More

    ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

    ತಿರುವನಂತಪುರಂ: ಮಲಯಾಳಂ ಸಿನಿ ಇಂಡಸ್ಟ್ರಿ ತುಂಬಾ ಚಿಕ್ಕದಾದರೂ ತಮ್ಮ ಒಳ್ಳೆಯ ಕತೆಗಳಿಂದಲೇ ಜನರ ಮನಸ್ಸನ್ನು ಗೆಲ್ಲುತ್ತಿದೆ. ಸಣ್ಣ ಬಜೆಟ್​ ಸಿನಿಮಾಗಳಾದರೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿವೆ. ಇತ್ತೀಚೆಗೆ ಸ್ಟಾರ್​ ನಟರು ನಟಿಸಿದ ಬ್ರಹ್ಮಯುಗಂ ಹಾಗೂ ಆಡು ಜೀವಿತಂ ಚಿತ್ರಗಳಲ್ಲದೆ, ಮಂಜುಮ್ಮೇಲ್​ ಬಾಯ್ಸ್ ಅಂತಹ ಸಣ್ಣ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಯಿತು. ಈ ಸಿನಿಮಾ ಮಾಲಿವುಡ್ ಸಿನಿಪ್ರಿಯರನ್ನಷ್ಟೇ ಅಲ್ಲ ಕಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್ ಇಂಡಸ್ಟ್ರಿಯನ್ನೂ ತನ್ನತ್ತ ಸೆಳೆಯಿತು. ನಾಯಕಿ, ಹಾಡುಗಳಿಲ್ಲದಿದ್ದರೂ ಸಿನಿಮಾ ಹಿಟ್ ಆಗಬಹುದು ಎಂಬುದನ್ನು ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಸಾಬೀತು ಮಾಡಿದೆ. ಕೇವಲ 20 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಮಂಜುಮ್ಮೇಲ್ ಬಾಯ್ಸ್​ ಸಿನಿಮಾ ಮೇ5 ರಿಂದ OTTನಲ್ಲೂ ಭಾರಿ ಸದ್ದು ಮಾಡುತ್ತಿದೆ. ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಕೊಡೈಕೆನಾಲ್‌ಗೆ ಹೋಗುತ್ತಾರೆ. ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ತೆರಳುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಆದರೆ, ಸ್ನೇಹಿತನೊಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಸಿನಿಮಾದ ಕತೆ. 2006ರಲ್ಲಿ ನಡೆದ ಈ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಸೌಬಿನ್ ಶಾಹೀರ್, ಶ್ರೀನಾಥ್ ಬಸಿ, ಬಾಲು ವರ್ಗೀಸ್, ಗಣಪತಿ ಎಸ್, ಪೊದುವಲ್ ಲಾಲ್, ದೀಪಕ್ ಪರಂಬೋಲ್ ಮತ್ತು ಇತರರು ಇದರಲ್ಲಿ ನಟಿಸಿದ್ದಾರೆ. ಪರವ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಾಯಕ ಸೌಬಿನ್ ಶಾಹೀರ್, ಬಾಬು ಶಾಹೀರೋ ಮತ್ತು ಶಾನ್ ಆಂಟೋನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಇದರಲ್ಲಿ ಆಳವಾದ ಕಣಿವೆಯಲ್ಲಿ ಬಿದ್ದ ಸುಭಾಷ್ ಪಾತ್ರವನ್ನು ಶ್ರೀನಾಥ್​ ಬಾಸಿಲ್​ ಮಾಡಿದ್ದಾರೆ. ಆತನನ್ನು ಹೊರಗೆ ಕರೆತರುವ ನಾಯಕ ಕುಟ್ಟನ್ ಪಾತ್ರವನ್ನು ಸೌಬಿನ್ ಶಾಹೀರ್​ ಮಾಡಿದ್ದಾರೆ. ಇತರೆ ಸ್ನೇಹಿತರು ಅವನಿಗೆ ಸಹಾಯ ಮಾಡುತ್ತಾರೆ.

    ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಅನೇಕ ನೆಟ್ಟಿಗರು ನಿಜವಾದ ಸುಭಾಷ್ ಯಾರು ಮತ್ತು ಮಂಜುಮ್ಮೇಲ್ ಬಾಯ್ಸ್​ ಯಾರು ಎಂದು ಹುಡುಕುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕಣಿವೆಯಲ್ಲಿ ಬಿದ್ದು ಬದುಕುಳಿದ ಏಕೈಕ ವ್ಯಕ್ತಿ ಸುಭಾಷ್. ಇಡೀ ಸಿನಿಮಾ ಅವನ ಸುತ್ತ ಸುತ್ತುತ್ತದೆ. ಸುಭಾಷ್ ಪಾತ್ರದಲ್ಲಿ ಶ್ರೀನಾಥ್ ಬಸಿ ನಟಿಸಿದ್ದಾರೆ. ಸದ್ಯ ನಿಜವಾದ ಸುಭಾಷ್ ಮತ್ತು ಆತನ ಗೆಳೆಯರು ಈಗ ಹೇಗಿದ್ದಾರೆ ಗೊತ್ತಾ? ಈ ವಿಡಿಯೋವನ್ನು ನೋಡಿ.

    ತಮ್ಮ ಕತೆಯನ್ನಾಧರಿಸಿ ಸಿನಿಮಾ ಮಾಡಿದ ನಂತರ ಸುಭಾಷ್​ ಮತ್ತು ಸ್ನೇಹಿತರಿಗೆ ಮನ್ನಣೆ ಸಿಕ್ಕಿತು. ಇದರೊಂದಿಗೆ ರಿಯಲ್ ಮಂಜುಮ್ಮೇಲ್​ ಬಾಯ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸತತ ಸಂದರ್ಶನಗಳಿಂದ ತುಂಬಾ ಖ್ಯಾತಿ ಗಳಿಸಿದ್ದಾರೆ.

    ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

    ನೀವು ಮೇಲಿನ ಫೋಟೋದಲ್ಲಿರುವ ನೋಡುತ್ತಿರುವ ವ್ಯಕ್ತಿಯೇ ನಿಜವಾದ ಸುಭಾಷ್. ಸುಭಾಷ್ ಪೂರ್ಣ ಹೆಸರು ಸುಭಾಷ್ ಚಂದ್ರನ್. ಈಗ ಸ್ನೇಹಿತರೆಲ್ಲ ವಿವಿಧೆಡೆ ನೆಲೆಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ಮೇಲೆ ಮತ್ತೊಮ್ಮೆ ಗೆಳೆಯರೆಲ್ಲ ಸೇರಿ, ಕೊಡೈಕೆನಾಲ್​ನ ಗುನಾ ಗುಹೆಗಳಿಗೆ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದಾರೆ. ಈಗ ಆ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. (ಏಜೆನ್ಸೀಸ್​)

    ತಮಿಳುನಾಡಿನಲ್ಲಿದೆ ಡೆವಿಲ್ಸ್​​ ಕಿಚನ್​; ಒಳಗೆ ಹೋದವರು ಮತ್ತೆ ಬರೋದೆ ಇಲ್ಲ…ಶವಸಂಸ್ಕಾರಕ್ಕೆ ಮೂಳೆಯೂ ಸಿಗಲ್ಲ!

    ಗಂಡನನ್ನು ಮಂಚಕ್ಕೆ ಕಟ್ಟಿ, ಬೆತ್ತಲೆಗೊಳಿಸಿ ಪತ್ನಿಯಿಂದ ವಿಕೃತಿ! ಭಯಾನಕ ವಿಡಿಯೋ ಬಹಿರಂಗ

    ಸ್ನಾನ ಮಾಡುವಾಗ ಈ ಒಂದು ಸಿಂಪಲ್​ ಟ್ರಿಕ್​ ಪಾಲಿಸಿದರೆ ಸಾಕು ಕೂದಲು ಉದುರುವುದೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts