More

    ಗಂಭೀರ್​​ ನಗುವವರೆಗೂ ನನ್ನ ಕ್ರಶ್​ಗೆ ಪ್ರಪೋಸ್ ಮಾಡಲ್ಲ ಎಂದ ಅಭಿಮಾನಿ! ಗೌತಿ ಕೊಟ್ಟ ಪ್ರತಿಕ್ರಿಯೆ ವೈರಲ್​

    ನವದೆಹಲಿ: ಗೌತಮ್ ಗಂಭೀರ್.. ಈ ಹೆಸರು ಹೇಳಿದರೆ ಸಾಕು ಎಲ್ಲರಿಗೂ ಅವರ ಅದ್ಭುತ ಬ್ಯಾಟಿಂಗ್ ನೆನಪಾಗುತ್ತದೆ. 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಗಂಭೀರ್​ ಪ್ರಮುಖ ಪಾತ್ರ ವಹಿಸಿದ್ದರು. ಈ ಮೆಗಾ ಟೂರ್ನಿ ಮಾತ್ರವಲ್ಲ, ಏಕಾಂಗಿಯಾಗಿ ಹಲವು ಸರಣಿಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ನಾಯಕರಾಗಿದ್ದಾಗ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ.

    ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಗಂಭೀರ್​ ಅವರು ರಾಜಕೀಯದಲ್ಲಿ ಬಿಜಿಯಾದರು. ಸ್ವಲ್ಪ ಸಮಯದ ನಂತರ ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್‌ಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಪ್ರಸಕ್ತ ಸೀಸನ್​ನಲ್ಲಿ ಕೆಕೆಆರ್​ ತಂಡಕ್ಕೆ ಮೆಂಟರ್ ಆಗಿದ್ದಾರೆ. ಅಲ್ಲದೆ, ತಂಡದ ಸಂಯೋಜನೆಯನ್ನು ಬದಲಾಯಿಸುವ ಮೂಲಕ ಕೋಲ್ಕತ್ತ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ಪ್ರಮುಖ ಕಾರಣರಾಗಿದ್ದಾರೆ.

    ಕೆಕೆಆರ್ ಸತತ ಗೆಲುವಿನಿಂದ ಗಂಭೀರ್ ಖುಷಿಯಾಗಿದ್ದಾರೆ. ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಕ್ರಿಕೆಟಿಗನ ಯಶಸ್ಸನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಳಾ ಅಭಿಮಾನಿಯೊಬ್ಬರು ಗಂಭೀರ್​ಗೆ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ. ತನ್ನ ಪ್ರೀತಿಯನ್ನು ಉಳಿಸಿಕೊಡುವಂತೆ ವಿನಂತಿಸಿದ್ದಾಳೆ. ಐಪಿಎಲ್ ಪಂದ್ಯವೊಂದರಲ್ಲಿ ಭಾಗವಹಿಸಿದ್ದ ಮಹಿಳಾ ಅಭಿಮಾನಿಯೊಬ್ಬರು ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ನಿಂತಿರುವ ಫೋಟೋ ವೈರಲ್​ ಆಗಿದೆ. ಪ್ಲೆಕಾರ್ಡ್​ನಲ್ಲಿ ಗೌತಮ್ ಗಂಭೀರ್​ ಅವರು ಗಂಭೀರವಾಗಿರುವ ಫೋಟೋ ಕೂಡ ಇದೆ. ಗಂಭೀರ್ ನಗುವವರೆಗೂ ನಾನು ಇಷ್ಟಪಡುವ ಹುಡುಗನಿಗೆ ಪ್ರಪೋಸ್ ಮಾಡುವುದಿಲ್ಲ ಎಂದು ಮಹಿಳಾ ಅಭಿಮಾನಿ ಬರೆದುಕೊಂಡಿದ್ದಾರೆ. ಪಂದ್ಯದ ಸಮಯದಲ್ಲಿ ಕ್ಯಾಮೆರಾಮನ್ ಫೋಟೋ ಸೆರೆಹಿಡಿದ ನಂತರ ವೈರಲ್ ಆಗಿದೆ.

    ಮಹಿಳಾ ಅಭಿಮಾನಿಯ ಈ ವಿನಂತಿ ಗಂಭೀರ್ ಅವರ ಗಮನಕ್ಕೂ ಬಂದಿದೆ. ಇದಕ್ಕೆ ಗೌತಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಸಹ ನೀಡಿದ್ದಾರೆ. ಮಹಿಳಾ ಅಭಿಮಾನಿಯ ಫೋಟೋ ಜತೆಗೆ ತಾವು ನಗುತ್ತಿರುವ ಫೋಟೋವನ್ನು ಕೊಲ್ಯಾಜ್​ ಮಾಡಿ, ನೀವಿನ್ನೂ ಮುಂದುವರಿಯಿರಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಸದ್ಯ ಮಹಿಳಾ ಅಭಿಮಾನಿಯ ಮನವಿಗೆ ಗಂಭೀರ್ ನೀಡಿದ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಗಂಭೀರ್​ ಅವರು ತಮ್ಮ ಅಭಿಮಾನಿಗಳಿಗೆ ಹೇಗೆಲ್ಲ ಗೌರವ ಕೊಡುತ್ತಾರೆ ಎಂಬುದಕ್ಕೆ ಈ ಘಟನೆ ಉದಾಹರಣೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಕೆಕೆಆರ್​ ಹಿಂದಿನ ಸೀಸನ್‌ಗಳಿಗಿಂತ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸುನೀಲ್​ ನಾರಾಯಣ್​ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿರುವುದು, ಹರ್ಷಿತ್ ರಾಣಾ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಗೌತಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಇದೀಗ ತಂಡದಲ್ಲಿ ಆಲ್‌ರೌಂಡರ್‌ಗಳು ತುಂಬಿದ್ದು, ಅವರೆಲ್ಲರೂ ಟಾಪ್ ಫಾರ್ಮ್‌ನಲ್ಲಿರುವುದರಿಂದ ಕೆಕೆಆರ್ ಅಪಾಯಕಾರಿ ತಂಡ ಎನಿಸಿಕೊಂಡಿದೆ. ಹೀಗೇ ಆಡಿದರೆ ಈ ಬಾರಿ ಪ್ರಶಸ್ತಿ ತಮ್ಮದಾಗಲಿದೆ ಎನ್ನುತ್ತಾರೆ ಕೆಕೆಆರ್​ ಅಭಿಮಾನಿಗಳು. (ಏಜೆನ್ಸೀಸ್​)

    ಪ್ಲೇಆಫ್​ಗೇರಲು RCB-CSK ನಡುವೆ ಹೈವೋಲ್ಟೇಜ್​ ಪಂದ್ಯ! ಭಜ್ಜಿ ಪ್ರಕಾರ ಗೆಲ್ಲೋದು ಇವರೇ…

    ಆಕೆಗೆ 54, ಆತನಿಗೆ 52 ವರ್ಷ! 25 ವರ್ಷದ ಪ್ರೀತಿಗೆ ಈಗ ಮದ್ವೆ ಬೆಸುಗೆ, ಇಬ್ಬರ ಲವ್​ಸ್ಟೋರಿ ಕೇಳಿದ್ರೆ ಮನ ಕರಗುತ್ತೆ!

    ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts