More

  ಬೇಲದ ಹಣ್ಣಿನಲ್ಲಿದೆಯಾ ಇಷ್ಟೊಂದು ಪ್ರಯೋಜನಗಳು? ಗೊತ್ತಾದ್ರೆ ನೀವೆಂದೂ ಮಿಸ್​ ಮಾಡೋದಿಲ್ಲ

  ಪ್ರಾಚೀನ ಕಾಲದಿಂದಲೂ ಬೇಲದ ಹಣ್ಣನ್ನು ಆಯುರ್ವೇದದಲ್ಲಿ ಬಳಸುತ್ತಾ ಬರುತ್ತಿದ್ದಾರೆ. ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಇದನ್ನು ಬಳಸಲಾಗುತ್ತದೆ. ತನ್ನೊಳಗೆ ನೂರಾರು ಆರೋಗ್ಯಕರ ಲಾಭಗಳನ್ನು ಹೊಂದಿರುವ ಬೇಲದ ಹಣ್ಣನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಬಳಸುತ್ತಾರೆ. ಅನೇಕ ರೋಗಗಳನ್ನು ಗುಣಪಡಿಸುವ ಅಂಶಗಳನ್ನು ಹೊಂದಿರುವ ಬೇಲದ ಹಣ್ಣನ್ನು ಪ್ರತಿಯೊಬ್ಬರೂ ನಿಯಮಿತವಾಗಿ ಸೇವಿಸಬೇಕೆಂದು ತಜ್ಞರು ಹೇಳುತ್ತಾರೆ. ಬೇಲದ ಹಣ್ಣಿನ ಔಷಧೀಯ ಗುಣಗಳು ಮತ್ತು ಅದರ ಸೇವನೆಯ ಪ್ರಯೋಜನಗಳ ಬಗ್ಗೆ ನಾವೀಗ ತಿಳಿಯೋಣ.

  ಬೇಲದ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ, ವಾಂತಿ, ಬೇಧಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನೇರವಾಗಿ ತಿನ್ನಲು ಆಗದವರು ಜ್ಯೂಸ್ ಮಾಡಿಯೂ ಕುಡಿಯಬಹುದು. ಈ ರಸವನ್ನು 50 ಮಿಗ್ರಾಂ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿನ ರಕ್ತ ಶುದ್ಧವಾಗುತ್ತದೆ. ಅಲ್ಲದೆ, ಈ ಜ್ಯೂಸ್ ಕುಡಿಯುವುದರಿಂದ ಬಿಕ್ಕಳಿಕೆ ತಕ್ಷಣ ಕಡಿಮೆಯಾಗುತ್ತದೆ. ಬೇಲದ ಹಣ್ಣಿನ ರಸದೊಂದಿಗೆ ಬೆಲ್ಲವನ್ನು ಬೆರೆಸಿ ಸೇವಿಸುವುದರಿಂದ ದೌರ್ಬಲ್ಯ, ಆಲಸ್ಯ, ಆಯಾಸ ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ.

  ಈ ಹಣ್ಣುಗಳನ್ನು ಹೇಗೆ ತೆಗೆದುಕೊಂಡರೂ ಒಳ್ಳೆಯ ಪ್ರಯೋಜನಗಳಿವೆ. ಈ ಹಣ್ಣನ್ನು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಬೇಲದ ಹಣ್ಣು ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಲ್ಲದೆ ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣನ್ನು ತಿಂದರೆ ನಮಗೆ 21 ಬಗೆಯ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಕೂದಲಿನ ಸಮಸ್ಯೆಯೂ ಕಡಿಮೆಯಾಗುತ್ತದೆ.

  ದೇಹದಲ್ಲಿ ಹಿಮೋಗ್ಲೋಬಿನ್​ ಕೊರತೆ ಇರುವವರಿಗೂ ಬೇಲದ ಜ್ಯೂಸ್​ ಉತ್ತಮ ಪರಿಹಾರವಾಗಿದೆ. ಬೇಲದ ಹಣ್ಣಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದ್ದು, ಇದು ರಕ್ತ ಮತ್ತು ರಕ್ತದ ಶುದ್ಧೀಕರಣವನ್ನು ಮಾಡುತ್ತದೆ. ವಿಟಮಿನ್ ಎ, ಬಿ ಮತ್ತು ಸಿ ಸೇರಿದಂತೆ ದೇಹವನ್ನು ಆರೋಗ್ಯವಾಗಿಡಲು ಕೆಲಸ ಮಾಡುವವಂತ ವಿಟಮಿನ್​ಗಳು ಬೇಲದ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.

  ಅಧಿಕ ಬಿಪಿ ಸಮಸ್ಯೆಯಿಂದ ತೊಂದರೆಗೆ ಒಳಗಾದವರು ಅಂದರೆ, ಅಧಿಕ ರಕ್ತದೊತ್ತಡ ಹೊಂದಿರುವವರು ಪ್ರತಿದಿನ ಬೇಲದ ಜ್ಯೂಸ್​ ಅನ್ನು ಸೇವಿಸಬಹುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ ಮತ್ತು ಇದು ಹೈ ಬಿಪಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ ಇದು ನರಗಳನ್ನು ಶಾಂತಗೊಳಿಸಲು ಕೆಲಸ ಮಾಡುತ್ತದೆ. ಹೊಟ್ಟೆಯ ಸಮಸ್ಯೆ ಇರುವವರಿಗೆ ಬೇಲದ ಹಣ್ಣಿನ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮಲಬದ್ಧತೆಗೆ ರಾಮಬಾಣವಾಗಿದೆ ಮತ್ತು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

  ಬೇಲದ ಹಣ್ಣಿನ ಜ್ಯೂಸ್​ ಮಾಡುವುದು ಹೇಗೆ?
  * ಬೇಲದ ಹಣ್ಣಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಎರಡು ಭಾಗ ಮಾಡಿ, ಒಳಗೆ ಕಂದು ಬಣ್ಣದಲ್ಲಿರುವ ಮೃದುವಾದ ತಿರುಳನ್ನು ತೆಗೆದುಕೊಳ್ಳಿ.
  * ತಿರುಳನ್ನು ತೆಗೆದುಕೊಳ್ಳುವಾಗ ಆದಷ್ಟು ಚಮಚವನ್ನು ಬಳಸಿ. ತಿರುಳನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
  * ಬಳಿಕ 1 ಕಪ್ ನೀರಿನಲ್ಲಿ ತಿರುಳನ್ನು ಮಿಶ್ರಣ ಮಾಡಿ ಮತ್ತು 15-20 ನಿಮಿಷಗಳ ಕಾಲ ನೆನೆಸಲು ಬಿಡಿ.
  * ಸಮಯ ಮುಗಿದ ಬಳಿಕ ತಿರುಳನ್ನು ಹ್ಯಾಂಡಲ್ಡ್​ ಮ್ಯಾಶರ್​ ಮೂಲಕ ಪೇಸ್ಟ್​ನಂತೆ ಮಾಡಿಕೊಳ್ಳಿ.
  * ಪೇಸ್ಟ್​ನಂತೆ ಮಾಡಿದ ಮಿಶ್ರಣವನ್ನು ಜರಡಿ ಬಳಸಿ, ಫಿಲ್ಟರ್ ಮಾಡಿ. ಬಳಿಕ ಸುಮಾರು 1/2 ರಿಂದ 3/4 ಕಪ್ ನೀರನ್ನು ಸೇರಿಸಿ, ಚಮಚದಿಂದ ಮಿಕ್ಸ್​ ಮಾಡಿ ಮತ್ತು ಯಾವುದೇ ಬೀಜಗಳು ಅಥವಾ ಪದಾರ್ಥಗಳು ಇರದಿರುವುದನ್ನು ಖಚಿತಪಡಿಸಿಕೊಳ್ಳಿ.
  * ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಡೇಟ್​ (ಖರ್ಜೂರ) ಸಿರಪ್ ಅನ್ನು ಸೇರಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಡೇಟ್​ ಸಿರಪ್​ ಮತ್ತು ನೀರನ್ನು ಹೊಂದಿಸಿಕೊಳ್ಳಿ. ಇದಾದ ಬಳಿಕ ರುಚಿಗೆ ತಕ್ಕ ಉಪ್ಪು, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
  * ಇಲ್ಲಿಗೆ ಬೇಲದ ಜ್ಯೂಸ್​ ರೆಡಿ. ಬೇಕಾದರೆ ನೀರನ್ನು ನಿಮಗೆ ಬೇಕಾದಷ್ಟು ಸೇರಿಸಿಕೊಂಡು ಬೇಲದ ಜ್ಯೂಸ್​ ಅನ್ನು ಸೇವನೆ ಮಾಡಬಹುದು.

  ಹೈದರಾಬಾದ್​ 3ನೇ ವ್ಯಕ್ತಿ… ನೋಡಬಾರದನ್ನು ನೋಡಿ ಚಂದನ್​ಗೆ ಎಚ್ಚರಿಸಿದ್ದೆ! ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆ

  ದೊಡ್ಮನೆ ಸಂಸಾರದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಮುಂದಾದ ಯುವ ರಾಜ್​ಕುಮಾರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts