More

  ಧನುಷ್​ ಓರ್ವ ಸಲಿಂಗಕಾಮಿ, ಮನೆಯಿಂದಾಚೆಗೆ ಐಶ್ವರ್ಯಾ ಸರಸಸಲ್ಲಾಪ! ಮತ್ತೆ ಬಂದಳು ಸುಚಿ

  ಚೆನ್ನೈ: ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್​ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು.

  ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

  ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.

  ಇದೀಗ ಸುಚಿತ್ರಾ ಅವರು ಮರಳಿ ಬಂದಿದ್ದು, ಎಕ್ಸ್​ (ಈ ಹಿಂದೆ ಟ್ವಿಟರ್​)ನಲ್ಲಿ ಮತ್ತೆ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ತಮಿಳು ಯೂಟ್ಯೂಬ್​ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಚಿತ್ರಾ ಅವರು ಆಡಿರುವ ಮಾತುಗಳು ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿದೆ.

  ಮಾಜಿ ತಾರಾ ದಂಪತಿ ಧನುಷ್​ ಮತ್ತು ಐಶ್ವರ್ಯಾ ರಜಿನಿಕಾಂತ್​ ಒಬ್ಬರಿಗೊಬ್ಬರು ವಂಚನೆ ಮಾಡುತ್ತಿದ್ದರು. ಮನೆಯಿಂದ ಹೊರಗಡೆ ಇಬ್ಬರು ಬೇರೆಯವರೊಂದಿಗೆ ಸರಸವಾಡುತ್ತಿದ್ದರು ಎಂದು ಸುಚಿತ್ರಾ ಆರೋಪಿಸಿದ್ದಾರೆ. ಅಲ್ಲದೆ, ನಟ ಧನುಷ್​ ಓರ್ವ ಸಲಿಂಗಕಾಮಿ ಮತ್ತು ಮಾದಕ ವ್ಯಸನಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

  ಧನುಷ್​ ಅವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿರುವ ಸುಚಿತ್ರಾ ಅವರ ವಿರುದ್ಧ ಧನುಷ್​ ಅಭಿಮಾನಿಗಳು ಕಿಡಿಕಾರಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಜರಿಯುತ್ತಿದ್ದಾರೆ. ಸುಚಿತ್ರಾ ಪತಿಯು ಕೂಡ ಇದನ್ನೇ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯ ಮಾತುಗಳನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

  ಇನ್ನೂ ತಮಿಳು ಸಿನಿಮಾ ಅಭಿಮಾನಿಗಳು ಯೂಟ್ಯೂಬ್​ ಸಂದರ್ಶನವನ್ನು ಅಸಂಬದ್ಧವೆಂದು ಖಂಡಿಸಿದ್ದಾರೆ. ಈ ಯೂಟ್ಯೂಬ್​ ಚಾನಲ್‌ ನಕಾರಾತ್ಮಕತೆಯನ್ನು ಸೃಷ್ಟಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

  ಮೀಮ್ಸ್​ ಸ್ಟಾರ್ ಕ್ಸೇವಿಯರ್ ಅಂಕಲ್ ನಿಜವಾದ ಹೆಸರೇನು? ಈಗ ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ?​

  ನಿನಗೆ 400 ಕೋಟಿ ರೂ. ಸಾಕಲ್ಲವೇ? ರಾಹುಲ್​ರನ್ನು ಬೈದ LSG ಮಾಲೀಕನಿಗೆ ವೀರೂ ತರಾಟೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts