ತೋಟಗಾರಿಕಾ ಬೆಳೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ `ಕ್ಷೇತ್ರೋತ್ಸವ'

kshethrothsava
ತೋಟಗಾರಿಕಾ ಬೆಳೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಕ್ಷೇತ್ರೋತ್ಸವವನ್ನು ಸಾಲಿಗ್ರಾಮದ ಪಾರಂಪಳ್ಳಿ ರಘು ಮಧ್ಯಸ್ಥ ಉದ್ಘಾಟಿಸಿರು
Published on

ವಿಜಯವಾಣಿ ಸುದ್ದಿಜಾಲ ಕೋಟ

ತೋಟಗಾರಿಕಾ ಇಲಾಖೆ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 2023-24ನೇ ಸಾಲಿನ ಜಿಪಂ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ಸಾಲಿಗ್ರಾಮದ ಪಾರಂಪಳ್ಳಿ ರಘು ಮಧ್ಯಸ್ಥರ ತೋಟದಲ್ಲಿ ತೋಟಗಾರಿಕಾ ಬೆಳೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಕ್ಷೇತ್ರೋತ್ಸವ ಜರುಗಿತು.

ಪಾರಂಪಳ್ಳಿ ಹಿರಿಯ ಕೃಷಿಕ ರಘು ಮಧ್ಯಸ್ಥ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕತೆ ಮುಂದುವರಿದಂತೆ ಯಂತ್ರೋಪಕರಣಗಳ ಮೂಲಕ ಮನುಷ್ಯನ ಕೆಲಸ ಕಡಿಮೆಯಾಗುತ್ತಿದೆ. ಕೃಷಿ ಕಾರ್ಯದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕೃಷಿಯಲ್ಲಿ ಬಳಕೆ ಮಾಡುತ್ತಿರುವ ರಾಸಾಯನಿಕ ಹಾಗೂ ಸಾವಯವ ಗೊಬ್ಬರ, ಕೃಷಿ ಬಗ್ಗೆ ಹಾಗೂ ಆಧುನಿಕತೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ರಮೇಶ್ ಹೇರ್ಳೆ ಮಾಹಿತಿ ನೀಡಿದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಇಲಾಖೆ ಯೋಜನೆ ಮತ್ತು ಸಹಾಯಧನದ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ರಾಹುಲ್, ಅಂಗನವಾಡಿ ಕಾರ್ಯಕರ್ತೆಯರು, ಕೃಷಿಕರು ಉಪಸ್ಥಿತರಿದ್ದರು. ಖುಷಿ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ವಂದಿಸಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ದೀಪಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net