More

  ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!

  ನವದೆಹಲಿ: ರೀನಾ ದ್ವಿವೇದಿ… ಈ ಹೆಸರನ್ನು ನೀವು ಕೇಳಿರಬಹುದು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಾದಕ ನೋಟದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಚುನಾವಣಾ ಅಧಿಕಾರಿ ಇವರು. ಬೋಲ್ಡ್​ ಆಗಿ ಕಾಣುವ ಸೀರೆಯುಟ್ಟು, ಕೈಯಲ್ಲಿ ಮತಯಂತ್ರ ಹಿಡಿದು ಸಾಗುತ್ತಿರುವ ಫೋಟೋ 2019ರಲ್ಲಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ರೀನಾ ಅವರ ಸೌಂದರ್ಯಕ್ಕೆ ಅನೇಕು ಮಾರು ಹೋಗಿದ್ದಾರೆ. ಹೀಗಾಗಿಯೇ ಆಕೆಗೆ ಅನೇಕ ಅಭಿಮಾನಿಗಳಿದ್ದಾರೆ. ಸಿನಿಮಾ ನಾಯಕಿಯರಿಗಿಂತಲೂ ರೀನಾ ಹೆಚ್ಚು ಸುಂದರವಾಗಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

  ಇಂದಿಗೂ ನಮ್ಮ ಸಮಾಜದಲ್ಲಿ ಮಹಿಳೆಯನ್ನು ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ನಿರ್ಣಯಿಸುತ್ತಾರೆ. ಹೀಗಾಗಿ ಕೆಲ ನೆಟ್ಟಿಗರು ರೀನಾ ಅವರ ಉಡುಗೆಯನ್ನು ಟೀಕಿಸಿದ್ದೂ ಉಂಟು ಮತ್ತು ಕೆಟ್ಟಾಗಿಯೂ ಕಾಮೆಂಟ್​ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ರೀನಾ ಹೆಚ್ಚು ಗಮನ ಹರಿಸಲಿಲ್ಲ. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ರೀನಾ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಚುನಾವಣಾಧಿಕಾರಿ ರೀನಾ ಮಾತ್ರ ಎಲ್ಲಿಯೂ ಪತ್ತೆಯಾಗಿಲ್ಲ. ಹೀಗಾಗಿ ಕೆಲ ನೆಟ್ಟಿಗರು ಅವರ ಬಗ್ಗೆ ವಿಚಾರಿಸುತ್ತಿದ್ದಾರೆ. ಇದರ ನಡುವೆ ರೀನಾ ಅವರಿಗೆ ಸಂಬಂಧಿಸಿದ ಹಳೆಯ ಸಂದರ್ಶನವೊಂದು ಇದೀಗ ವೈರಲ್ ಆಗಿದೆ.

  ಹೆಸರಿಗಿಂತ ಫೋಟೋ ನೋಡಿದ ಬಳಿಕ ಜನರು ರೀನಾ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇವರು ಉತ್ತರ ಪ್ರದೇಶದ ಗೋರಖ್‌ಪುರದ ಡಿಯೋರಿಯಾ ಮೂಲದವರು. ತುಂಬಾ ಸುಂದರವಾಗಿ ಮತ್ತು ಫ್ಯಾಶನ್ ಆಗಿ ಕಾಣುತ್ತಾರೆ. ಆದರೆ, ರೀನಾ ಅವರ ಸೌಂದರ್ಯದ ಹಿಂದೆ ಬಹಳಷ್ಟು ದುಃಖವೂ ಅಡಗಿದೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ದುರಂತದ ಬಗ್ಗೆ ಮಾತನಾಡಿದ್ದಾರೆ. ರೀನಾ ಹೇಳಿದ್ದೇನು ಅಂತ ನೋಡುವುದಾದರೆ, ನಮ್ಮದು ಉತ್ತರ ಪ್ರದೇಶದಲ್ಲಿ ಮಧ್ಯಮ ವರ್ಗದ ಕುಟುಂಬ. ನಾನು ಗೋರಖ್‌ಪುರದಲ್ಲಿ ಓದಿದ್ದೇನೆ ಮತ್ತು ನನ್ನ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ, ನನಗೆ ಇಬ್ಬರು ಸಹೋದರಿಯರು ಮತ್ತು ಸಹೋದರರಿದ್ದಾರೆ. ನಾನೇ ಚಿಕ್ಕವಳು. ಹೀಗಾಗಿ ಎಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ಕಾಲೇಜು ಮುಗಿದ ನಂತರ ನಾನು ಮಾರುತಿ ಸುಜುಕಿಯಲ್ಲಿ ವಿಮಾ ವ್ಯವಸ್ಥಾಪಕಳಾಗಿಯೂ ಕೆಲಸ ಮಾಡಿದೆ.

  ನಾನು 2004ರಲ್ಲಿ ಮದುವೆಯಾದೆ. ನನ್ನ ಗಂಡನ ಹೆಸರು ಸಂಜಯ್ ದ್ವಿವೇದಿ. ಮದುವೆಯ ನಂತರ ನನ್ನ ಜೀವನ ತುಂಬಾ ಸಂತೋಷದಿಂದ ಕೂಡಿತ್ತು. ನನ್ನ ಅದೃಷ್ಟವನ್ನು ನೋಡಿ ವಿಧಿಗೂ ಹೊಟ್ಟೆ ಕಿಚ್ಚು ಬಂದಿರಬಹುದು. ಏಕೆಂದರೆ, 2013 ರಲ್ಲಿ ನನ್ನ ಪತಿ ಅನಾರೋಗ್ಯದಿಂದ ನಿಧನರಾದರು. ಆಗ ನನಗೆ ಏಳು ವರ್ಷದ ಮಗನಿದ್ದ. ನನ್ನ ಪ್ರೀತಿಯ ಪತಿ ಹೋದ ನಂತರ ನಾನು ಎರಡು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದೆ. ಕೋಣೆಯಿಂದ ಹೊರಬರಲೇ ಇಲ್ಲ. ಆದರೆ ನನ್ನ ಕುಟುಂಬದ ಬೆಂಬಲದಿಂದ ನಾನು ಧೈರ್ಯವನ್ನು ಗಳಿಸಿದೆ. ಇದರೊಂದಿಗೆ ಯೋಗವು ಕೂಡ ನನ್ನನ್ನು ಮತ್ತೆ ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡಿತು. ನನ್ನ ಗಂಡನ ಮರಣದ ನಂತರ ನನಗೆ ಅನುಕಂಪದ ಆಧಾರದ ಮೇಲೆ ಅದೇ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಸಹಾಯಕಳಾಗಿ ನೇಮಕಾತಿಯನ್ನು ನೀಡಲಾಯಿತು. ಈಗ ಸೀನಿಯರ್ ಅಸಿಸ್ಟೆಂಟ್ ಆಗಿದ್ದೇನೆ ಎಂದು ರೀನಾ ನಗುತ್ತಲೇ ಹೇಳಿದರು.

  ನಾನು ನನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ನಾನು ಧೈರ್ಯದಿಂದ ಮುಂದೆ ಸಾಗಿದೆ. ನಾನು ಚೆನ್ನಾಗಿ ಉಡುಗೆ ತೊಡಲು, ಫಿಟ್ ಮತ್ತು ಆರೋಗ್ಯವಾಗಿರಲು ಇಷ್ಟಪಡುತ್ತೇನೆ. ಈ ರೀತಿ ಇರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾನು ಯಾವಾಗಲೂ ಇದೇ ರೀತಿ ತಯಾರಾಗುತ್ತೇನೆ. ನಾನು 2019ರ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ನನ್ನ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳಲ್ಲಿ ನಾನು ಟ್ರೌಸರ್ ಮತ್ತು ಕಪ್ಪು ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ವೈರಲ್​ ಫೋಟೋಗಳಿಂದಾಗಿ ನನಗೆ ಟಿವಿ ಧಾರಾವಾಹಿಗಳಲ್ಲಿ ಮತ್ತು ಭೋಜ್‌ಪುರಿ ಸಿನಿಮಾಗಳಲ್ಲೂ ಅವಕಾಶ ಸಿಕ್ಕಿತು. ನನಗೆ ನನ್ನ ಮಗನೇ ನನ್ನ ಜಗತ್ತು ಎಂದು ರೀನಾ ಹೇಳಿದ್ದಾರೆ.

  ನನಗೆ ಅಳುತ್ತಾ ಬದುಕುವುದು ಇಷ್ಟವಿಲ್ಲ. ನಾನು ಬೇಗನೆ ಎದ್ದು ಯೋಗ ಮಾಡುತ್ತೇನೆ. ಇದಾದ ಬಳಿಕ ಪೂಜೆ, ನಂತರ ಕಚೇರಿಗೆ ಹೊರಡುತ್ತೇನೆ. ನಾನು ಮನೆಗೆ ಹಿಂತಿರುಗಿದಾಗ ವೀಡಿಯೊಗಳನ್ನು ಮಾಡುತ್ತೇನೆ ಮತ್ತು ಅವುಗಳನ್ನು ಪೋಸ್ಟ್ ಮಾಡುತ್ತೇನೆ ಮತ್ತು ನನ್ನ ಮಗನನ್ನು ನೋಡಿಕೊಳ್ಳುತ್ತೇನೆ. ನನಗೆ ಇನ್ಸ್ಟಾ ಕ್ವೀನ್ ಮತ್ತು ಲೇಡಿ ಸಿಂಗಮ್ ಎಂದು ಹೆಸರಿಸಲಾಗಿದೆ. ಜೀವನದಲ್ಲಿ ಧೈರ್ಯದಿಂದ ಮುನ್ನಡೆಯಿರಿ ಎಂದು ರೀನಾ ದ್ವಿವೇದಿ ಹೇಳಿದರು. (ಏಜೆನ್ಸೀಸ್​)

  ಅಪ್ಪ-ಅಮ್ಮನನ್ನು ಕಳೆದುಕೊಂಡು ಅಕ್ಕನ ಆಶ್ರಯದಲ್ಲೇ ಓದಿ ಏಕಕಾಲದಲ್ಲಿ 9 ಸರ್ಕಾರಿ ಉದ್ಯೋಗ ಗಿಟ್ಟಿಸಿದ ಯುವಕ!

  ನಾನು ಮಾಡಿದ ಈ ಒಂದು ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ! ಹೀಗ್ಯಾಕಂದ್ರು ಆಲಿಯಾ ಭಟ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts