

ನವದೆಹಲಿ: 2011ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟ್ ಮಾಡಿ, ಫೈನಲ್ನಲ್ಲಿ 97 ರನ್ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಗೌತಮ್ ಗಂಭೀರ್ ಕಂಡರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ಹೆಚ್ಚಿನ ಪ್ರೀತಿ, ಉತ್ಸಾಹ. ಅದರಲ್ಲೂ ವಿಶೇಷ ಎಂದರೆ 2008ರಲ್ಲಿ ಶುರುವಾದ ಐಪಿಎಲ್ ಆವೃತ್ತಿಯಲ್ಲಿ ಭಾಗಿಯಾದ ಗೌತಮ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಆಗಿ ಎರಡು ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ.
ಇನ್ನೂ ತಮ್ಮ ಐಪಿಎಲ್ ವೃತ್ತಿಯಲ್ಲಿ ಪ್ರಸ್ತುತ ಕೆಕೆಆರ್ ಮೆಂಟರ್ ಆಗಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿರುವ ಗೌತಮ್ ಗಂಭೀರ್, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕಂಡ ಹೀನಾಯ ಸೋಲಿನಲ್ಲಿ ಮುಂಬೈ ಪರ ಆಡಿದ ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ರನ್ನು ನೋಡಿ ಅತೀವ ಬೇಸರವನ್ನು ಹೊರಹಾಕಿದರು. ಐಪಿಎಲ್ ಲೀಗ್ನಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ತಂಡದ ಪರ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಪ್ರತಿಭೆಗೆ ಗೌತಿ ಮನಸೋತಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಸೂರ್ಯಕುಮಾರ್ ಬಗ್ಗೆ ಎಲ್ಲಿಯೂ ಹೇಳದ ಸಂಗತಿಯನ್ನು ಮುಕ್ತವಾಗಿ ಹಂಚಿಕೊಂಡ ಗೌತಿ, 2014ರಿಂದ 2017 ರವರೆಗೂ ಸೂರ್ಯ ನಮ್ಮ ಕೆಕೆಆರ್ ತಂಡದಲ್ಲಿಯೇ ಆಡಿದ್ದರು. ಕೆಕೆಆರ್ಗೆ ಸಹಿ ಹಾಕುವ ಮುನ್ನ 2012ರಲ್ಲಿ ಸ್ಕೈ ಒಂದೇ ಒಂದು ವರ್ಷ ಮಾತ್ರ ಮುಂಬೈ ಪರ ಆಡಿದ್ದರು. ಅಂದು ನನ್ನ ತಂಡದಲ್ಲಿಯೇ ಇದ್ದ ಸೂರ್ಯರನ್ನು ನಾನು ಗುರುತಿಸಲೇ ಇಲ್ಲ ಎಂದಿದ್ದಾರೆ.
"ಟೀಮ್ನ ಕ್ಯಾಪ್ಟನ್ ಆಗಿ ಸೂರ್ಯರನ್ನು ಗುರುತಿಸದೆ ಹೋಗಿದ್ದು, ನನಗೆ ಬಹಳ ಪಶ್ಚಾತಾಪ ಕಾಡುತ್ತದೆ. ಸೂರ್ಯರ ತಾಕತ್ತು, ಅತ್ಯುತ್ತಮ ಬ್ಯಾಟಿಂಗ್ ಲೈನ್ನಪ್ ಅನ್ನು ಅಂದೇ ಗಮನಿಸಬೇಕಿತ್ತು. ನಾಯಕನಾಗಿ ಸೂರ್ಯಕುಮಾರ್ ಯಾದವ್ರನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂಬುದೇ ಬೇಸರ. 7ನೇ ಕ್ರಮಾಂಕದಲ್ಲಿಯೇ ಉತ್ತಮರಾಗಿದ್ದ ಸೂರ್ಯ, ಮೂರನೇ ಆರ್ಡರ್ನಲ್ಲಿ ಸಖತ್ ಡೆಂಜರೆಸ್ ಬ್ಯಾಟ್ಸ್ಮನ್ ಆಗಿದ್ದಾರೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).