More

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಬೆಂಗಳೂರು: ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿರುವ ಒಟ್ಟು 12 ಪಂದ್ಯಗಳ ಪೈಕಿ ಏಳು ಮ್ಯಾಚ್​ಗಳನ್ನು ಸೋತ್ತಿದ್ದು, ಐದು ಪಂದ್ಯವನ್ನು ಗೆದ್ದು ತಮ್ಮ ಪ್ಲೇ-ಆಫ್​ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಸದ್ಯ ತಮ್ಮ ನೆಚ್ಚಿನ ತಂಡ ಬ್ಯಾಕ್​ ಟು ಬ್ಯಾಕ್​ ರೋಚಕ ಗೆಲುವು ದಾಖಲಿಸುತ್ತಿರುವುದನ್ನು ನೋಡಿದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ಇನ್ನೂ ತಮ್ಮ ತಂಡ ಪ್ಲೇಆಫ್ ಹೋಗುವುದು ಡೌಟ್​ ಎಂದಿದ್ದವರಿಗೆ ಅಂದು ವಿಲ್​ ಜ್ಯಾಕ್ಸ್​ ಕೊಟ್ಟಿದ್ದ ಉತ್ತರ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.

    ಇದನ್ನೂ ಓದಿ: ತೋಟಗಾರಿಕಾ ಬೆಳೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ `ಕ್ಷೇತ್ರೋತ್ಸವ’

    ಸತತ ಸೋಲುಗಳಿಂದ ಕೆಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ ಕಳೆದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುಟಿದೇಳುತ್ತಿರುವ ರೀತಿ ನೋಡಿದ್ರೆ, ಸುಲಭವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸುಲಭವಾಗಿಲ್ಲ. ಕಾರಣ, ಆರ್​ಸಿಬಿ ಮುಂಬರುವ ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಜಯ ಸಾಧಿಸಿದರೆ, ಪ್ರಾಯಶಃ ಹೋಗುವ ಎಲ್ಲಾ ಅವಕಾಶಗಳಿವೆ. ಆದರೆ, ಟಾಪ್ 4 ಮತ್ತು 5 ಸ್ಥಾನದಲ್ಲಿರುವ ತಂಡಗಳು ಹೀನಾಯ ಸೋಲು ಕಂಡರೆ ಮಾತ್ರ.

    ಕಳೆದ ಎಸ್​ಆರ್​ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪ್ಲೇ-ಆಫ್ ಬಗ್ಗೆ ಭವಿಷ್ಯ ನುಡಿದಿದ್ದ ವಿಲ್ ಜ್ಯಾಕ್ಸ್​, “ಹೊಸ ಬಾಲ್​ನೊಂದಿಗೆ ವಿಕೆಟ್ ತೆಗೆಯಲು ಸತತ ಪ್ರಯತ್ನಗಳನ್ನು ಮಾಡಿದ್ದೇವೆ. ಖಂಡಿತವಾಗಿ ಅದೆಲ್ಲವೂ ನಮಗೆ ಫಲಿಸಲಿದೆ. ನಿಮಗೆ ಗೊತ್ತಿಲ್ಲ, ನಾವು ಮುಂದಿನ ಪಂದ್ಯಗಳನ್ನು ಗೆದ್ದರೆ, ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ” ಎಂದಿದ್ದರು. ಸದ್ಯ ಈ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ,(ಏಜೆನ್ಸೀಸ್).

    ಪಂದ್ಯದ ಮಧ್ಯೆ ತನ್ನ ಪಾದ ಸ್ಪರ್ಶಿಸಿದ ಫ್ಯಾನ್​ಗೆ ಧೋನಿ ಹೇಳಿದ ಕಿವಿಮಾತಿದು; ನೀವಿಲ್ಲದ ಐಪಿಎಲ್​ ಏನೇನೂ ಅಲ್ಲ…

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    See also  ವಿಲ್ ಸಾಕ್ಷಿಗಳು ನ್ಯಾಯಾಲಯಕ್ಕೆ ಬರಲು ಆಗದಿದ್ದರೆ ಏನು ಮಾಡುವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts