More

    ಐಪಿಎಲ್-17: ಲಖನೌ ವಿರುದ್ಧ ಬೃಹತ್ ಗೆಲುವು ದಾಖಲಿಸಿದ ಕೆಕೆಆರ್, ಅಗ್ರಸ್ಥಾನಕ್ಕೆ ಲಗ್ಗೆ

    ಲಖನೌ: ಆಲ್ರೌಂಡರ್ ಸುನೀಲ್ ನಾರಾಯಣ್ (81 ರನ್, 39 ಎಸೆತ, 6 ಬೌಂಡರಿ, 7 ಸಿಕ್ಸರ್ ಹಾಗೂ 22ಕ್ಕೆ 1) ಅಮೋಘ ನಿರ್ವಹಣೆಯ ಬಲದಿಂದ ರನ್ ಮಳೆಹರಿಸಿದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-17ರ ತನ್ನ 11ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ 98 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಜತೆಗೆ ಪ್ಲೇ ಆ್ ಸನಿಹಕ್ಕೇರಿದೆ. ಸೋಲಿನೊಂದಿಗೆ ಕೆಎಲ್ ರಾಹುಲ್ ಪಡೆ 5ನೇ ಸ್ಥಾನಕ್ಕೆ ಕುಸಿದಿದ್ದು,ರನ್‌ರೇಟ್‌ನಲ್ಲಿಯೂ ಹಿನ್ನಡೆ ಅನುಭವಿಸಿದೆ.

    ಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, ಫಿಲ್ ಸಾಲ್ಟ್ (32) ಹಾಗೂ ಸುನೀಲ್ ನಾರಾಯಣ್ ಒದಗಿಸಿದ ಬಿರುಸಿನ ಆರಂಭ ಹಾಗೂ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳ ಉಪಯುಕ್ತ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 235 ರನ್ ಪೇರಿಸಿತು. ಚೇಸಿಂಗ್‌ನಲ್ಲಿ ವರುಣ್ ಚಕ್ರವರ್ತಿ (30ಕ್ಕೆ 3) ಹಾಗೂ ಹರ್ಷಿತ್ ರಾಣಾ (24ಕ್ಕೆ 3) ದಾಳಿಗೆ ತತ್ತರಿಸಿದ ಲಖನೌ, 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು.

    ಲಖನೌ ಬ್ಯಾಟಿಂಗ್ ವೈಲ್ಯ : ಬೃಹತ್ ಸವಾಲು ಬೆನ್ನತ್ತಿದ್ದ ಲಖನೌ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಅರ್ಷಿನ್ ಕುಲಕರ್ಣಿ (9), ರಮಣ್‌ದೀಪ್ ಸಿಂಗ್ ಪಡೆದ ಅದ್ಭುತ ಕ್ಯಾಚ್‌ಗೆ ಡಗೌಟ್ ಸೇರಿದರು. ನಾಯಕ ರಾಹುಲ್ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (36) ಚೇಸಿಂಗ್‌ಗೆ ಬಲ ತುಂಬಿದರು. ರಾಹುಲ್ ನಿರ್ಗಮನದ ಬಳಿಕ ಸ್ಟೋಯಿನಿಸ್, ದೀಪಕ್ ಹೂಡಾ (5), ನಿಕೋಲಸ್ ಪೂರನ್ (10) ಹಾಗೂ ಆಯೂಷ್ ಬಡೋನಿ (15) ವಿಕೆಟ್ ಕಳೆದುಕೊಂಡ ಲಖನೌ ಯಾವುದೇ ಹಂತದಲ್ಲಿ ಪ್ರತಿರೋಧ ತೋರಲಿಲ್ಲ. ಚಕ್ರವರ್ತಿ, ರಾಣಾಗೆ ಬೌಲಿಂಗ್‌ನಲ್ಲಿ ಆಂಡ್ರೆ ರಸೆಲ್ (17ಕ್ಕೆ 2) ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts