More

    10ರಿಂದ ಕೆಳಬೆಟ್ಟು ದೈವಸ್ಥಾನ ನೇಮೋತ್ಸವ

    ಕೋಟ: ಸಾಸ್ತಾನ ಪಾಂಡೇಶ್ವರ ಮೂಡಹಡು ಗ್ರಾಮದ ಕೆಳಬೆಟ್ಟು ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದ ಕಳಿಬೈಲ್ ನೇಮೋತ್ಸವ, ಗೆಂಡೋತ್ಸವ, ಮಾರಿಪೂಜೆ ಹಾಗೂ ನೇಮೋತ್ಸವ ಮೇ 10, 11 ಹಾಗೂ 12ರಂದು ನಡೆಯಲಿದೆ.

    ಮೇ.10ರಂದು ಬೆಳಗ್ಗೆ 6ರಿಂದ ನಾಯಿರಬೆಟ್ಟು ರಮೇಶ್ ಭಟ್‌ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠಾಪನೆ,ಧಾರ್ಮಿಕ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ಮಾನ ನಡೆಯಲಿದೆ. ಅನ್ನಪೂರ್ಣ ಪಾಕಶಾಲೆ ಲೋಕಾರ್ಪಣೆ, ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ, ರಾತ್ರಿ 8.30ಕ್ಕೆ ಭಕ್ತಿ ಗಾನ ನೃತ್ಯ ವೈಭವ, ರಾತ್ರಿ 9.30ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ, ಗೆಂಡೋತ್ಸವ ನಡೆಯಲಿದೆ.

    11ರಂದು ಬೆಳಗ್ಗೆ 6ಕ್ಕೆ ಪ್ರಸನ್ನ ಪೂಜೆ, 10ಕ್ಕೆ ನೇಮೋತ್ಸವದ ಚಪ್ಪರ ಮುಹೂರ್ತ, ಮಧ್ಯಾಹ್ನ 12ಕ್ಕೆ ಪೂಜೆ, 1ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 3.30ಕ್ಕೆ ಭಂಡಾರ ಇಳಿಯುವುದು, ಸಂಜೆ 6ರಿಂದ ಕಳಿಬೈಲ್ ನೇಮೋತ್ಸವ, ಯಕ್ಷಿ ಕೋಲ ಸೇವೆ, ಪಂಜುರ್ಲಿ ಗುರಮ್ಮ ಕೋಲ ಸೇವೆ, ಮಲಸಾವರಿ ಆಕಾಶ ರಾಹು ಕೋಲ ಸೇವೆ, ಕಳಿಬೈಲ್ ಕೊರಗಜ್ಜ ಕೋಲ ಸೇವೆ ನಡೆಯಲಿದೆ.

    12ರಂದು ಬೆಳಗ್ಗೆ 10ಕ್ಕೆ ಪಂಜುರ್ಲಿ ದೈವದ ದರ್ಶನ ಸೇವೆ, ದೈವದ ಪೂಜೆ, ಮಧ್ಯಾಹ್ನ 2ಕ್ಕೆ ತುಳಸಿ ಅಮ್ಮನ ದರ್ಶನ ಸೇವೆ, ಶ್ರೀ ಮಳಯಾಳಿ ಭಂಗಿ ಅಜ್ಜನ ದರ್ಶನ ಸೇವೆ, ಹುಲಿದುರ್ಗಿ ಅಮ್ಮನ ದರ್ಶನ ಸೇವೆ, ಸಂಜೆ 4ರಿಂದ ಶಿರಸಿ ಮಾರಿಕಾಂಬೆ ದರ್ಶನ ಸೇವೆ, ಮಾರಿಪೂಜೆ, ರಾತ್ರಿ 8ಕ್ಕೆ ಕೊರಗಜ್ಜನ ದರ್ಶನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಕಳಿಬೈಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕ ಹಾಗೂ ಸಂಚಾಲಕ ಅಭಿಜಿತ್ ಪಾಂಡೇಶ್ವರ ಹಾಗೂ ಶ್ರೀ ಕ್ಷೇತ್ರ ಕಳಿಬೈಲು ಆಡಳಿತ ಮೊಕ್ತೇಸರ ಎಂ.ಸಿ.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts