ಕುಡಿಯೋದಿಕ್ಕೂ ಇಲ್ಲ, ಬಳಕೆಗೂ ಇಲ್ಲ… ನೀರು ತರೋದೆ ದಿನನಿತ್ಯದ ಕೆಲಸ ಆಗೋಗಿದೆ!

ವಿಜಯವಾಣಿ-2024-05-16T112732.156
Published on

ಬಾಗಲಕೋಟೆ: ಜಿಲ್ಲೆಯ ಬೂದಿನಗಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದ್ದು, ಜೀವಜಲಕ್ಕಾಗಿ ಮೂರು ಕಿ.ಮೀ. ದೂರ ಹೊಲಗಳಿಗೆ ಹೋಗಿ. ಜಮೀನುದಾರರ ಬಳಿ ಮನವಿ ಮಾಡಿ ನೀರು ತರುವಂತಾಗಿದೆ. ಇಲ್ಲಿ ಕುಡಿಯಲು ಮತ್ತು ಬಳಕೆಗೂ ನೀರಿಲ್ಲ. ದಿನನಿತ್ಯ ನೀರು ತರೋದೆ ಕೆಲಸವಾಗಿ ಹೋಗಿದೆ ಎಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಳಲು ತೋಡಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲಿ ಎತ್ತಿನ ಬಂಡಿ ಸಹಾಯದಿಂದ ತಮ್ಮ ಮನೆಗಳಿಗೆ ನೀರು ತರ್ತಿರೋ ಜನರು, ಜಮೀನು ಮಾಲೀಕರಿಗೆ ದಮ್ಮಯ್ಯ ಎಂದು ಬೇಡಿ ನೀರು ತರುವಂತ ಕಠಿಣ ಪರಿಸ್ಥಿತಿ ಎದುರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಇದೇ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಯಾವ ಅಧಿಕಾರಿಗಳು ಸಹ ಮುಂದಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಮನೆಗಳಿಗೆ ಬೀಗರು, ಸಂಬಂಧಿಕರು ಬಂದಿದ್ದಾರೆ. ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ನೀರಿನ‌ ಸಮಸ್ಯೆ ಹಲವು ವರ್ಷಗಳಿಂದಲೂ ಇದೆ. ಆದರೆ, ಈ ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net