More

  ರೋಹಿತ್​, ಕೊಹ್ಲಿಯಲ್ಲ ಡೇವಿಡ್​ ಮಿಲ್ಲರ್​ಗೆ ಟೀಮ್​ ಇಂಡಿಯಾದ ಈ ಆಟಗಾರನನ್ನು ಕಂಡರೆ ತುಂಬಾ ಭಯವಂತೆ!

  ನವದೆಹಲಿ: ಟಿ-20 ವಿಶ್ವಕಪ್ ಇನ್ನೆರಡು ವಾರಗಳಲ್ಲಿ ಆರಂಭವಾಗಲಿದೆ. ಎಲ್ಲ ತಂಡಗಳು ಈಗಾಗಲೇ ತಂತ್ರಗಾರಿಕೆ ರೂಪಿಸುತ್ತಿವೆ. ಈ ಮೆಗಾ ಟೂರ್ನಮೆಂಟ್‌ಗೂ ಮುನ್ನ ಹಲವು ಟಿ20 ಪಂದ್ಯಗಳನ್ನು ಆಡುವ ಮೂಲಕ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್​ಮನ್ ಡೇವಿಡ್ ಮಿಲ್ಲರ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

  ಡೇವಿಡ್​ ಮಿಲ್ಲರ್​ಗೆ ಆ ಭಾರತೀಯ ಆಟಗಾರನನ್ನು ಕಂಡರೆ ಭಯವಾಗುತ್ತದೆಯಂತೆ! ಸಾಮಾನ್ಯವಾಗಿ ಟೀಮ್​ ಇಂಡಿಯಾ ವಿರುದ್ಧದ ಪಂದ್ಯ ಎಂದರೆ ಎಲ್ಲರೂ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಈ ಇಬ್ಬರ ಬ್ಯಾಟಿಂಗ್​ ಅಬ್ಬರವನ್ನು ತಡೆಯುವುದು ಹೇಗಪ್ಪಾ ಅಂತ ಎದುರಾಳಿ ತಂಡಗಳೂ ತಲೆ ಕೆರೆದುಕೊಳ್ಳುತ್ತಿವೆ. ಆದರೆ ಆ ಭಾರತೀಯ ಆಟಗಾರನನ್ನು ಕಂಡರೆ ಇವರಿಬ್ಬರಿಗಿಂತಲೂ ಹೆಚ್ಚು ಭಯವಾಗುತ್ತದೆ ಎನ್ನುತ್ತಾರೆ ಡೇವಿಡ್​ ಮಿಲ್ಲರ್.

  ಅಂದಹಾಗೆ ಡೇವಿಡ್​ ಮಿಲ್ಲರ್​ ಅವರನ್ನು ತುಂಬಾ ಹೆದರಿಸುವ ಟೀಮ್​ ಇಂಡಿಯಾ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಅವರೇ ಜಸ್ಪ್ರೀತ್ ಬುಮ್ರಾ. ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಎಲ್ಲಾ ತಂಡಗಳ ಬ್ಯಾಟ್ಸ್​ಮನ್​ಗಳಿಗೆ ದೊಡ್ಡ ಬೆದರಿಕೆಯಾಗಲಿದ್ದಾರೆ ಎಂದು ಮಿಲ್ಲರ್ ಹೇಳಿದ್ದಾರೆ. ಅವರ ಬೌಲಿಂಗ್​ನಲ್ಲಿ ಆಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ. ಬೂಮ್ರಾ ಬೌಲಿಂಗ್​ ವೇಗ, ಸ್ವಿಂಗ್ ಮತ್ತು ಯಾರ್ಕರ್‌ಗಳಿಂದ ರನ್ ಗಳಿಸುವುದು ತುಂಬಾ ಕಷ್ಟ ಎಂದು ಮಿಲ್ಲರ್​ ನಂಬಿದ್ದಾರೆ.

  ಭಾರತ ತಂಡದಲ್ಲಿ ಅನೇಕ ಉತ್ತಮ ಆಟಗಾರರಿದ್ದಾರೆ. ಆದರೆ, ಅವರೆಲ್ಲರಲ್ಲಿ ಬುಮ್ರಾ ಅತ್ಯಂತ ಅಪಾಯಕಾರಿ. ಅಲ್ಲದೆ, ಬೂಮ್ರಾ ಅವರು ಪ್ರಸ್ತುತ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿಶ್ವ ದರ್ಜೆಯ ಬೌಲರ್ ಆಗುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅವರನ್ನು ಎದುರಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಅವರ ಬೌಲಿಂಗ್ ಅನ್ನು ಎದುರಿಸುವುದು ಕಷ್ಟ ಎಂದು ಮಿಲ್ಲರ್ ಹೇಳಿದರು.

  ಮಿಲ್ಲರ್​ ಹೇಳಿದಂತೆ ಬೂಮ್ರಾ ಅವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ ಒಟ್ಟು 20 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ 6 ರಷ್ಟಿದೆ. ಇದರಿಂದ ಅವರ ಬೌಲಿಂಗ್ ಎಷ್ಟು ಉಗ್ರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಈ ಐಪಿಎಲ್​ ಸೀಸನ್​ನಲ್ಲಿ ಮುಂಬೈ ವಿರುದ್ಧ ಬೃಹತ್ ರನ್​ ಗಳಿಸಿದ ಬ್ಯಾಟ್ಸ್‌ಮನ್‌ಗಳು ಕೂಡ ಬುಮ್ರಾ ಬೌಲಿಂಗ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಪಡೆಯಲು ಪರದಾಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಬೂಮ್ರಾ ತಮ್ಮ ಬೌಲಿಂಗ್​ನಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

  ಇದು ಆತನಿಗೆ ಮಾತ್ರ ಸೇರಿದ್ದು! ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್ ಕಾಮೆಂಟ್​ ವೈರಲ್​

  ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!

  ಶಿಕ್ಷಕರ ನೇಮಕಕ್ಕೆ ಆದಾಯ ಪತ್ರ ತೊಡಕು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts