ್ಲಿ ಹೆಸರು ಇರುವುದೇ ಅದಕ್ಕೆ ಸಾಕ್ಷಿ ಎಂದು ಸ್ಟಾರ್​ಸ್ಪೋರ್ಟ್ಸ್​​ ಇಂಡಿಯಾ ಸಂದರ್ಶನದಲ್ಲಿ ಹರ್ಭಜನ್​ ಸಿಂಗ್​ ಹೇಳಿದರು.

  ಧೋನಿ ಅವರನ್ನೂ ಸಹ ಹಗುರವಾಗಿ ಪರಿಗಣಿಸಬಾರದು. ಅವರು ಚೆನ್ನೈಗೆ ಐದು ಕಪ್​ಗಳನ್ನು ಗೆದ್ದು ಕೊಟ್ಟಿದ್ದಾರೆ. ಪ್ಲೇಆಫ್‌ನಂತಹ ಮಹತ್ವದ ಪಂದ್ಯಗಳಲ್ಲಿ ಸೆಂಟಿಮೆಂಟ್‌ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ. ಇಂತಹ ಪಂದ್ಯಗಳಲ್ಲಿ ಯಾರು ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲರೋ ಅವರೇ ವಿಜೇತರಾಗುತ್ತಾರೆ. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದರೆ ಆ ತಂಡ ಗೆಲ್ಲಲಿದೆ ಎಂದು ಭಜ್ಜಿ ಸ್ಪಷ್ಟಪಡಿಸಿದರು.

  ಇನ್ನು ಯುವ ಬ್ಯಾಟರ್ ರಜತ್ ಪಾಟಿದಾರ್ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಅವರು ಇತರ ಬ್ಯಾಟರ್‌ಗಳ ಒತ್ತಡವನ್ನು ಕಡಿಮೆ ಮಾಡುತ್ತಿದ್ದಾರೆ. ಅಲ್ಲದೆ, ತವರಿನ ಪರಿಸ್ಥಿತಿಯಲ್ಲಿ ಆಡುವುದು ಆರ್​ಸಿಬಿ ತಂಡಕ್ಕೆ ಚೆನ್ನಾಗಿ ಹೊಂದುತ್ತದೆ. ಪತಿರಾಣ, ಮುಸ್ತಾಫಿಜುರ್ ಮತ್ತು ದೀಪಕ್ ಚಹಾರ್ ಅವರಂತಹ ದೊಡ್ಡ ಆಟಗಾರರ ಅನುಪಸ್ಥಿತಿಯಿಂದ ಚೆನ್ನೈ ಸ್ವಲ್ಪ ದುರ್ಬಲವಾಗಿದೆ ಎಂದು ಹರ್ಭಜನ್​ ವಿವರಿಸಿದರು. (ಏಜೆನ್ಸೀಸ್​)

  ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

  ಆಕೆಗೆ 54, ಆತನಿಗೆ 52 ವರ್ಷ! 25 ವರ್ಷದ ಪ್ರೀತಿಗೆ ಈಗ ಮದ್ವೆ ಬೆಸುಗೆ, ಇಬ್ಬರ ಲವ್​ಸ್ಟೋರಿ ಕೇಳಿದ್ರೆ ಮನ ಕರಗುತ್ತೆ!

  ಏಕದಿನ ವಿಶ್ವಕಪ್​ನಂತೆ ಟಿ20 ವಿಶ್ವಕಪ್​ ಸಹ ಮರೆತು ಬಿಡಿ! ಭಜ್ಜಿ ಶಾಕಿಂಗ್​ ಹೇಳಿಕೆ ಬೆನ್ನಲ್ಲೇ ಚರ್ಚೆ ಶುರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts