More

    ಅಪ್ಪ-ಅಮ್ಮನನ್ನು ಕಳೆದುಕೊಂಡು ಅಕ್ಕನ ಆಶ್ರಯದಲ್ಲೇ ಓದಿ ಏಕಕಾಲದಲ್ಲಿ 9 ಸರ್ಕಾರಿ ಉದ್ಯೋಗ ಗಿಟ್ಟಿಸಿದ ಯುವಕ!

    ಹೈದರಾಬಾದ್​: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಆದರೆ, ಒಂದಲ್ಲ 9 ಸರ್ಕಾರಿ ಕೆಲಸ ಗಿಟ್ಟಿಸುವುದೆಂದರೆ ತಮಾಷೆಯ ಮಾತಲ್ಲ. ಇಂತಹ ಪ್ರತಿಭೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ಇತ್ತೀಚೆಗಷ್ಟೇ ತೆಲಂಗಾಣದ ಯುವಕನೊಬ್ಬನಿಗೆ ಒಂದೇ ಬಾರಿಗೆ 9 ಸರ್ಕಾರಿ ಕೆಲಸ ಸಿಕ್ಕಿದೆ.

    ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮೂಲದ ಶ್ರೀಕಾಂತ್ ಈ ಸಾಧನೆ ಮಾಡಿದ ಯುವಕ. 2014 ರಲ್ಲಿ ತಂದೆ ಮತ್ತು 2019 ರಲ್ಲಿ ತಾಯಿಯನ್ನು ಕಳೆದುಕೊಂಡ ಶ್ರೀಕಾಂತ್​, ಅಕ್ಕ ಶ್ರೀಲಕ್ಷ್ಮಿ ಆಶ್ರಯದಲ್ಲಿ ಬೆಳೆದರು. ಶ್ರೀಲಕ್ಷ್ಮೀ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ಕುಟುಂಬವನ್ನು ನಡೆಸುತ್ತಿದ್ದಾರೆ.

    ಸಹೋದರಿಯ ಸಹಾಯದಿಂದ 2020ರಲ್ಲಿ ಎಂಬಿಎ ಮುಗಿಸಿದ ಶ್ರೀಕಾಂತ್, 2021ರಲ್ಲಿ ಹೈದರಾಬಾದ್‌ನ ಬ್ಯಾಂಕಿಂಗ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ಮೊದಲ ಪ್ರಯತ್ನದಲ್ಲಿ ನಿರಾಸೆಯಾದರು ಕೂಡ ನೋಟಿಫಿಕೇಶನ್​ ಬಂದ ಪ್ರತಿ ಪರೀಕ್ಷೆಯನ್ನು ಬರೆಯುವ ಮೂಲಕ ಶ್ರೀಕಾಂತ್ ವೃತ್ತಿಜೀವನದ ದೃಷ್ಟಿಯಿಂದ ಮುನ್ನಡೆದರು. 2022ರಲ್ಲಿ ಸೌತ್ ಇಂಡಿಯಾ ಬ್ಯಾಂಕ್​​ನಲ್ಲಿ ಕೆಲಸ ಪಡೆದಿದ್ದ ಶ್ರೀಕಾಂತ್, ಕೇವಲ ಏಳು ತಿಂಗಳಲ್ಲೇ ಆ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ಪರೀಕ್ಷೆಗೆ ತಯಾರಿ ಆರಂಭಿಸಿದರು. 2022ರಲ್ಲಿ ಮತ್ತೆ ಎರಡು ಕೆಲಸ ಗಿಟ್ಟಿಸಿದರೂ ಅದಕ್ಕೆ ಸೇರದ ಶ್ರೀಕಾಂತ್ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಅವರ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಇತ್ತೀಚೆಗಷ್ಟೇ ಶ್ರೀಕಾಂತ್ ಏಳು ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಿದ್ದಾರೆ.

    ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ಹುದ್ದೆ, ಏಕಲವ್ಯ ಮಾಡೆಲ್ ಸ್ಕೂಲ್‌ನಲ್ಲಿ ಅಕೌಂಟೆಂಟ್, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಎಒ, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಐಬಿಪಿಎಸ್​ ಕ್ಲರ್ಕ್, ಎಂಪ್ಲಾಯೀಸ್ ಸ್ಟೇಟ್ ಯೂನಿಯನ್ ಕಾರ್ಪೊರೇಷನ್‌ನಲ್ಲಿ ಅಪ್ಪರ್​ ಡಿವಿಷನ್​ ಕ್ಲರ್ಕ್, ಸೌತ್ ಇಂಡಿಯನ್ ಬ್ಯಾಂಕ್ ಪಿಒ, ಕರೀಂನಗರ ಡಿಸಿಸಿಬಿನಲ್ಲಿ ಕ್ಲರ್ಕ್, ರೀಜನಲ್​ ರೂರಲ್ ಅಚೀವ್ಡ್​ ಬ್ಯಾಂಕ್ಸ್​ ಪಿಒ, ಆರ್​ಆರ್​ಬಿ ಕ್ಲರ್ಕ್ ಉದ್ಯೋಗಗಳಿಗೆ ಶ್ರೀಕಾಂತ್​ ಆಯ್ಕೆಯಾಗಿದ್ದಾರೆ.

    ಈ ಏಳು ಉದ್ಯೋಗಳಲ್ಲಿ ಏಕಲವ್ಯ ಮಾದರಿ ಶಾಲೆಯ ಕೆಲಸಕ್ಕೆ ಸೇರುವ ಆಸೆ ಇದೆ ಎನ್ನುತ್ತಾರೆ ಶ್ರೀಕಾಂತ್​. ಇನ್ನು ಕೆಲವು ಉದ್ಯೋಗಗಳಿಗೆ ಅಂತಿಮ ಫಲಿತಾಂಶ ಬರಬೇಕಿದೆ ಎಂಬ ಮಾಹಿತಿಯೂ ಇದೆ. ಸಹೋದರಿ ಮತ್ತು ಸ್ನೇಹಿತರ ಬೆಂಬಲದಿಂದ ವೃತ್ತಿಜೀವನದ ದೃಷ್ಟಿಯಿಂದ ಸುಲಭವಾಗಿ ಯಶಸ್ಸನ್ನು ಸಾಧಿಸಿದೆ ಎಂದು ಶ್ರೀಕಾಂತ್​ ಹೇಳಿದ್ದಾರೆ. ಶ್ರೀಕಾಂತ್ ಅವರ ಯಶೋಗಾಥೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಭಿನಂದನೆಗಳು ಮಹಾಪೂರ ಹರಿದುಬರುತ್ತಿವೆ. (ಏಜೆನ್ಸೀಸ್​)

    ಧನುಷ್​ ಓರ್ವ ಸಲಿಂಗಕಾಮಿ, ಮನೆಯಿಂದಾಚೆಗೆ ಐಶ್ವರ್ಯಾ ಸರಸಸಲ್ಲಾಪ! ಮತ್ತೆ ಬಂದಳು ಸುಚಿ

    ನಾನು ಮಾಡಿದ ಈ ಒಂದು ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ! ಹೀಗ್ಯಾಕಂದ್ರು ಆಲಿಯಾ ಭಟ್​?

    ಆರ್​ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ: ಇದೊಂದು ಮಾತ್ರ ಆಗದಿರಲೆಂದು ದೇವರ ಮೊರೆ ಹೋದ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts