More

  ಖಾಸಗಿತನಕ್ಕೆ ವಿದೇಶಿ ಆಪ್ ಆಪತ್ತು!

  3 ವರ್ಷದಲ್ಲಿ 327 ಆಪ್ ಬಳಕೆಗೆ ನಿರ್ಬಂಧ ಹವಾಲ ಹಣ ವರ್ಗಾವಣೆಗೂ ಬಳಕೆ

  | ಕೀರ್ತಿನಾರಾಯಣ ಸಿ. ಬೆಂಗಳೂರು

  ಗೇಮಿಂಗ್ ಆಪ್​ಗಳು, ಲೋನ್ ಆಪ್​ಗಳು, ಮ್ಯೂಸಿಕ್ ಬ್ರೌಸರ್, ಬ್ಯಾಂಕಿಂಗ್ ಆಪ್​ಗಳು ಸೇರಿ ಇನ್ನಿತರ ವಿದೇಶಿ ಮೊಬೈಲ್ ಅಪ್ಲಿಕೇಷನ್​ಗಳನ್ನು ಇನ್​ಸ್ಟಾಲ್ ಮಾಡಿಕೊಂಡರೆ ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯಾಗುವ ಅಪಾಯ ದಿನೇದಿನೇ ಹೆಚ್ಚಾಗುತ್ತಿದೆ. ಡೇಟಾ ಹಾಗೂ ರಿಯಲ್ ಟೈಮ್ ಆಕ್ಟಿವಿಟಿಯನ್ನು ಕಳವು ಮಾಡಿ ಭಾರತದ ಹೊರಗಿನ ಸರ್ವರ್​ಗಳಿಗೆ ರವಾನಿಸುವ ಜತೆಗೆ ಕಾನೂನು ಬಾಹಿರ ಆರ್ಥಿಕ ಚಟುವಟಿಕೆ ಹಾಗೂ ಹವಾಲಾ ಹಣ ರವಾನೆಗೂ ಈ ಆಪನ್ನು ಬಳಸುತ್ತಿರುವ ಬಗ್ಗೆ ಸೈಬರ್ ಕ್ರೖೆಂ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

  ಭಾರತದ ಭದ್ರತೆ ಹಾಗೂ ನಾಗರಿಕರ ಖಾಸಗಿತನಕ್ಕೆ ಅಪಾಯ ತರುವಂತಹ 327 ವಿದೇಶಿ ಅನಧಿಕೃತ ಮೊಬೈಲ್ ಅಪ್ಲಿಕೇಷನ್​ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಬಂಧಿಸಿದೆ. 2021ರಲ್ಲಿ 27, 2022ರಲ್ಲಿ 67 ಹಾಗೂ 2023ರಲ್ಲಿ 233 ಆಪ್​ಗಳನ್ನು ಶಾಶ್ವತವಾಗಿ ಬ್ಲಾ್ಯಕ್ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರ ಮಾಹಿತಿ ಸಂಗ್ರಹ ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಗಳು-2009ರ ಅನ್ವಯ ಅಪಾಯಕಾರಿ ಅಪ್ಲಿಕೇಷನ್​ಗಳನ್ನು ಗುರುತಿಸಲಾಗಿದೆ.

  ಯಾವೆಲ್ಲ ಆಪ್ ಅಪಾಯ?

  ಬ್ಯಾಂಕಿಂಗ್, ಗೇಮಿಂಗ್, ಲೋನ್, ಫೋಟೋ ಎಡಿಟರ್, ಲೈವ್ ವಾಲ್​ಪೇಪರ್, ಬಿಸಿನೆಸ್, ಸ್ಮಾರ್ಟ್ ಲಾಕ್, ಮ್ಯೂಸಿಕ್ ಪ್ಲೇಯರ್, ವೆಬ್​ಬ್ರೌಸರ್, ಬ್ಯೂಟಿ ಸೇರಿ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನಧಿಕೃತ ಆಪ್​ಗಳನ್ನು ಅಭಿವೃದ್ಧಿಪಡಿಸಿ ವಂಚನೆ ಮಾಡಲಾಗುತ್ತಿದೆ.

  ಪೊಲೀಸರು ಹೇಳುವುದೇನು?

  • ಬಳಕೆದಾರರ ಡೇಟಾ ಕಳವು ಮಾಡುವ ರೀತಿಯಲ್ಲೇ ಆಪ್​ಗಳ ವಿನ್ಯಾಸ ?ಎಪಿಕೆ ಲಿಂಕ್​ಗಳಿಂದ ಆಪ್ ಡೌನ್​ಲೋಡ್ ಬೇಡ ?ಐಪಿ ವಿಳಾಸ ಪರಿಶೀಲಿಸಿದರೆ ದುಬೈ, ಕುವೈತ್ ಸೇರಿ ಅರಬ್ ದೇಶಗಳ ಮಾಹಿತಿ ?ಲೈಸೆನ್ಸ್ ಪಡೆದ ಹಿನ್ನೆಲೆಯಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದಷ್ಟೇ ಆಪ್
  • ಇನ್​ಸ್ಟಾಲ್ ಮಾಡಿ
  See also  ಗೃಹಲಕ್ಷ್ಮಿ ಅನುಷ್ಠಾನದಲ್ಲಿ ಚಾ. ನಗರ ರಾಜ್ಯಕ್ಕೆ ಪ್ರಥಮ

  ಅಪಾಯ ಹೇಗೆ?

  • ಎಪಿಕೆ ಲಿಂಕ್ ಕಳುಹಿಸಿ ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಿಸುವ ಸೈಬರ್ ಕಳ್ಳರು
  • ಥರ್ಡ್ ಪಾರ್ಟಿ ಅಪ್ಲಿಕೇಷನ್​ಗಳಿಂದ ಮೊಬೈಲ್​ನ ನಿರ್ವಹಣೆಯ ಮೇಲೆ ಹಿಡಿತ
  • ವೈಯಕ್ತಿಕ ವಿವರಗಳನ್ನು ಕಳವು ಮಾಡಿ, ಬ್ಯಾಂಕ್​ಗಳಿಗೆ ಕನ್ನ ಹಾಕುವ ಸಾಧ್ಯತೆ
  • ಸಾಲ ಕೊಟ್ಟು ಕಿರುಕುಳ ಸೇರಿ ಕಾನೂನು ಬಾಹಿರವಾದ ಆರ್ಥಿಕ ಚಟುವಟಿಕೆ
  • ಹವಾಲಾ ಮೂಲಕ ಹೊರಗಿನ ದೇಶಗಳಿಗೆ ಹಣ ಕಳುಹಿಸಲು ಆಪ್​ಗಳ ಬಳಕೆ
  • ಬಳಕೆದಾರರ ಡೇಟಾ ಹಾಗೂ ನೈಜಸಮಯದ ಚಟುವಟಿಕೆ ಕದ್ದು ಕಳುಹಿಸುವುದು

  ಲೋನ್ ಆಪ್​ಗಳು ಸೇರಿ ಸಾರ್ವಜನಿಕರ ಮಾಹಿತಿ ಕದಿಯುವ ಆಪ್​ಗಳನ್ನು ಗುರುತಿಸಿ ಗೂಗಲ್ ಪ್ಲೇಸ್ಟೋರ್​ನಿಂದಲೇ ತೆಗೆದು ಹಾಕಲಾಗಿದೆ. ಆದರೆ, ಇದೇ ಆಪ್​ಗಳು ಪುನಃ ಇನ್​ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್​ಬುಕ್ ಹಾಗೂ ವಾಟ್ಸ್​ಆಪ್​ಗಳ ಮೂಲಕ ವಂಚನೆಯಲ್ಲಿ ನಿರತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಪ್ರಸಕ್ತ ಭಾರತದಲ್ಲಿ 4000ಕ್ಕೂ ಹೆಚ್ಚು ಅನಧಿಕೃತ ಲೋನ್ ಆಪ್​ಗಳೇ ಸಕ್ರಿಯವಾಗಿವೆ. ಸದ್ಯ ದೇಶದಲ್ಲಿ 85 ಕೋಟಿ ಜನರು ಇಂಟರ್​ನೆಟ್ ಬಳಸುತ್ತಿದ್ದಾರೆ. 2026ರ ವೇಳೆಗೆ ಇಂಟರ್​ನೆಟ್ ಬಳಸುವವರ ಸಂಖ್ಯೆ 120 ಕೋಟಿಗೆ ತಲುಪಲಿದೆ ಎಂದು ಸರ್ಕಾರ ಅಂದಾಜು ಮಾಡಿದೆ. ಡೀಪ್​ಫೇಕ್, ಸುಳ್ಳು ಮಾಹಿತಿ ರವಾನೆ, ಆಪ್​ಗಳ ವಂಚನೆ ಸೇರಿ ಇನ್ನಿತರ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಳವಾಗುವ ಬಗ್ಗೆಯೂ ಸೈಬರ್ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

  ಹಣ ವಾಪಸ್ ಪಡೆಯುವುದು ಅಸಾಧ್ಯ: ಈವರೆಗೆ ಸೈಬರ್ ಖದೀಮರು, ಬ್ಯಾಂಕ್ ಖಾತೆಯಿಂದ ಹಣ ಕದ್ದರೆ ವರ್ಗಾವಣೆಯಾದ ಬ್ಯಾಂಕ್ ಖಾತೆ ಪತ್ತೆಹಚ್ಚಿ ಜಪ್ತಿ ಮಾಡಿ ವಾಪಸ್ ಕೊಡಿಸಬಹುದಿತ್ತು. ಆದರೀಗ ಎಗರಿಸಿದ ಹಣವನ್ನು ಕ್ರಿಪ್ಟೋ ಕರೆನ್ಸಿಗೆ ಮಾರ್ಪಾಡು ಮಾಡುತ್ತಿರುವುದರಿಂದ ಹಣ ಪತ್ತೆಹಚ್ಚಿ ವಾಪಸ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಒಮ್ಮೆ ಹಣ ಹೋದರೆ ವಾಪಸ್ ಬರದ ಡೆಡ್​ಎಂಡ್ ರೀತಿ ಆಗಿದೆ ಎಂದು ಸೈಬರ್ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

  ನಾಚಿಕೆಯಾಗಬೇಕು ನಿಮಗೆ… ಶಾಹೀನ್ ಅಫ್ರಿದಿ ವರ್ತನೆಗೆ ಛೀಮಾರಿ ಹಾಕಿದ ಕ್ರಿಕೆಟ್ ಅಭಿಮಾನಿಗಳು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts