More

  ಈ ರೀತಿ ಹೇಳಲು ನಿನಗೆ ಯಾವ ಹಕ್ಕಿದೆ!? ಎಬಿ ಡಿವಿಲಿಯರ್ಸ್​ ವಿರುದ್ಧ ಗೌತಮ್​ ಗಂಭೀರ್ ವಾಗ್ದಾಳಿ​

  ನವದೆಹಲಿ: ಟೀಮ್​ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಿ ಕಳೆದ ವರ್ಷದವರೆಗೆ ಲಖನೌ ಸೂಪರ್‌ಜೈಂಟ್ಸ್‌ (ಎಲ್​ಎಸ್​ಜಿ) ತಂಡದ ಮೆಂಟರ್​ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್​) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್​ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸಿದರು. ಸುನೀಲ್ ನಾರಾಯಣ್ ಅವರನ್ನು ಆರಂಭಿಕರಾಗಿ ಕಳುಹಿಸುವುದು ಮತ್ತು ಸತತ ವೈಫಲ್ಯಗಳ ನಡುವೆಯೂ ಮಿಚೆಲ್ ಸ್ಟಾರ್ಕ್ ಅವರನ್ನು ಮುಂದುವರಿಸುವುದು ಮುಂತಾದ ಅವರ ನಿರ್ಧಾರಗಳಿಂದ ತಂಡವು ಸತತ ಗೆಲುವಿನೊಂದಿಗೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್​ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ವಿರುದ್ಧ ಗಂಭೀರ್​ ಆಕ್ರೋಶ ಹೊರಹಾಕಿದ್ದಾರೆ. ಈ ಮಾತನಾಡಲು ಎಬಿಡಿಗೆ ಯಾವ ಹಕ್ಕಿಗೆ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

  ಇತ್ತೀಚೆಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಡಿವಿಲಿಯರ್ಸ್ ಟೀಕಿಸಿದ್ದರು. ಪಾಂಡ್ಯ ಅವರಲ್ಲಿ ಸ್ವಹಿರಿಮೆ ಅಥವಾ ಅಹಂ ಎದ್ದು ಕಾಣುತ್ತಿದೆ. ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯರು ತಂಡದಲ್ಲಿದ್ದಾಗ ಈ ರೀತಿ ವರ್ತಿಸುವುದು ಸೂಕ್ತವಲ್ಲ ಎಂದು ಹಾರ್ದಿಕ್​ಗೆ ಡಿವಿಲಿಯರ್ಸ್​ ಸೂಚಿಸಿದರು.

  ಅನುಭವಿ ಆಟಗಾರರಿಂದ ಸಲಹೆ, ಸೂಚನೆ ಪಡೆದು ತಂಡವನ್ನು ಮುನ್ನಡೆಸುತ್ತಿಲ್ಲ. ಧೋನಿಯಂತೆ ನಾಯಕತ್ವ ಮಾಡಲು ನೋಡುತ್ತಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್​ನಲ್ಲಿ ಅದು ವರ್ಕೌಟ್ ಆಗಿಲ್ಲ ಎಂದು ಹಾರ್ದಿಕ್​ ನಾಯಕತ್ವದ ಬಗ್ಗೆ ಡಿವಿಲಿಯರ್ಸ್​ ಟೀಕಾ ಪ್ರಹಾರ ನಡೆಸಿದ್ದರು.

  ಎಬಿಡಿಯವರ ಈ ಕಾಮೆಂಟ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಇತ್ತೀಚೆಗೆ ಸ್ಪೋರ್ಟ್ಸ್​ಕೀಡಾ ಕ್ರಿಕೆಟ್​ನ ಸಂದರ್ಶನದಲ್ಲಿ ಪ್ರಶ್ನಿಸಿದಾಗ ಗೌತಮ್​ ಗಂಭೀರ್​, ಎಬಿಡಿ ವಿರುದ್ಧ ಕೆಂಡಮಂಡಲರಾದರು. ಹಾರ್ದಿಕ್ ಬಗ್ಗೆ ಆ ರೀತಿ ಮಾತನಾಡಲು ಡಿವಿಲಿಯರ್ಸ್‌ಗೆ ಯಾವ ಹಕ್ಕಿದೆ ಎಂದು ಗೌತಿ ಪ್ರಶ್ನಿಸಿದರು. ಹಾರ್ದಿಕ್​ ನಾಯಕತ್ವ ನಿಷ್ಪ್ರಯೋಜಕ ಎಂದು ಹೇಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು. ಐಪಿಎಲ್​ನಲ್ಲಿ ರನ್ ಗಳಿಸಿದ್ದು ಬಿಟ್ಟರೆ ಎಬಿಡಿ ಏನನ್ನೂ ಸಾಧಿಸಿಲ್ಲ. ಹೀಗಿರುವಾಗ ಪಾಂಡ್ಯ ಅವರನ್ನು ಟೀಕಿಸುವುದಾದರೂ ಹೇಗೆ ಎಂದು ಗೌತಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹಾರ್ದಿಕ್​ ಪಾಂಡ್ಯರನ್ನು ಟೀಕಿಸಿದ ಕೆವಿನ್​ ಪಿಟರ್ಸನ್​ ವಿರುದ್ಧವೂ ಗೌತಿ ಕಿಡಿಕಾರಿದ್ದಾರೆ.

  ಅವರೇ ನಾಯಕತ್ವ ವಹಿಸಿದ ಸಂದರ್ಭದಲ್ಲಿ ಅವರ ಸ್ವಂತ ಪ್ರದರ್ಶನ ಹೇಗಿತ್ತು? ಕೆವಿನ್ ಪೀಟರ್ಸನ್ ಅಥವಾ ಎಬಿ ಡಿವಿಲಿಯರ್ಸ್ ಅವರ ವೃತ್ತಿಜೀವನದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಸಮಯದಲ್ಲಿ ಉತ್ತಮ ಪ್ರದರ್ಶನಗಳು ನಡೆದಿವೆ ಎಂದು ನಾನು ಭಾವಿಸುವುದೇ ಇಲ್ಲ. ಹೇಳಲು ಇಲ್ಲಿ ಏನೂ ಇಲ್ಲ. ನೀವು ಅವರ ದಾಖಲೆಗಳನ್ನು ನೋಡಿದರೆ, ಇತರ ಯಾವುದೇ ನಾಯಕರಿಗಿಂತ ತುಂಬಾ ಕೆಟ್ಟದಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ವೈಯಕ್ತಿಕ ಪ್ರದರ್ಶನಗಳನ್ನು ಹೊರತುಪಡಿಸಿ ತಂಡದೊಂದಿಗೆ ಏನನ್ನೂ ಸಾಧಿಸಲು ವಿಫಲರಾಗಿದ್ದಾರೆ ಎಂದು ಗೌತಿ ದಿಟ್ಟ ಹೇಳಿಕೆ ನೀಡಿದರು.

  ಇಲ್ಲಿ ತಜ್ಞರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಅವರು ಏನೇನೋ ಹೇಳುತ್ತಲೇ ಇರುತ್ತಾರೆ. ನಾನೂ ಕೂಡ ಅದನ್ನೇ ಹೇಳುತ್ತೇನೆ. ಮುಂಬೈ ಇಂಡಿಯನ್ಸ್ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದರೆ, ಹಾರ್ದಿಕ್ ಪಾಂಡ್ಯ ಅವರನ್ನು ಎಲ್ಲಾ ತಜ್ಞರು ಮೆಚ್ಚುತ್ತಿದ್ದರು. ಆದರೆ, ಮುಂಬೈ ಸತತ ಪಂದ್ಯಗಳಲ್ಲಿ ಸೋತಿರುವ ಕಾರಣ ಅವರನ್ನು ಟೀಕಿಸಲಾಗುತ್ತಿದೆ. ಮತ್ತೊಂದು ಫ್ರಾಂಚೈಸಿಯಿಂದ ಬಂದಿರುವ ಪಾಂಡ್ಯಗೆ ನೆಲೆ ನಿಲ್ಲಲು ಸ್ವಲ್ಪ ಸಮಯ ನೀಡಬೇಕು. ಆದರೆ ಅವರನ್ನು ಟೀಕಿಸಲು ಡಿವಿಲಿಯರ್ಸ್ ಮತ್ತು ಪೀಟರ್ಸನ್​ಗೆ ಯಾವ ಹಕ್ಕಿದೆ? ಇವರಿಬ್ಬರೂ ಐಪಿಎಲ್‌ನಲ್ಲಿ ಸಾಧಿಸಿದ್ದೇನು? ಅವರು ವೈಯಕ್ತಿಕವಾಗಿ ಉತ್ತಮವಾಗಿ ರನ್ ಮಾಡಿದ್ದಾರೆ ಹೊರತು ನಾಯಕರಾಗಿ ಏನು ಮಾಡಿದ್ದಾರೆ. ಅವರ ಸಾಧನೆ ಏನೂ ಇಲ್ಲ ಎಂದು ಗಂಭೀರ್ ಟೀಕಿಸಿದರು.

  ಎಬಿ ಡಿವಿಲಿಯರ್ಸ್​ ಕುರಿತು ಗೌತಮ್​ ಗಂಭೀರ್​ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮಗೆ ತಿಳಿಸಿ. (ಏಜೆನ್ಸೀಸ್​)

  ರೋಹಿತ್​, ಕೊಹ್ಲಿಯಲ್ಲ ಡೇವಿಡ್​ ಮಿಲ್ಲರ್​ಗೆ ಟೀಮ್​ ಇಂಡಿಯಾದ ಈ ಆಟಗಾರನನ್ನು ಕಂಡರೆ ತುಂಬಾ ಭಯವಂತೆ!

  ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!

  ಇದು ಆತನಿಗೆ ಮಾತ್ರ ಸೇರಿದ್ದು! ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್ ಕಾಮೆಂಟ್​ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts