ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಹೆದರಿಸುವಾಗ ಕೈ ಜಾರಿದ ಮೊಬೈಲ್ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಜೀಮ್​ ಟ್ರೈನರ್​

Bengaluru Gym Trainer Died After A Video Call To His Wife
Published on

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುತ್ತೇನೆ ಎಂದು ಹೆದರಿಸುವಾಗಲೇ ಪತಿ ಮೃತಪಟ್ಟಿರುವಂತಹ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಮಿತ್ ಕುಮಾರ್​​ ಮೃತ. ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ನಡೆದ ಘಟನೆಯಿದು. ಪತ್ನಿಗೆ ವಿಡಿಯೋ ಕಾಲ್​ ಮಾಡಿ ನೇಣು ಹಾಕಿ ಕೊಳ್ಳುತ್ತೇನೆ ನೋಡು ಎಂದು ಹೆದರಿಸುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾನೆ.

ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು. ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳ ಆಗುತ್ತಾ ಇತ್ತು. ಹೀಗಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net