More

    ಕವರ್​​​ ಪೇಜ್​ಗಾಗಿ ಬೋಲ್ಡ್​ ಅವತಾರ ತಾಳಿದ ರಶ್ಮಿಕಾ! ಚಸ್ಮಾ ಸುಂದರಿಯ ಗ್ಲಾಮರಸ್​ ಫೋಟೋಗಳು ವೈರಲ್​

    ಹೈದರಾಬಾದ್​: ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಖ್ಯಾತ ಮ್ಯಾಗಜಿನ್​ ಒಂದರ ಕವರ್​ ಪೇಜ್​ಗಾಗಿ ರಶ್ಮಿಕಾ ಹಾಟ್​ ಆ್ಯಂಡ್​ ಬೋಲ್ಡ್​ ಫೋಟೋಶೂಟ್​ ಮಾಡಿಸಿದ್ದಾರೆ.

    ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ, ಇನ್​ಸ್ಟಾಗ್ರಾಂನಲ್ಲಿ ರಶ್ಮಿಕಾ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಪಶ್ಚಿಮ ಆಸ್ಟ್ರೇಲಿಯಾದ ಸುಂದರ ತಾಣಗಳಲ್ಲಿ ಸೆರೆಹಿಡಿದಿರುವ ಫೋಟೋಗಳು ಇದಾಗಿವೆ.

    ಹಳದಿ ಬಣ್ಣದ ತುಂಡುಡುಗೆಯಲ್ಲಿ ಮಾದಕ ಪೋಸ್​ ನೀಡಿರುವ ಫೋಟೋ ಕುರಿತು “ನಮ್ಮ ಕವರ್ ಸ್ಟಾರ್ ರಶ್ಮಿಕಾ ಮಂದಣ್ಣ ಅವರ ಪ್ರವಾಸದ ಪ್ರಮುಖ ಅಂಶಗಳಲ್ಲಿ ಪರ್ತ್ (@westernaustralia)ಬೀಚ್‌ಗಳನ್ನು ಅನ್ವೇಷಿಸುವುದು ಕೂಡ ಒಂದು ಎಂದು ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೆದುಕೊಂಡಿದೆ.

    ಸೈಕಲ್​ ಏರಿ ಬರುತ್ತಿರುವ ಮತ್ತೊಂದು ಫೋಟೋ ಕುರಿತು “ಇದು ಸುಂದರ, ಸ್ವಚ್ಛ, ವಿಶ್ರಾಂತಿ ಮತ್ತು ಎಲ್ಲರನ್ನು ಆಹ್ವಾನಿಸುವಂತಿದೆ. ಇದು ಗಡಿಬಿಡಿ ಮುಕ್ತವಾಗಿರುವುದರಿಂದ ಈ ಸ್ಥಳವನ್ನು ನಾನು ಪ್ರೀತಿಸುತ್ತೇನೆ. ಇಲ್ಲಿ ನಾನು ಕ್ವಾಕ್ಕಾಗಳನ್ನು ಭೇಟಿಯಾದೆ ಮತ್ತು ರಾಟ್‌ನೆಸ್ಟ್ (@westernaustralia) ದ್ವೀಪದ ಪ್ರೀತಿಯಲ್ಲಿ ಬಿದ್ದೆ. ನೀವು ಸುಲಭವಾಗಿ ಬದುಕುವ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.

    ಮತ್ತೊಂದು ಫೋಟೋದಲ್ಲಿ ಬಹುವರ್ಣದ ಉಡುಪಿನಲ್ಲಿ ರಶ್ಮಿಕಾ ಪೋಸ್​ ನೀಡಿದ್ದು, ರಶ್ಮಿಕಾ ಮಂದಣ್ಣ ರಾಟ್‌ನೆಸ್ಟ್ ದ್ವೀಪದ (@westernaustralia) ಪಿಂಕಿ ಬೀಚ್‌ನ ಮೇಲಿರುವ ಬಾಥರ್ಸ್ಟ್ ಲೈಟ್‌ಹೌಸ್ ಮುಂದೆ ಪೋಸ್ ನೀಡಿದ್ದಾರೆ ಎಂದು ಟ್ರಾವೆಲ್​ ಆ್ಯಂಡ್​ ಲೀಸರ್​ ಇಂಡಿಯಾ ಬರೆದುಕೊಂಡಿದೆ. ರಶ್ಮಿಕಾ ಮಂದಣ್ಣ ಅವರು ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ತುಂಬಾ ಬಿಜಿಯಾಗಿರುವ ರಶ್ಮಿಕಾ ಸದ್ಯ ಪುಷ್ಪ 2 ಮತ್ತು ದಿ ಗರ್ಲ್ ಫ್ರೆಂಡ್ ರೇನ್‌ಬೋ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ಧನುಷ್​ ಓರ್ವ ಸಲಿಂಗಕಾಮಿ, ಮನೆಯಿಂದಾಚೆಗೆ ಐಶ್ವರ್ಯಾ ಸರಸಸಲ್ಲಾಪ! ಮತ್ತೆ ಬಂದಳು ಸುಚಿ

    ಪ್ಲೇಆಫ್​ಗೇರಲು CSK ವಿರುದ್ಧ ನಡೆಯಬೇಕಿದೆ 18ರ ಪವಾಡ! ಇಷ್ಟರಲ್ಲಿ ಒಂದು ಉಲ್ಟಾ ಆದ್ರೂ RCB ಮನೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts