More

    ಸ್ನಾನ ಮಾಡುವಾಗ ಈ ಒಂದು ಸಿಂಪಲ್​ ಟ್ರಿಕ್​ ಪಾಲಿಸಿದರೆ ಸಾಕು ಕೂದಲು ಉದುರುವುದೇ ಇಲ್ಲ!

    ಕೂದಲು ಉದುರುವಿಕೆಯು ಇಂದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಬಹುತೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒತ್ತಡ, ಬಿಡುವಿಲ್ಲದ ಜೀವನಶೈಲಿ, ಧೂಮಪಾನ, ಪೋಷಕಾಂಶಗಳ ಕೊರತೆ ಹಾಗೂ ನಿದ್ರೆಯ ಕೊರತೆ ಇದಕ್ಕೆ ಬಹುಮುಖ್ಯ ಕಾರಣಗಳಾಗಿವೆ.

    ಕೂದಲು ಉದುರುವಿಕೆ ಕೆಲವು ಪುರುಷರಲ್ಲಿ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಿರಂತರ ಕೂದಲು ಉದುರುವಿಕೆಯಿಂದ ಕೂದಲು ತೆಳ್ಳಗಾಗುತ್ತಿರುವುದರಿಂದ ಏನು ಮಾಡಬೇಕೆಂದು ತಿಳಿಯದೆ ಕೆಲವರು ಬಹಳ ಚಿಂತಿತರಾಗುತ್ತಾರೆ. ಆದರೆ, ಪುರುಷರು ತಲೆ ಸ್ನಾನ ಮಾಡುವಾಗ ಈ ಟ್ರಿಕ್ ಒಂದನ್ನು​​ ಅನುಸರಿಸಿದರೆ ಸಾಕು ಕೂದಲು ಉದುರುವುದಿಲ್ಲ.

    Hair Fall 1

    ಏನು ಮಾಡಬೇಕೆಂದರೆ, ಮೊದಲು ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಿಂದ ಚೆನ್ನಾಗಿ ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಅಲೋವೆರಾ ತುಂಡುಗಳು ಮತ್ತು ನಾಲ್ಕು ಕರಿಬೇವಿನ ಎಲೆಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ ಮತ್ತು ರಸವನ್ನು ಪ್ರತ್ಯೇಕಿಸಿ. ಈಗ ಈ ರಸಕ್ಕೆ ಒಂದು ಲೋಟ ನೀರು ಮತ್ತು ಎರಡರಿಂದ ಮೂರು ಚಮಚ ಸಾಮಾನ್ಯ ಶಾಂಪೂವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    Curry Leaves

    ಈಗ ಈ ಮಿಶ್ರಣದಿಂದ ನಿಮ್ಮ ಕೂದಲನ್ನು ತೊಳೆಯಿರಿ. ಈ ರೀತಿ ಪದೇಪದೆ ಮಾಡುವುದರಿಂದ ಕೂದಲು ಉದುರುವುದು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ. ಅಲೋವೆರಾ ಮತ್ತು ಕರಿಬೇವಿನ ಎಲೆಗಳು ಕೂದಲು ಉದುರುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಒಣ ಕೂದಲುಗಳು ಮತ್ತೆ ಬೆಳೆಯುವಂತೆ ಮಾಡುತ್ತದೆ.

    ಅತಿಯಾದ ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಪುರುಷರು ಖಂಡಿತವಾಗಿಯೂ ಈ ಶಾಂಪೂ ಹ್ಯಾಕ್ ಅನ್ನು ಒಮ್ಮೆ ಪ್ರಯತ್ನಿಸಿ ನೋಡಿ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಗಂಡನಿಂದ ಡಿವೋರ್ಸ್ ಪಡೆಯಲು​ ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್​!

    ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್​ ಖಚಿತಪಡಿಸಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts