More

    ವಿಶ್ವಮಾನವ ಶಾಲೆಯ ಶತಕ ಸಾಧನೆ

    ಚಿತ್ರದುರ್ಗ: ಗುತ್ತಿನಾಡು-ಸೀಬಾರ ವಿಶ್ವಮಾನವ ವಸತಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಎಲ್ಲ 183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    ಅತ್ಯುನ್ನತ ಶ್ರೇಣಿ 39, ಪ್ರಥಮ 71, ದ್ವಿತೀಯ ಶ್ರೇಣಿಯಲ್ಲಿ 73 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಜಿ.ಎಸ್.ನಿಸರ್ಗ (606), ಬಿ.ಎಸ್.ಧನುಷ್ (598), ಎಚ್.ಎಸ್.ಲೋಹಿತ್ (597), ಜಿ.ಎಂ. ಸದಾನಂದಗೌಡ (594), ಗಾಯತ್ರಿ ಮತ್ತು ಜಿ.ಸಿಂಚನಾ (587) ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು, ಸಿಬ್ಬಂದಿ, ಸಂಸ್ಥೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.

    ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಬೆಳಗ್ಗೆ ಮತ್ತು ಸಂಜೆ ತರಗತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿತ್ತು ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠ ದೇವರು ತಿಳಿಸಿದ್ದಾರೆ.

    ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸಿ ಅವರಿಗಾಗಿ ಪಾಸಿಂಗ್ ಪ್ಯಾಕೇಜ್ ತಯಾರಿಸಿ, ಅದರನ್ವಯ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲಾಗುತ್ತಿತ್ತು.

    ವೈಯಕ್ತಿಕ ಕಾಳಜಿ ವಹಿಸಿ ಪಠ್ಯದ ಬಗೆಗಿನ ಸಂದೇಹಗಳನ್ನು ಬಗೆಹರಿಸಲು ಶಿಕ್ಷಕರು ಸದಾ ಸಿದ್ಧರಾಗಿರುತ್ತಿದ್ದರು.

    ಪ್ರತಿಭಾನ್ವಿತ ಪಿಯುಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಎಸ್ಸಿ ವರ್ಗದ ಪ್ರತಿಭಾನ್ವಿತ ಐವರು ಹಾಗೂ ಒಬಿಸಿ ವರ್ಗದ 5 ವಿದ್ಯಾರ್ಥಿನಿಯರಿಗೆ ಉಚಿತ ಪಿಯು ಶಿಕ್ಷಣ ನೀಡಲಾಗುವುದು.

    ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಉಚಿತವಾಗಿರುತ್ತದೆ ಎಂದಿದ್ದಾರೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಸಂಸ್ಥೆ ಉತ್ತಮ ಫಲಿತಾಂಶ ಪಡೆಯುತ್ತಿದ್ದು, 6 ರಿಂದ 10 ನೇ ತರಗತಿವರೆಗೆ ಫೌಂಡೇಶನ್ ಕೋರ್ಸ್ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts