More

    ನಾನು ಮಾಡಿದ ಈ ಒಂದು ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ! ಹೀಗ್ಯಾಕಂದ್ರು ಆಲಿಯಾ ಭಟ್​?

    ಮುಂಬೈ: ಬಾಲಿವುಡ್ ಬೆಡಗಿ ‘ಆಲಿಯಾ ಭಟ್’ ಅವರನ್ನು ಸಿನಿರಸಿಕರಿಗೆ ವಿಶೇಷವಾಗಿ ಪರಿಚಯ ಅಗತ್ಯವಿಲ್ಲ. ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್​​ಗಳಲ್ಲಿ ಇವರು ಕೂಡ ಒಬ್ಬರು. ಅದೂ ಅಲ್ಲದೆ ಅತಿ ಕಡಿಮೆ ಸಮಯದಲ್ಲಿ ತಮ್ಮ ಅಭಿನಯದಿಂದ ಆಲಿಯಾಗೆ ಒಳ್ಳೆಯ ಕ್ರೇಜ್ ಸಿಕ್ಕಿದೆ. ಸ್ಟಾರ್ ಹೀರೋ ರಣಬೀರ್ ಕಪೂರ್​ ಅವರನ್ನು ಪ್ರೀತಿಸಿ ಮದುವೆಯಾದ ಈ ಚೆಲುವೆ, ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡರು. ಇದೀಗ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್​ನಿಂದ ಸ್ವಲ್ಪ ವಿರಾಮ ಸಿಕ್ಕಾಗಲೆಲ್ಲ ಗಂಡ-ಮಗಳ ಜೊತೆ ಕಾಲ ಕಳೆಯುತ್ತಾರೆ.

    ಆಲಿಯಾರ ಮಗಳ ಹೆಸರು ರಾಹಾ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚೆಗೆ ತಮ್ಮ ಮಗಳ ಬಗ್ಗೆ ಆಲಿಯಾ ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆಲಿಯಾ ಹೇಳಿದ್ದೇನು ಅಂತಾ ನೋಡುವುದಾದರೆ, ನಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

    ನಾಡ್​ ಮ್ಯಾಗಜಿನ್​ ಜತೆ ಮಾತನಾಡಿರುವ ಆಲಿಯಾ, ನಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಲಂಡನ್‌ನಲ್ಲಿ ಹಾರ್ಟ್ ಆಫ್ ಸ್ಟೋನ್‌ ಚಿತ್ರಕ್ಕಾಗಿ ಶೂಟಿಂಗ್ ಮಾಡುವಾಗ, ಮೂರು ದಿನಗಳವರೆಗೆ ಮಲಗಲು ಸಾಧ್ಯವಾಗಲಿಲ್ಲ. ಹೆತ್ತವರನ್ನು ಬಿಟ್ಟು ಅಷ್ಟು ದೂರ ಹೋಗುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನೊಬ್ಬ ಒಳ್ಳೆಯ ಮಗಳಲ್ಲ ಎಂಬ ತಪ್ಪಿತಸ್ಥ ಭಾವನೆಯೂ ಕಾಡಿತು ಎಂದು ಆಲಿಯಾ ಹೇಳಿದರು. ಇದೇ ವೇಳೆ ಆಲಿಯಾ ತಾಯಿ ಸೋನಿ ಅವರು ಮಧ್ಯಪ್ರವೇಶಿಸಿ, ಆಲಿಯಾ ತನ್ನ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಆದರೆ, ಕೆಲವು ದಿನಗಳು ನನ್ನ ಕರೆಗಳನ್ನು ಸ್ವೀಕರಿಸದೇ ಅಥವಾ ನನ್ನ ಮೇಲೆ ಯಾವುದೇ ಗಮನವನ್ನು ನೀಡದಿದ್ದ ಕಾರಣ ಆಕೆ ಆತಂಕವನ್ನೂ ಅನುಭವಿಸಿದ್ದಾಳೆ ಎಂದು ಹೇಳಿದರು.

    ನಾನು ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾಗ ನನ್ನ ತಾಯಿ ಸೋನಿ ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿಲ್ಲ. ನಾನು ಮನೆಯಿಂದ ಹೊರಬಂದಾಗ ನನಗೆ ಕೇವಲ 23 ವರ್ಷ. ನಾನು ದೀರ್ಘಾವಧಿಯ ಶೂಟಿಂಗ್ ಶೆಡ್ಯೂಲ್‌ಗಳಿಂದಾಗಿ ಕುಟುಂಬದಿಂದ ದೂರವಿದ್ದೆ. ಕೆಲವೊಮ್ಮೆ ನಾನು ಯಾವ ಊರಿನಲ್ಲಿದ್ದೇನೆ ಎಂದು ನನಗೆ ತಿಳಿಯುತ್ತಿರಲಿಲ್ಲ. ಹೀಗಾಗಿ ಇದು ನನ್ನ ಜೀವನದಲ್ಲಿ ಮತ್ತು ನಮ್ಮ ಸಂಬಂಧದಲ್ಲಿ ಅತ್ಯಂತ ನಿರ್ಣಾಯಕ ಹಂತವಾಗಿತ್ತು ಎಂದು ಆಲಿಯಾ ಹೇಳಿದರು.

    ಇದೇ ಸಂದರ್ಭದಲ್ಲಿ ಆಲಿಯಾ, ತಮ್ಮ ತಾಯಿ ಸೋನಿಯನ್ನು ಹೊಗಳಿದರು. ಎಲ್ಲ ಸಮಯದಲ್ಲೂ ಉತ್ತಮ ಬೆಂಬಲ ಮತ್ತು ಗೌಪ್ಯತೆಯನ್ನು ನೀಡಿದ್ದಕ್ಕೆ ತಾಯಿಯನ್ನು ಶ್ಲಾಘಿಸಿದರು. ನಾನು ಬೇಗನೆ ಮನೆಯಿಂದ ಹೊರಬಂದೆ ಎಂದು ನನಗೆ ಅನಿಸುತ್ತದೆ. ಆದರೆ, ನನ್ನ ಮಗಳು ರಾಹಾ ವಿಚಾರದಲ್ಲಿ ಅದು ಸಂಭವಿಸಲು ಬಿಡುವುದಿಲ್ಲ. ನಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ. ನಾನು ಭವಿಷ್ಯದ ಬಗ್ಗೆ ಯೋಚಿಸುವ ವ್ಯಕ್ತಿ ಎಂದು ಆಲಿಯಾ ಹೇಳಿದರು. ಸದ್ಯ ಆಲಿಯಾ ತಮ್ಮ ಮಗಳ ಬಗ್ಗೆ ಮಾಡಿರುವ ಇಂಟ್ರೆಸ್ಟಿಂಗ್ ಕಾಮೆಂಟ್‌ಗಳು ವೈರಲ್ ಆಗಿವೆ.

    ಸಿನಿಮಾ ವಿಚಾರಕ್ಕೆ ಬಂದರೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಅಂಡ್ ವಾರ್’ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ಕವರ್​​​ ಪೇಜ್​ಗಾಗಿ ಬೋಲ್ಡ್​ ಅವತಾರ ತಾಳಿದ ರಶ್ಮಿಕಾ! ಚಸ್ಮಾ ಸುಂದರಿಯ ಗ್ಲಾಮರಸ್​ ಫೋಟೋಗಳು ವೈರಲ್​

    ಪ್ಲೇಆಫ್​ಗೇರಲು CSK ವಿರುದ್ಧ ನಡೆಯಬೇಕಿದೆ 18ರ ಪವಾಡ! ಇಷ್ಟರಲ್ಲಿ ಒಂದು ಉಲ್ಟಾ ಆದ್ರೂ RCB ಮನೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts