More

  ಐಶ್ವರ್ಯಾ ರೈ ಬಲಗೈಗೆ ಪೆಟ್ಟು: ಕೈಗೆ ಬ್ಯಾಂಡೇಜ್‌ ಹಾಕಿಕೊಂಡು ಮಗಳ ಜತೆ ಕಾಣಿಸಿಕೊಂಡ ನಟಿ

  ಮುಂಬೈ: ಬಾಲಿವುಡ್​​ ನಟಿ ಐಶ್ವರ್ಯ ರೈ ಬಲಗೈಗೆ ಪೆಟ್ಟು ಬಿದ್ದಿದ್ದು, ಕೈಗೆ ಬ್ಯಾಂಡೇಜ್​ ಹಾಕಲಾಗಿದೆ.  ಮಗಳ ಜತೆ ಏರ್​​ಪೋರ್ಟ್​​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್​​ ಆಗಿದೆ.

  ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಐಶ್ವರ್ಯಾ ಅವರು ಮಗಳ ಜತೆ ಕಾರಿನಿಂದ ಇಳಿದಿದ್ದಾರೆ. ಅವರ ಬಲಗೈಗೆ ಬ್ಯಾಂಡೇಜ್‌ ಹಾಕಲಾಗಿತ್ತು. ಕಪ್ಪು ಉಡುಪಿನೊಂದಿಗೆ ನೀಲಿ ಕೋಟ್ ಧರಿಸಿದ್ದರು ನಟಿ. ಆರಾಧ್ಯ ಅವರು ತಿಳಿ ನೀಲಿ ಹೂಡಿ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಕೆಲ ಸೆಕೆಂಡುಗಳ ಕಾಲ ಮಾಧ್ಯಮದವರತ್ತ ಕೈ ಬೀಸಿದ ಐಶ್ವರ್ಯಾ ನಂತರ ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸಿದರು. ಆದರೆ ಅಭಿಮಾನಿಗಳ ಕಣ್ಣು ಬಿದ್ದಿದ್ದು ಮಾತ್ರ  ಐಶ್ವರ್ಯ ಅವರ ಕೈ ಮೇಲೆ.

  ಐಶ್ವರ್ಯಾ ಅವರು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಆದರೆ ಐಶ್ವರ್ಯಾ  ಅವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್‌ ಕೂಡ ಸುತ್ತಿಕೊಂಡಿದ್ದರು. ಹೀಗಾಗಿ ಐಶ್ವರ್ಯಾ ಫ್ಯಾನ್ಸ್‌ಆತಂಕಕ್ಕೆ ಒಳಗಾಗಿ ಕಮೆಂಟ್‌ ಮೂಲಕ ನಟಿಯ ಕ್ಷೇಮ ವಿಚಾರಿಸಿದ್ದಾರೆ.

  2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಭಾರತದ 7 ಸಿನಿಮಾಗಳು 77ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿವೆ. ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಮೇಲೆ ನಡೆಯಲು ಸಿದ್ಧರಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts