More

  ವೋಟ್​ ಮಾಡಿ ವಜ್ರದ ಉಂಗುರಗಳನ್ನು ಗೆದ್ದ ನಾಲ್ವರಿಗೆ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್​!

  ಭೋಪಾಲ್​: ದೇಶದೆಲ್ಲೆಡೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮೂರು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ನಾಲ್ಕನೇ ಹಂತದ ಮತದಾನ ಮೇ 13ರಂದು ನಡೆಯಲಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಪಣತೊಟ್ಟಿರುವ ಅಧಿಕಾರಿಗಳು, ಮತದಾರರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕೆ ಸಾಥ್​ ನೀಡಿದ ಸ್ವಯಂಸೇವಾ ಸಂಸ್ಥೆಗಳು ಲಕ್ಕಿ ಡ್ರಾಗಳನ್ನು ಸಹ ನಡೆಸಿದ್ದವು. ಮತದಾರರಿಗೆ ಆಕರ್ಷಕ ಉಡುಗೊರೆಗಳೊಂದಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿದ ಮತದಾರರಿಗೆ ಅದೃಷ್ಟ ಒಲಿದು ಬಂದಿದೆ. ನಾಲ್ವರು ಮತದಾರರು ಜಂಟಿಯಾಗಿ ವಜ್ರದ ಉಂಗುರಗಳನ್ನು ಗೆದ್ದಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಘಟನೆ ನಡೆದಿದೆ.

  ಮೇ 7ರಂದು ಮಧ್ಯಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆದಿದ್ದು ಗೊತ್ತೇ ಇದೆ. ಭೋಪಾಲ್‌ನಲ್ಲಿ ಶೇಕಡಾವಾರು ಮತದಾನವನ್ನು ಹೆಚ್ಚಿಸಲು ವಿನೂತನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಮತದಾರರಿಗೆ ಬಂಪರ್ ಆಫರ್​ಗಳನ್ನು ಘೋಷಿಸಲಾಗಿತ್ತು. ಅದರಂತೆ ಲಕ್ಕಿ ಡ್ರಾ ಮೂಲಕ ಮತದಾರರಿಗೆ ದುಬಾರಿ ಉಡುಗೊರೆಗಳನ್ನು ನೀಡಲಾಯಿತು. ಈ ಲಕ್ಕಿ ಡ್ರಾದ ಭಾಗವಾಗಿ ನಾಲ್ವರು ಮತದಾರರು ವಜ್ರದ ಉಂಗುರಗಳನ್ನು ಗೆದ್ದಿದ್ದಾರೆ. ವೋಟಿನ ಭಾಗ್ಯದಿಂದ ವಜ್ರದ ಉಂಗುರಗಳನ್ನು ಗೆದ್ದುಕೊಂಡವರು ಇದೀಗ ಸಂತಸಗೊಂಡಿದ್ದಾರೆ. ಅನೇಕ ಕಂಪನಿಗಳು ಅನೇಕ ರಾಜ್ಯಗಳಲ್ಲಿ ಇದೇ ರೀತಿಯ ಕೊಡುಗೆಗಳನ್ನು ಘೋಷಿಸಿವೆ.

  ಭೋಪಾಲ್​ನಲ್ಲಿ ಕೆಲವು ಮತದಾರರು ಕ್ಯಾಪ್, ಟಿ-ಶರ್ಟ್‌ಗಳನ್ನು ಗೆದ್ದರು. ಆದರೆ ಇತರರು ತುಂಬಾ ಅದೃಷ್ಟಶಾಲಿಗಳು ಎನಿಸಿಕೊಂಡರು. ಉದಾಹರಣೆಗೆ, ಭೋಪಾಲ್‌ನ ಯಗ್ಗೋಜ್ ಸಾಹು ವಜ್ರದ ಉಂಗುರವನ್ನು ಗೆದ್ದರು. ನಾನು ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಬಯಸಲಿಲ್ಲ, ಆದರೆ ನಮ್ಮ ಮತದಾನದ ಸ್ಲಿಪ್‌ಗಳನ್ನು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಬೇಕೆಂದು ನನ್ನ ಹೆಂಡತಿ ಒತ್ತಾಯಿಸಿದಳು. ಇದೀಗ ಡೈಮಂಡ್​ ರಿಂಗ್​ ಒಲಿದುಬಂದಿದೆ ಎಂದು ಸಾಹು ಸಂತಸ ವ್ಯಕ್ತಪಡಿಸಿದ್ದಾರೆ.

  ವಿವಾದ ಸೃಷ್ಟಿಸಿದ ಡೈಮಂಡ್​ ರಿಂಗ್
  ಹೊಳೆಯುವುದೆಲ್ಲವೂ ವಜ್ರವಲ್ಲ ಎನ್ನುವಂತೆ ಮಂಗಳವಾರ ಭೋಪಾಲ್‌ನಲ್ಲಿ ನಾಲ್ವರು ಮತದಾರರಿಗೆ ಲಾಟರಿ ಬಹುಮಾನವಾಗಿ ನೀಡಲಾದ ‘ಡೈಮಂಡ್’ ಉಂಗುರಗಳು ‘ಅಮೆರಿಕನ್ ವಜ್ರಗಳು ಎಂದು ತಿಳಿದುಬಂದಿದೆ. ಇದು ನಿಜವಾದ ವಜ್ರಗಳಲ್ಲ ಎಂದು ಕೆಲವು ವಿಜೇತರು ಬುಧವಾರ ಅನುಮಾನಿಸಿದಾಗ ಈ ವಿವಾದ ಭುಗಿಲೆದ್ದಿತು. ಲಕ್ಕಿ ಜ್ಯುವೆಲರ್ಸ್ ಬೈರಾಗರ್ ಎಂಬ ಹೆಸರಿನ ಸಣ್ಣ ಪೆಟ್ಟಿಗೆಗಳಲ್ಲಿ ಉಂಗುರಗಳು ಬಂದಿದ್ದವು. ಶೀಘ್ರದಲ್ಲೇ, ಅದರ ಮಾಲೀಕ ಮಹೇಶ್ ದದ್ಲಾನಿಗೆ ಕರೆಗಳು ಬರಲಾರಂಭಿಸಿದವು. ಆದರೆ, ಉಂಗುರಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ದದ್ಲಾನಿ ಹೇಳಿದ್ದಾರೆ. ಈ ಪೆಟ್ಟಿಗೆಯನ್ನು ಕಪ್ಡ ವ್ಯಾಪಾರಿ ಸಂಘದ ಅಧ್ಯಕ್ಷ ವಾಸುದೇವ್ ವಾಧ್ವಾನಿ ಅವರು ಜಿಲ್ಲಾಡಳಿತಕ್ಕೆ ಒದಗಿಸಿದ್ದಾರೆ ಎಂದು ಹೇಳಿದರು.

  ಇದಾದ ಬಳಿಕ ವಾಧ್ವಾನಿ ಅವರನ್ನು ಸಂಪರ್ಕಿಸಿದಾಗ, ಇದು ಅಮೇರಿಕನ್ ವಜ್ರ. ಜಿಲ್ಲಾಧಿಕಾರಿಗಳು ಭೋಪಾಲ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್‌ನ ಸಭೆಯನ್ನು ಕರೆದಿದ್ದರು ಮತ್ತು ನಮಗೆ ಉಡುಗೊರೆ ವಸ್ತುಗಳನ್ನು ನೀಡುವಂತೆ ಕೇಳಿದ್ದರು. ನಾವು ನೀಡಿದ್ದು ಎಂದಿಗೂ ವಜ್ರದ ಉಂಗುರವಾಗಿರಲಿಲ್ಲ ಎಂದಿದ್ದಾರೆ.

  ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಮಾತನಾಡಿ, ಜನರು ಹೊರಗೆ ಬಂದು ಮತದಾನ ಮಾಡಲು ಉತ್ತೇಜನ ನೀಡುವ ಸಲುವಾಗಿ ಈ ಉಂಗುರ ಉಡುಗೊರೆಯಾಗಿ ನೀಡಲಾಗಿದೆ. ಈ ಉಂಗುರದಲ್ಲಿರುವ ವಜ್ರವು ನೈಸರ್ಗಿಕವೋ ಅಥವಾ ಲ್ಯಾಬ್ ನಿರ್ಮಿತವೋ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಅದರಲ್ಲಿ ಚಿನ್ನವಿದೆ ಎಂದು ಸ್ಪಷ್ಟನೆ ನೀಡಿದರು.

  ಆದಾಗ್ಯೂ, ಲಕ್ಕಿ ಡ್ರಾ ವಿಜೇತರು ಯಾವುದೇ ದೂರು ನೀಡಿಲ್ಲ. ಇದು ಉಡುಗೊರೆಯಾಗಿದೆ. ನಾನಿದ್ದನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ವಿಜೇತರಲ್ಲಿ ಒಬ್ಬರಾದ ಗಯ್ಯೋಜ್ ಸಾಹು ಹೇಳಿದ್ದಾರೆ. ನನಗೆ ಉಂಗುರದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮತ್ತೊಬ್ಬ ವಿಜೇತ ಅಯಾನ್ ಖಾನ್ ಹೇಳಿದರು. ಅಲ್ಲಿದೆ ಈ ವಿವಾದ ತಣ್ಣಗಾಗಿದೆ.

  ಅಂದಹಾಗೆ ಮೇ 7ರಂದು ನಡೆದ ಮತದಾನದಲ್ಲಿ ಮಧ್ಯಪ್ರದೇಶದಲ್ಲಿ ಸಂಜೆ 6 ಗಂಟೆಯವರೆಗೆ ಒಟ್ಟು ಶೇ.66.12 ರಷ್ಟು ಮತದಾನವಾಯಿತು. ಮೇ 13 ರಂದು ರಾಜ್ಯದ ಅಂತಿಮ ಹಂತದ ಮತದಾನ ನಡೆಯಲಿದ್ದು, ಭಾರತವು ತನ್ನ ನಾಲ್ಕನೇ ಹಂತದ ಚುನಾವಣೆಯನ್ನು ಎದುರಿಸಲಾಗಿದೆ. (ಏಜೆನ್ಸೀಸ್​)

  ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್! ಕಿರುತೆರೆ ನಟಿ ಕೊಟ್ಟ ಸ್ಪಷ್ಟನೆ ಹೀಗಿದೆ…​

  ನಟಿ ಸಮಂತಾ ಬೆತ್ತಲೆ ಫೋಟೋ ವೈರಲ್​! ಅಪ್ಪಟ್ಟ ಅಭಿಮಾನಿ ತೆರೆದಿಟ್ಟ ಅಸಲಿ ಸತ್ಯ ಇದು

  ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts