ಸಾ೦ಸ್ಕೃತಿಕ ಉತ್ಸವ’ದಿಂದ ಕ್ರಿಯಾಶೀಲತೆ ವೃದ್ಧಿ

1 Min Read
ಸಾ೦ಸ್ಕೃತಿಕ ಉತ್ಸವ'ದಿಂದ ಕ್ರಿಯಾಶೀಲತೆ ವೃದ್ಧಿ

ಧಾರವಾಡ: ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಉತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಬೆಂಗಳೂರಿನ ಖ್ಯಾತ ರೆಡಿಯೋಲಾಜಿಸ್ಟ್ ಡಾ. ರೋಹಿತ್ ಮಧುಕರ ಹೇಳಿದರು. ನಗರದ ಸತ್ತೂರಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಉತ್ಸವ 2024′ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬಾರದು. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುತ್ತಾರೆ ಎಂಬುದನ್ನು ನಂಬಬೇಕು ಎಂದರು.
ಸುಮಾರು 20 ವರ್ಷಗಳ ಹಿಂದಿನ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ತಮ್ಮ ವಿದ್ಯಾರ್ಥಿ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳ ಜೀವನ ರೂಪಿಸಿದ ಅಂದಿನ ಅಧ್ಯಾಪಕರ ಕೊಡುಗೆಯನ್ನು ಶ್ಲಾಘಿಸಿದರು.
ಎಸ್‌ಡಿಎಂ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಚಾರ್ಯ ಡಾ. ದೀಪಕ ಕಣಬೂರ, ಉಪ ವಿದ್ಯಾರ್ಥಿ ಕಲ್ಯಾಣಾಽಕಾರಿ ಆಶಾ ದೇಶಪಾಂಡೆ, ಸಾಯಿ ಽÃರಾ, ಇತರರಿದ್ದರು.

See also  ಅಂಗವಿಕಲರ ಔನ್ನತ್ಯಕ್ಕೆ ಶ್ರಮಿಸಬೇಕು
Share This Article