ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೆಲಾ ಹೆಸರಿನ ಮಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಿನಿಮಾ ಕುಟುಂಬದ ನಂಟಿದ್ದರೂ ಶ್ರೀಜಾ ಮಾತ್ರ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀಜಾ ಅವರು ತಮ್ಮದೇಯಾದ ಉದ್ಯಮವನ್ನು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುದ್ದಿಯಾದರು. ಇದಿಷ್ಟೇ ಅಲ್ಲದೆ, ಶ್ರೀಜಾ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ಕೇಳಿದ ಪ್ರಶ್ನೆಗೆ ಶ್ರೀಜಾ ಅವರು ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಶ್ರೀಜಾಗೂ ಮದುವೆಯಾಗಿ ಡಿವೋರ್ಸ್ ಆಗಿದೆ. ಕಲ್ಯಾಣ್ ದೇವ್ ಎಂಬುವರನ್ನು 2016, ಮಾರ್ಚ್ 28ರಂದು ಶ್ರೀಜಾ ವರಿಸಿದರು. ದಂಪತಿಗೆ 2018ರಲ್ಲಿ ನವಿಶ್ಕಾ ಹೆಸರಿನ ಹೆಣ್ಣು ಮಗು ಜನಿಸಿತು. ಇದಕ್ಕೂ ಮೊದಲು ಶ್ರೀಜಾ, 2007ರಲ್ಲಿ ಶಿರೀಶ್ ಭಾರಧ್ವಜ್ ಎಂಬುವರನ್ನು ವರಿಸಿದ್ದರು. ದಂಪತಿಗೆ ನಿವೃತ್ತಿ ಹೆಸರಿನ ಮಗಳಿದ್ದಾಳೆ. ಈ ಸಂಬಂಧ 2011ರಲ್ಲಿ ಕೊನೆಗೊಂಡಿತು. ಎರಡು ಮದುವೆಗಳು ಡಿವೋರ್ಸ್ನಲ್ಲಿ ಅಂತ್ಯಗೊಂಡಿದ್ದು, ಇದೀಗ 3ನೇ ಮದುವೆ ಕುರಿತಾದ ಸುದ್ದಿಯೂ ಹರಿದಾಡುತ್ತಿದೆ.
ಇದೀಗ Ask me Question (ಪ್ರಶ್ನೆ ಕೇಳಿ) ಸೆಷೆನ್ಸ್ ವೇಳೆ ಡಿವೋರ್ಸ್ ಬಗ್ಗೆ ಯುವತಿ ಕೇಳಿದ ಪ್ರಶ್ನೆಗೆ ಶ್ರೀಜಾ ಕೊಟ್ಟಿರುವ ಉತ್ತರ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯುವತಿ ಕೇಳಿದ್ದೇನು ಎಂದು ನೋಡುವುದಾದರೆ, ನಾನು ವಿಚ್ಛೇದನ ಪಡೆಯಲು ಬಯಸುತ್ತಿದ್ದೇನೆ. ಆದರೆ ನನ್ನ ಪತಿ ನನ್ನನ್ನು ತಡೆಯುತ್ತಿದ್ದಾರೆ. ನಾನು ಅವನನ್ನು ಪ್ರೀತಿಸಿದರೆ ಅಥವಾ ಕಾಳಜಿ ವಹಿಸಿದರೆ ಮುಂದುವರಿಯಲು ಪ್ರಯತ್ನಿಸುತ್ತೇನೆ. ಈ ವಿಚಾರದಲ್ಲಿ ನಿಮ್ಮ ಸಲಹೆ ಏನು ಎಂದು ಪ್ರಶ್ನೆ ಮಾಡಿದ್ದಳು.
ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಜಾ, ನಿಮ್ಮ ಗಂಡನೊಂದಿಗೆ ನೀವು ಸಂತೋಷವಾಗಿ ಇರುತ್ತೀರಾ? ಅಥವಾ ಇಲ್ಲವೇ? ಎಂಬುದನ್ನು ನೀವೇ ಕೇಳಿಕೊಳ್ಳಿ ಎಂದಿದ್ದಾರೆ. ಅಲ್ಲದೆ, ನಿಮ್ಮ ಇಷ್ಟದಂತೆ ಬದುಕಲು ಸ್ವಪ್ರೇಮ ಹಾಗೂ ಸ್ವಕಾಳಜಿ ಬಹಳ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಯುವತಿಗೆ ಸಲಹೆ ನೀಡಿದ್ದಾರೆ.
ಶ್ರೀಜಾ ಅವರ ಉತ್ತರ ನೋಡಿದ ನೆಟ್ಟಿಗರು ಇದು ಅವರ ವೈಯಕ್ತಿಕ ಜೀವನದ ಪ್ರತಿಬಿಂಬವಾಗಿದೆ. ತಮ್ಮದೇ ಅನುಭವದಲ್ಲಿ ಈ ಸಲಹೆಯನ್ನು ಶ್ರೀಜಾ ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶ್ರೀಜಾ ಅವರು ತಮ್ಮ ವೃತ್ತಿ ಬದುಕಿನಲ್ಲಿ ಇನ್ನಷ್ಟು ಬೆಳೆಯಬೇಕಾದರೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. (ಏಜೆನ್ಸೀಸ್)
ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್ ನಾರಾಯಣ್ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!
ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್ ಖಚಿತಪಡಿಸಿದ ನಟಿ