More

  ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

  ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ. ಟೂರ್ನಿ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಸದ್ಯ ಎಲ್ಲರ ಗಮನ ಆ ಒಂದು ಪಂದ್ಯದ ಮೇಲಿದೆ. ಹೀಗಾಗಿ ಆ ಪಂದ್ಯದ ಕುರಿತು ಜೋರು ಚರ್ಚೆಗಳು ನಡೆಯುತ್ತಿವೆ. ರಾಜಸ್ಥಾನ ರಾಯಲ್ಸ್ (ಆರ್​ಆರ್​) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಈಗಾಗಲೇ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನುಳಿದ ಎರಡು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ.

  ಸದ್ಯ ಎಲ್ಲರೂ ಮೇ 18ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ, ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಇದೊಂದು ರೀತಿಯಲ್ಲಿ ನಾಕೌಟ್​ ಪಂದ್ಯದಂತಿದೆ. ಇದರಲ್ಲಿ ಗೆದ್ದವರು ಪ್ಲೇಆಫ್‌ನಲ್ಲಿ ಮತ್ತೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸಿಎಸ್‌ಕೆಗೆ ಯಾವುದೇ ರನ್​ ರೇಟ್​ ಅವಶ್ಯಕತೆ ಇಲ್ಲ, ಕೇವಲ ಗೆದ್ದರೆ ಸಾಕು. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್​ ಮಾಡಿದರೆ 18 ರನ್​​​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್​ ಮಾಡಿದರೆ 18.1 ಓವರ್​ಗಳಲ್ಲೇ ಗುರಿ ಮುಟ್ಟಬೇಕು. ಹೀಗಾಗಿ ಎಲ್ಲರು ಈ ಪಂದ್ಯಕ್ಕಾಗಿ ಎದುರು ನೋಡುತ್ತಿರುವಾಗಲೇ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

  ಆರ್‌ಸಿಬಿ ಐಪಿಎಲ್​ ಕಪ್ ಗೆಲ್ಲಬೇಕಾದರೆ ತಂಡದಲ್ಲಿ ಹೆಚ್ಚಿನ ಭಾರತೀಯ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಸ್ಟಾರ್​ಸ್ಪೋರ್ಟ್ಸ್​ ಸಂದರ್ಶನದಲ್ಲಿ ಕೈಫ್ ಸಲಹೆ ನೀಡಿದ್ದಾರೆ. ಈ ಸಲಹೆ ಅನುಸರಿಸಿದರೆ ಪ್ಲೇಆಫ್‌ ಮಾತ್ರವಲ್ಲ, ಫೈನಲ್‌ಗೆ ಹೋಗಿ ಪ್ರಶಸ್ತಿಯನ್ನೂ ಗೆಲ್ಲಬಹುದು ಎಂದಿದ್ದಾರೆ. ಈ ಸೀಸನ್​ನ ಆರಂಭದಲ್ಲಿ ಸತತವಾಗಿ 6 ಪಂದ್ಯಗಳನ್ನು ಸೋತಿರುವುದು ಬೆಂಗಳೂರಿಗೆ ತೀವ್ರ ನೋವುಂಟು ಮಾಡಿದೆ. ಆದರೆ, ಆ ನಂತರ ತಮ್ಮ ಆಟದ ಶೈಲಿಗೆ ವೇಗ ನೀಡಿ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದರಿಂದ ಆರ್​ಸಿಬಿಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಕೈಫ್​ ಹೇಳಿದರು.

  See also  ಕರೊನಾ ವೈರಸ್​, ಲಾಕ್​ಡೌನ್​ ಕಾರಣ ವಿಶ್ವ ರೋದಿಸುತ್ತಿದೆ, ಪ್ರಕೃತಿ ನಲಿಯುತ್ತಿದೆ!

  ಆರ್​ಸಿಬಿ ತಂಡಕ್ಕೆ ಪ್ಲೇಆಫ್ ತಲುಪುವ ಅವಕಾಶ ಈಗಲೂ ಇದೆ ಎಂದು ನಾಯಕ ಫಾಫ್​ ಡುಪ್ಲೆಸಿಸ್ ಹೇಳಿದ್ದಾರೆ. ಆರಂಭದಲ್ಲಿ ಸತತ ಸೋಲುಗಳು ಆರ್‌ಸಿಬಿ ಪಾಲಿಗೆ ಶಾಪವಾಗಿ ಪರಿಣಮಿಸಿತ್ತು. ಆದರೆ, ಆನಂತರ ಚೇತರಿಸಿಕೊಂಡು ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಸತತ ಐದು ಗೆಲುವುಗಳನ್ನು ಸಾಧಿಸಿದ್ದಾರೆ. ಹೀಗಾಗಿ ತಂಡಕ್ಕೆ ಇನ್ನೂ ಪ್ಲೇ ಆಫ್ ಅವಕಾಶಗಳಿವೆ. ತಂಡದ ಪುನರಾಗಮನವನ್ನು ಎಲ್ಲರೂ ಮೆಚ್ಚಬೇಕು ಎಂದು ಕೈಫ್ ಹೇಳಿದರು.

  ಗ್ಲೇನ್​ ಮ್ಯಾಕ್ಸ್​ವೆಲ್​ರಂತಹ ವಿದೇಶಿ ಆಟಗಾರರು ಆಡಿದರೆ ಮಾತ್ರ ಆರ್​ಸಿಬಿ ಗೆಲ್ಲಲಿದೆ ಎನ್ನುವ ಪರಿಸ್ಥಿತಿಯಿಂದ ಇದೀಗ ಹೊರಬಂದಿದೆ ಎಂದು ಕೈಫ್​, ಪ್ರತಿಭಾನ್ವಿತ ಭಾರತೀಯ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ತರಬೇತಿ ನೀಡುವತ್ತ ಆರ್​ಸಿಬಿ ಮ್ಯಾನೇಜ್​ಮೆಂಟ್​ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಭಾರತೀಯ ಆಟಗಾರರನ್ನು ನಂಬಿ ಯಶಸ್ಸು ಸಾಧಿಸಿವೆ. ಆರ್‌ಸಿಬಿ ಕೂಡ ಅದನ್ನೇ ಮಾಡಬೇಕು. ಈ ಸೀಸನ್ ಬಹುತೇಕ ಮುಗಿದಿದ್ದು, ಮುಂದಿನ ಸೀಸನ್​ನಲ್ಲಾದರೂ ಪ್ರತಿಭಾವಂತ ದೇಶೀಯ ಕ್ರಿಕೆಟಿಗರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕೈಫ್ ಹೇಳಿದರು.

  ಸ್ಥಳೀಯ ಆಟಗಾರರನ್ನು ಗುರುತಿಸಿ, ಅವರನ್ನು ಬೆಂಬಲಿಸಿ, ಅವರನ್ನು ಹೀರೋ ಮಾಡುವ ಆಶಯವನ್ನು ಕೈಫ್​ ವ್ಯಕ್ತಪಡಿಸಿದರು. ವಿದೇಶಿ ಆಟಗಾರರಲ್ಲ, ಸ್ಥಳೀಯ ಆಟಗಾರರನ್ನು ನಂಬಿದರೆ ಆರ್‌ಸಿಬಿ ಖಂಡಿತ ಟ್ರೋಫಿ ಗೆಲ್ಲುತ್ತದೆ ಎಂದು ಕೈಫ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

  ಈ ರೀತಿ ಹೇಳಲು ನಿನಗೆ ಯಾವ ಹಕ್ಕಿದೆ!? ಎಬಿ ಡಿವಿಲಿಯರ್ಸ್​ ವಿರುದ್ಧ ಗೌತಮ್​ ಗಂಭೀರ್ ವಾಗ್ದಾಳಿ​

  ನಿನ್ನೆ ಪಂದ್ಯದಲ್ಲಿ ನೀವಿದನ್ನು ಗಮನಿಸಿದ್ರಾ? ಇದೆಲ್ಲಾ ಬರೀ ನಾಟಕ ಕಿಂಚಿತ್ತು ಬದಲಾಗಿಲ್ಲ ಸಂಜೀವ್​ ಗೋಯೆಂಕಾ! ​

  ರೋಹಿತ್​, ಕೊಹ್ಲಿಯಲ್ಲ ಡೇವಿಡ್​ ಮಿಲ್ಲರ್​ಗೆ ಟೀಮ್​ ಇಂಡಿಯಾದ ಈ ಆಟಗಾರನನ್ನು ಕಂಡರೆ ತುಂಬಾ ಭಯವಂತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts