More

  ಗೀತಾ ಗೆಲ್ಲುವುದಾಗಿ ಟ್ರಾಕ್ಟರ್ ಪಣಕ್ಕಿಟ್ಟ ರೈತ !

  ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಚುನಾವಣೆ ಮುಗಿದಿದ್ದು ಜೂನ್ 4 ಫಲಿತಾಂಶಕ್ಕಾಗಿ ಕ್ಷೇತ್ರದ ಜನರು ಎದುರು ನೋಡುತ್ತಿದ್ದಾರೆ. ಈ ನಡುವೆ ಗೆಲ್ಲುವ ಅಭ್ಯರ್ಥಿ ಯಾರಾಗಾಲಿದ್ದಾರೆಂಬ ಬಗ್ಗೆ ಬೆಟ್ಟಿಂಗ್ ಜೋರಾಗಿದೆ. ಅದಕ್ಕೆ ಪೂರಕವಾಗಿ ಶಿಕಾರಿಪುರದ ರೈತನೊಬ್ಬ ಮುಂದಿನ ಸಂಸದರು ಯಾರಾಗಲಿದ್ದಾರೆ ಎಂಬುದಕ್ಕೆ ಓಪನ್ ಚಾಲೆಂಜ್ ಹಾಕಿದ್ದಾನೆ.

  ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ರೈತ ರವೀಂದ್ರ ಎಂಬುವರು ಈ ಬಾರಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರೇ ಗೆಲ್ಲುವುದು ನಿಶ್ಚಿತ. ಗೀತಕ್ಕ ಗೆಲ್ಲುವುದಿಲ್ಲ ಎಂಬುವರು ನನ್ನ ಸವಾಲು ಸ್ವೀಕರಿಸಿ ಎಂದಿದ್ದಾರೆ. ಅದಕ್ಕಾಗಿ ಬದುಕಿಗೆ ಆಧಾರವಾಗಿರುವ ಟ್ರಾಕ್ಟರ್ ಅನ್ನೇ ಪಣಕ್ಕಿಟ್ಟಿದ್ದು ರೈತ ಚಾಲೆಂಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
  ಬಿಜೆಪಿ ಕಾರ್ಯಕರ್ತರು ಬಿ.ವೈ.ರಾಘವೇಂದ್ರ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಹಾಗಾಗಿ ಗೆಲುವಿನ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾನೆ. ಗೀತಾ ಶಿವರಾಜ್ ಕುಮಾರ್ ಗೆಲ್ಲಲಿದ್ದಾರೆ. ಇದರ ವಿರುದ್ಧ ಯಾರಾದರೂ ಚಾಲೆಂಜ್ ಮಾಡುವುದಿದ್ದರೆ ಬನ್ನಿ. ತಾನು ತನ್ನ ಟ್ರಾಕ್ಟರ್ ಪಣಕ್ಕಿಟಿದ್ದೇನೆ ಎಂದಿದ್ದಾನೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts