More

    ಇದು ಆತನಿಗೆ ಮಾತ್ರ ಸೇರಿದ್ದು! ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್ ಕಾಮೆಂಟ್​ ವೈರಲ್​

    ಮುಂಬೈ: ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಅವರು ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಮುಂದಿನ “ಮಿಸ್ಟರ್​ ಅಂಡ ಮಿಸೆಸ್​ ಮಹಿ” ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಜ್​ಕುಮಾರ್​ ರಾವ್​ ನಾಯಕನಾಗಿ ನಟಿಸಿದ್ದಾರೆ. ತಮ್ಮ ವಿನೂತನ ಪ್ರಚಾರದಿಂದಲೇ ಇದೀಗ ಜಾಹ್ನವಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದ್ದಾರೆ.

    ಜಾಹ್ನವಿ ಅವರು ಗುರುವಾರ (ಮೇ 9) ವಿಶಿಷ್ಟವಾದ ಕ್ರಿಕೆಟ್ ಬಾಲ್ ಪ್ರೇರಿತ ಉಡುಗೆಯಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದರೆ, ಶುಕ್ರವಾರ ಪಾಪರಾಜಿಗಳೊಂದಿಗೆ ಸಂವಹನ ನಡೆಸುವಾಗ ತಮ್ಮ ಜೆರ್ಸಿ ಸಂಖ್ಯೆ 6 ಅನ್ನು ಪ್ರದರ್ಶಿಸಿದರು. ಚಿತ್ರದ ಟೈಟಲ್​ಗೂ ಟೀಮ್​ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೂ ಕನೆಕ್ಷನ್​ ಇರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಜಾಹ್ನವಿ ಜರ್ಸಿ ನಂಬರ್​ 6 ಧರಿಸಿ ಪ್ರಚಾರ ನಡೆಸುತ್ತಿದ್ದಾರೆ. ಧೋನಿ ಅವರ ಜರ್ಸಿ ನಂಬರ್​ 7 ಆಗಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯೊಂದು ನಡೆಯುತ್ತಿದೆ. ಅಲ್ಲದೆ, ಐಪಿಎಲ್​ ಅನ್ನು ಕೂಡ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

    ಮಿಸ್ಟರ್ ಅಂಡ್ ಮಿಸೆಸ್ ಮಹಿ ಚಿತ್ರ ಮೇ 31ಕ್ಕೆ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಜಾಹ್ನವಿ ಸಿನಿಮಾ ಪ್ರಚಾರವನ್ನು ಕೊಂಚ ವಿಭಿನ್ನವಾಗಿ ಮಾಡುತ್ತಿದ್ದಾರೆ. ಮಹಿ ಹೆಸರಿನೊಂದಿಗೆ 6ನೇ ಸಂಖ್ಯೆಯ ಜೆರ್ಸಿ ಧರಿಸಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೇಲಾಗಿ ಐಪಿಎಲ್ ಪಂದ್ಯಗಳು ನಡೆಯುವ ಸ್ಥಳಕ್ಕೆ ಈ ಜೆರ್ಸಿಯಲ್ಲಿ ಹೋಗುತ್ತಿದ್ದಾರೆ. ಜಾಹ್ನವಿಯ ಜರ್ಸಿ ನಂಬರ್​ ನೋಡಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ಟ್ರೋಲ್​ ಮಾಡುತ್ತಿದ್ದಾರೆ.

    ಇದರ ಬೆನ್ನಲ್ಲೇ ಜರ್ಸಿ ನಂಬರ್​ ಕುರಿತಾದ ಗೊಂದಲವನ್ನು ತಪ್ಪಿಸುವ ಸಲುವಾಗಿ ಇತ್ತೀಚೆಗಷ್ಟೇ ಜಾಹ್ನವಿ ಅವರು ತಮ್ಮ ಅಭಿಮಾನಿಗಳೊಂದಿಗೆ “ಆಸ್ಕ್ ಮಿ ಎನಿಥಿಂಗ್” ಸೆಷನ್‌ ನಡೆಸಿದರು. ಈ ವೇಳೆ ಅವರು ಚಿತ್ರದಲ್ಲಿನ ತನ್ನ ಪಾತ್ರ ಮಹಿಮಾಗೆ 6ನೇ ಜರ್ಸಿ ನಂಬರ್​ ಯಾಕೆ ಸೇರಿದೆ ಎಂಬುದನ್ನು ಬಹಿರಂಗಪಡಿಸಿದರು.

    ಮಹೇಂದ್ರ ಸಿಂಗ್ ಧೋನಿ ಎಂದರೆ ಎಲ್ಲರಿಗೂ ಗೌರವ. ಏಳನೇ ನಂಬರ್ ಜೆರ್ಸಿ ಅವರದ್ದೇ ಆಗಿರಬೇಕು. ಅದು ಅವರಿಗೆ ಮಾತ್ರ ಸೇರಿದ್ದು. ಅದಕ್ಕಾಗಿಯೇ ಸಿನಿಮಾದಲ್ಲಿ ಆರನೇ ನಂಬರ್ ಜೆರ್ಸಿ ಹಾಕಿದ್ದೇವೆ. ಅವರ ಮೇಲಿನ ಗೌರವದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ. ಇದರೊಂದಿಗೆ ಅಭಿಮಾನಿಗಳ ಪ್ರಶ್ನೆಗಳಿಗೆ ತೆರೆ ಬಿದ್ದಂತಾಗಿದೆ.

    ಅಂದಹಾಗೆ ಮೇ 31 ರಂದು ಬಿಡುಗಡೆಯಾಗಲಿರುವ ಮಿಸ್ಟರ್​ ಅಂಡ್​ ಮಿಸೆಸ್​ ಮಹಿ ಚಿತ್ರವು ಕ್ರಿಕೆಟ್ ಹಿನ್ನೆಲೆ ಹೊಂದಿದ್ದು, ಜಾಹ್ನವಿ ಮತ್ತು ರಾಜ್‌ಕುಮಾರ್ ಅವರ ಪಾತ್ರಗಳ ನಡುವಿನ ಸಂಬಂಧವನ್ನು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)

    ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!

    ಶಿಕ್ಷಕರ ನೇಮಕಕ್ಕೆ ಆದಾಯ ಪತ್ರ ತೊಡಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts